ಕಲಬುರಗಿ: ಕರ್ನಾಟಕ ಜಾನಪದ ಅಕಾಡಮಿ ನೀಡುವ 2019ನೇ ಸಾಲಿನ ವಿಚಾರ ವಿಮರ್ಶೆ ಸಂಶೋಧನ ವಿಭಾಗದ ಪುಸ್ತಕ ಪ್ರಶಸ್ತಿಗೆ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರ ಜಾನಪದ ಜ್ಞಾನ- ವಿಜ್ಞಾನ ಕೃತಿ ಆಯ್ಕೆಯಾಗಿದೆ.
ಪ್ರಶಸ್ತಿಯು 25,000 ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಫೆಬ್ರುವರಿ 7 ರಂದು ಚಾಮರಾಜ ನಗರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ..
ಪ್ರಶಸ್ತಿಗೆ ಹರ್ಷ: ಪ್ರೊ . ಪೋತೆ ಅವರಿಗೆ ಅಕಾಡೆಮೆ ಪ್ರಶಸ್ರಿಗೆ ಆಯ್ಕೆಯಾಗಿದ್ದಕ್ಕೆ ಡಾ. ಶ್ರೀಶೈಲ ನಾಗರಾಳ, ಸಂಗಣ್ಣ ಹೊಸಮನಿ, ಡಾ. ಶಿವರಂಜನ್ ಸತ್ಯಂಪೇಟೆ, ಮಹಿಪಾಲರೆಡ್ಡಿ ಮುನ್ನೂರ್, ಎಂ.ಬಿ. ಕಟ್ಟಿ, ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ ಮುಂತಾದವರು ಹರ್ಷ ವ್ಯಕ್ತಪಡಿಸಿದ್ದಾರೆ.