ಮೀನು ಪ್ರಿಯರಿಗೆ ಸಂತಸದ ಸುದ್ದಿ – ಕರೋನಾ ನಂತರದ ಮೊದಲ ಸೀ ಫುಡ್‌ ಫೆಸ್ಟಿವಲ್‌ ಕೋಸ್ಟಲ್ ಆರಂಭ

0
68

ಬೆಂಗಳೂರು: ಕರೋನಾ ಲಾಕ್‌ಡೌನ್‌ನಿಂದಾಗಿ ಯಾವುದೇ ಫುಡ್‌ ಫೆಸ್ಟಿವಲ್‌ಗಳು ಆಯೋಜನೆ ಆಗಿರಲಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಫೆಬ್ರವರಿ 1 ರಿಂದ ಫೆಬ್ರವರಿ 28 ರ ವರಗೆ ಬೆಂಗಳೂರು ನಗರದ ರೆಸಿಡೆನ್ಸಿ ರಸ್ತೆಯ ಕೋಸ್ಟಲ್‌ ಮಚಲಿ ರೆಸ್ಟೊರೆಂಟ್‌ ನಲ್ಲಿ ಸೀ ಫುಡ್‌ ಫೆಸ್ಟಿವಲ್‌ ನ್ನು ಆಯೋಜಿಸಲಾಗಿದೆ.

ಲಾಕ್‌ ಡೌನ್‌ ಕಾರಣದಿಂದ ಯಾವುದೇ ಫುಡ್‌ ಫೆಸ್ಟಿವಲ್‌ಗಳು ಆಯೋಜನೆ ಆಗಿರಲಿಲ್ಲ. ಅದರಲ್ಲೂ ಮೀನಿನ ಖಾಧ್ಯಗಳ ಪ್ರಿಯರಿಗೆ ಒಮ್ಮೆಲೆ ಇಷ್ಟೊಂದು ಸೀ ಫುಡ್‌ ಗಳ ವೆರೈಟಿ ಯನ್ನು ಆಸ್ವಾದಿಸುವ ಅವಕಾಶವೂ ಲಬ್ಯವಿರಲಿಲ್ಲ. ಈ ಹಿನ್ನಲೆಯಲ್ಲಿ ನಗರದ ಮೀನು ಪ್ರಿಯರಿಗೆ ಕಡಿಮೆ ದರದಲ್ಲಿ ಅತ್ಯುತ್ತಮ ಸೀ ಫುಡ್‌ ಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ ಫೆಬ್ರವರಿ 1 ರಿಂದ 28 ರ ವರೆಗೆ ಸೀ ಫುಢ್‌ ಫೆಸ್ಟಿವಲ್‌ ಆಯೋಜಿಸಿದ್ದೇವೆ. ಈ ಸಂಧರ್ಭದಲ್ಲಿ ರೆಸ್ಟೋರೆಂಟ್‌ ಗೆ ಆಗಮಿಸುವ ಗ್ರಾಹಕರಿಗೆ ಒಂದು ಮೀನಿನ ಖಾಧ್ಯವನ್ನು ಉಚಿತವಾಗಿ ನೀಡಲಿದ್ದೇವೆ ಎಂದು ಕೋಸ್ಟಲ್‌ ಮಚಲಿಯ ಪಾಲುದಾರ ವಿನಯ್‌ ತಿಳಿಸಿದರು.

Contact Your\'s Advertisement; 9902492681

ಎಲ್ಲಾ ರೀತಿಯ ಸಮುದ್ರದ ಮೀನುಗಳು, ಕ್ರಾಬ್‌ಗಳು, ಸ್ಕ್ವಿಡ್ ಗಳು ಸೇರಿದಂತೆ ಕರಾವಳಿ ಶೈಲಿಯ ಇತರೆ ಮಾಂಸದ ಖಾದ್ಯಗಳು ಇಲ್ಲಿ ಲಭ್ಯವಿವೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ರೆಸ್ಟೋರೆಂಟ್‌ ನ ಪಾಲುದಾರರಾದ ಶಂಕರ್‌ ಶೆಟ್ಟಿ, ಹೋಟೇಲ್‌ ಉದ್ಯಮಿ ಜಯ ಎಸ್‌ ಶೆಟ್ಟಿ, ವಿನಯ್‌, ಗುತ್ತಿಗೆದಾರರಾದ ಮಹದೇವಪ್ಪ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here