“ದಹನ”ದಲಿತ ಲೋಕದ ತಲ್ಲಣಗಳ ಹೂರಣ: ಡಾ.ಮಾಂಗ್

0
40

ಕಲಬುರಗಿ: ದಹನ ಮರಾಠಿ ದಲಿತ ಆತ್ಮ ಕಥನವು ಲೇಖಕರೊಬ್ಬರ ವೈಯಕ್ತಿಕ ಬೇಗುದಿಯಾಗಿರದೇ ಇಡೀ ದಲಿತ ಸಮಾಜದ ತಲ್ಲಣಗಳ ಹೂರಣ ವಾಗಿದೆ ಎಂದು ಕೊರಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಭಾರಿ ಪ್ರಾಚಾರ್ಯ,ಕವಿ ಡಾ.ರಾಜಶೇಖರ ಮಾಂಗ್ ಹೇಳಿದರು.

ನಗರದ ಸಿದ್ಧಲಿಂಗೇಶ್ವರ ಬುಕ್ ಮಹಲನಲ್ಲಿ ನಡೆದ “ಅಟ್ಟದ ಮೇಲೆ ಬೆಟ್ಟದಂತ ವಿಚಾರ”ಪಾಕ್ಷಿಕ ಪುಸ್ತಕ ವಿಮರ್ಶೆ ಕಾರ್ಯಕ್ರಮದಲ್ಲಿ ಎಸ್.ಎಲ್.ಜಾಧವ ಬರೆದ ಮರಾಠಿಯ ದಹನ ದಲಿತ ಆತ್ಮಕತೆ ಕುರಿತು ಮಾತನಾಡುತ್ತಾ, ಚಂದ್ರಕಾಂತ ಪೋಕಳೆ ಯವರು ಮೂಲ ಲೇಖಕರ ಆಶಯಗಳಿಗೆ ಧಕ್ಕೆ ಬಾರದಂತೆ ಅಚ್ಚುಕಟ್ಟಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

Contact Your\'s Advertisement; 9902492681

ಮಾತಂಗ ಸಮಾಜದ, ರೀತಿ,ರಿವಾಜು,ಆಚಾರ,ವಿಚಾರ, ಮೌಢ್ಯ ಕುರಿತಲ್ಲದೇ ತಮ್ಮ ವೈಯಕ್ತಿಕ ಜೀವನದ ಅನೇಕ ಸಂಗತಿಗಳನ್ನು ಜಾಧವ್ ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಸೋಲ್ಲಾಪುರದ ಮಾತಂಗ ಕೇರಿಯಲ್ಲಿ ಹುಟ್ಟಿ ಬೆಳೆದ ಜಾಧವ ಅವರು ಗುಮಾಸ್ತ ನಿಂದ ಅಧಿಕಾರಿ ವರೆಗೆ ಕ್ರಮಿಸಿದ ದಾರಿ,ಅದರ ನಡುವಿನ ಏಳು ಬೀಳುಗಳನ್ನು ಯಥಾವತ್ತಾಗಿ ದಾಖಲಿಸಿದ್ದಾರೆ.ಜೀವನದಲ್ಲಿ ಬರುವ ಕಷ್ಟ ನಷ್ಟಗಳನ್ನು ಮೆಟ್ಟಿ ನಿಲ್ಲುವ ಪರಿಯನ್ನು ಮೆಲುಕು ಹಾಕುತ್ತಾ ಪ್ರತಿಯೊಬ್ಬರು ಕೀಳರಿಮೆಯಿಂದ ಹೊರಬರಬೇಕು.ಸಮ ಸಮಾಜ ನಿರ್ಮಾಣವಾಗಬೇಕೆಂದು ಹಂಬಲಿಸಿದ್ದಾರೆಂದು ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹುಮ್ನಾಬಾದ್ ಸಾಹಿತಿಗಳಾದ ಡಾ.ಗವಿಸಿದ್ದಪ್ಪ ಪಾಟೀಲ್ ಅವರು ಮಾತನಾಡಿ ನೊಂದವರ ನೋವಿನ ಕಥೆಗಳು ಇಂದು ಆತ್ಮಕಥನ ಗಳಾಗಿ ಹೆಚ್ಚೆಚ್ಚು ಬರುತ್ತಿರುವುದನ್ನು ನಾವು ಗಮನಿಸಬಹುದಾಗಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲದೆ ದಹನ ಕೃತಿಯಲ್ಲಿ ಎಲ್.ಎಸ್ ಜಾದವರ ವ್ಯಾಪಕ ಜೀವನದೃಷ್ಟಿ ಸಾಮಾಜಿಕತೆಯ ಪ್ರಭುದ್ಧ ಅರಿವು ಪ್ರಸಂಗ ಹಾಗೂ ಭಾವ ಸ್ಥಿತಿಯನ್ನು ಚಿತ್ರಿಸುವ ಸಾಮರ್ಥ್ಯ ಪ್ರಾಸಾದಿತ ಪ್ರ ಭಾಷಾಶೈಲಿ ನಿಸರ್ಗದ ಬಗೆಗಿನ ಸಂವೇದನಶೀಲತೆ ಎಲ್ಲ ಗುಣದಿಂದಾಗಿ ಅವರ ದಹನ ಆತ್ಮಕಥನವು ಪರಂಪರೆ ಮತ್ತಷ್ಟು ಸಮೃದ್ಧಗೊಳಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಕಾಶಕರಾದ ಬಸವರಾಜ ಕೊನೆಕ್ ರವರು ವಹಿಸಿಮಾತನಾಡಿ ಅಟ್ಟದ ಮೇಲೆ ಬೆಟ್ಟದಂತ ವಿಚಾರ ಕಾರ್ಯಕ್ರಮದಿಂದ ಈ ಭಾಗದ ಸಾಹಿತಿಗಳ ಪುಸ್ತಕಗಳನ್ನು ವಿಮರ್ಶೆ ಮಾಡಲಾಗುತ್ತದೆ ಇದು ತಿಂಗಳಿಗೆ ಎರಡು ಬಾರಿ ಆಯೋಜಿಸುವ ಕಾರ್ಯಕ್ರಮ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತಿಗಳು ಭಾಗವಹಿಸಲು ವಿನಂತಿಸಿಕೊಂಡರು ಮುಂದಿನ ವರ್ಷದಲ್ಲಿ ದಲಿತ ಆತ್ಮಕಥನಕ್ಕೆ ಸಂಬಂಧಿಸಿದಂತಹ ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಡಾ. ಮೀನಾಕ್ಷಿ ಬಾಳಿ,ಡಾ. ಶ್ರೀನಿವಾಸ್ ಸಿರನೂರಕರ್, ಚಿ. ಸಿ. ನಿಂಗಣ್ಣ, ಬಿ. ಎಚ್. ನಿರಗುಡಿ, ವಿಶ್ವನಾಥ್ ಭಕರೆ, ಕಾವ್ಯಶ್ರೀ ಮಹಾ ಗಾoವ್ಕರ್, ಸಿದ್ದಲಿಂಗದಬ್ಬಾ, ಸಿ.ಎಸ್ ಮಾಲಿಪಾಟೀಲ್, ಸಂಚಾಲಕರಾದ ಶಿವರಾಜ್ ಪಾಟೀಲ್ ಇದ್ದರು,ಡಾ.ಶರಣಬಸಪ್ಪ ವಡ್ಡನ ಕೇರಿ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here