ರುಕ್ಮಾಪುರ ಗ್ರಾಮದಲ್ಲಿ ಭರತ ನಾಟ್ಯ ನೃತ್ಯ ಕಲಾ ಪ್ರದರ್ಶನ

0
75

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಖಾಸ್ಗತೇಶ್ವರ ಸಾಂಸ್ಕೃತಿಕ ನೃತ್ಯ ಕಲಾ ಸಂಸ್ಥೆಯ ವತಿಯಿಂದ ಭರತ ನಾಟ್ಯ ಹಾಗು ಜಾನಪದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರುಕ್ಮಾಪುರ ಹಿರೇಮಠ ಸಂಸ್ಥಾನದ ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಭಾರತೀಯ ಪರಂಪರೆಯಲ್ಲಿ ಭರತ ನಾಟ್ಯ ಮತ್ತು ಜಾನಪದ ನೃತ್ಯಕ್ಕೆ ವಿಶಿಷ್ಟ ಸ್ಥಾನವಿದೆ.ಸಂಗೀತಕ್ಕೆ ಜಗತ್ತಿನಲ್ಲಿ ಸೋಲದ ಮನಸ್ಸಿಲ್ಲ,ಅಂತಹ ಶಕ್ತಿ ಸಂಗೀತಕ್ಕಿದೆ,ಜಗತ್ತಿನಲ್ಲಿ ಎಲ್ಲರಿಗೂ ತಿಳಿಯುವ ಏಕಮಾತ್ರ ಭಾಷೆ ಎಂದರೆ ಅದು ಸಂಗೀತವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್,ಸಂಸ್ಥೆಯ ಸಂಚಾಲಕ ಅನಿಕುಮಾರ ಜಿ.ಕೆ ಹಾಗು ಅತಿಥಿಗಳಾಗಿದ್ದ ರಾಘವೇಂದ್ರ ಭಕ್ರಿ ಮಾತನಾಡಿದರು.

ನಂತರ ಖಾಸ್ಗತೇಶ್ವರ ನೃತ್ಯ ಕಲಾ ಸಂಸ್ಥೆಯ ಅನೇಕ ಮಕ್ಕಳು ನೃತ್ಯ ಪ್ರದರ್ಶನವನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಈರಣ್ಣ ಪೂಜಾರಿ ರವೀಂದ್ರ ಬಡಗಾ ಆನಂದ ಗೋಗಿ ಸುರೇಶ ಚೆಟ್ಟಿ ಬಸವರಾಜ ಯಾಳಗಿ ಅಂಬ್ರೇಶ ಚಿಲ್ಲಾಳ ಮಹಾಂತೇಶ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here