ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕಿನಾದ್ಯಂತ ಇರುವ ವಿಕಲಚೇತನರಿಗೆ ಉದ್ಯೋಗ ತರಬೇತಿ ನೀಡಿ ನಂತರ ಎಲ್ಲರಿಗೂ ಉದ್ಯೋಗವನ್ನು ಕೂಡ ನೀಡುವ ಮೂಲಕ ವಿಕಲಚೇತನರ ಸಬಲೀಕರಣಕ್ಕೆ ಯೋಜನೆಯನ್ನು ರೂಪಿಸಲಾಗಿದೆ ಎಂದು ಎಸಿಡಿಪಿಒ ಮೀನಾಕ್ಷಿ ಪಾಟೀಲ್ ತಿಳಿಸಿದರು.
ನಗದರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಎಂಬ ಸಂಸ್ಥೆಯು ವಿಕಚೇತನರಿಗೆ ಉದ್ಯೋಗ ವದಗಿಸುವ ಮೂಲಕ ರಾಜ್ಯದಲ್ಲಿ ಕಳೆದ ೫ ದಶಕಗಳಿಂದ ಕೆಲಸ ಮಾಡುತ್ತಿದೆ. ಅದರಂತೆ ಈಗ ನಮ್ಮ ಸುರಪುರ ಹಾಗು ಹುಣಸಗಿ ತಾಲೂಕಿನ ಎಲ್ಲಾ ೪೨ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಕಲಚೇತನರಿಗೆ ಉದ್ಯೋಗ ನೀಡಲು ಎಪಿಡಿ ಸಂಸ್ಥೆ ಮುಂದೆ ಬಂದಿದ್ದು, ನಮ್ಮ ತಾಲೂಕಿನ ಎಲ್ಲಾ ವಿಕಲಚೇತನರು ಫೇಬ್ರವರಿ ೧೫ನೇ ತಾರೀಖು ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆಯುವ ತರಬೇತಿ ಆಯ್ಕೆ ಸಭೆಗೆ ಹಾಜರಾಗಬೇಕು.
ಅಂದು ನಡೆಯುವ ತರಬೇತಿ ನೇಮಕಾತಿಯಲ್ಲಿ ಆಯ್ಕೆಯಾದವರ ಆಸಪ್ತಿ ಅನುಗುಣವಾಗಿ ತರಬೇತಿಯನ್ನು ನೀಡಿ ನಂತರ ಉದ್ಯೋಗವನ್ನು ನೀಡಲಾಗುವುದು ಆದ್ದರಿಂದ ಎಲ್ಲಾ ಆಸಕ್ತ ವಿಕಲಚೇತನರು ಫೆಬ್ರವರಿ ೧೫ರ ಆಯ್ಕೆ ಸಭೆಗೆ ಬರುವಂತೆ ಹಾಗು ಎಲ್ಲಾ ನಮ್ಮ ಗ್ರಾಮೀಣ ಹಾಗು ನಗರ ಪುನರ್ವಸತಿ ಕಾರ್ಯಕರ್ತರು ವಿಕಚೇತನರಿಗೆ ಮಾಹಿತಿ ನೀಡಿ ಕರೆದುಕೊಂಡು ಬರುವಂತೆ ತಿಳಿಸಿದರು.
ಸಭೆಯ ವೇದಿಕೆ ಮೇಲೆ ಎಪಿಡಿ ಸಂಸ್ಥೆಯ ನೇಮಕಾತಿ ಅಧಿಕಾರಿ ಶಿವಯೋಗೆಪ್ಪ ಹಾಗು ವಿವಿದುದ್ದೇಶ ಪುನರ್ವಸತಿ ಕಾರ್ಯಕರ್ತ ಮಾಳಪ್ಪ ಪೂಜಾರಿ ಹಾಗು ಎಲ್ಲಾ ೪೮ ಜನ ಪುನರ್ವಸತಿ ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.