ರೀಗನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಆರ್.ಡಿ.ಎ ಅದ್ದೂರಿ ಕಾರ್ಯಕ್ರಮ 

0
72

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಜನರ ಮೆಚ್ಚುಗೆಯನ್ನು ಪಡೆದ ಅತ್ಯುತ್ತಮ ರೀಗನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಶ್ರೀ ಕನಕಶ್ರೀ ಕನ್ವೆನ್ಷನ್ ಹಾಲ್ ಹೊಸಕೋಟೆ ಇಲ್ಲಿ RDA ಸಂಭ್ರಮ 2020-2021ರ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಈ ಒಂದು ಕಾರ್ಯಕ್ರಮದಲ್ಲಿ ರೀಗನ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಪೋಷಕರಿಗೆ ಹಾಗೂ ರೀಗನ್ ಡ್ಯಾನ್ಸ್ ಅಕಾಡೆಮಿಯ ಮಕ್ಕಳಿಗೆ ವಿವಿಧ ರೀತಿಯ ಆಟಗಳನ್ನು  ಆಡಿಸಲಾಯಿತು. ಜೊತೆಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರೀಗನ್ ಡ್ಯಾನ್ಸ್ ಅಕಾಡೆಮಿಯ ಸಂಸ್ಥಾಪಕರು ಹಾಗೂ ಮಾನವ ಹಕ್ಕುಗಳ ಕಾನೂನು ಮತ್ತು  ಸಾಮಾಜಿಕ ಕಲ್ಯಾಣಾಭಿವೃದ್ಧಿ ಇಲಾಖೆಯ ಕಲೆ ಮತ್ತು ಸಂಸ್ಕೃತಿಯ ರಾಜ್ಯಾಧ್ಯಕ್ಷರು ಆದ ರೀಗನ್.ಸಿ ರವರು ಮಾತನಾಡಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ.

ಜಾಗತೀಕರಣದ ಇಂದಿನ ದಿನಗಳಲ್ಲಿ ಮನುಷ್ಯ ತಾನು ಏನು ಮಾತನಾಡುತ್ತಿದ್ದಾನೆ ಎಂಬುದು ಅವನಿಗೆ ತಿಳಿಯದ ಸ್ಥಿತಿ ನಿರ್ಮಾಣಗೊಂಡಿದೆ. ಬದಲಾದ ಸನ್ನಿವೇಶದಲ್ಲಿ ನಾವುಗಳು ಟಿಕ್‍ಟಾಕ್ ಸಂಸ್ಕೃತಿಯಲ್ಲಿದ್ದೇವೆ. ನಮ್ಮ ಮಾತುಗಳೇನಿದ್ದರೂ ಮೊಬೈಲ್ ಹಾಗೂ ವಾಟ್ಸ್‌ ಆ್ಯಪ್‌ಗೆ ಸಿಮೀತಗೊಳ್ಳುತ್ತಿದೆ. ಪರಿಪೂರ್ಣ ವಿದ್ಯಾರ್ಥಿಗಳಾಗಬೇಕಾದರೆ ಪಠ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಅದಕ್ಕಾಗಿ ತಮ್ಮ ಮಕ್ಕಳ ಪ್ರತಿಭೆಯನ್ನು ಹೊರತೆಗೆಯಲು ರೀಗನ್  ಡ್ಯಾನ್ಸ್ ಅಕಾಡೆಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಪ್ರಥಮವಾಗಿದ್ದು, ಮಕ್ಕಳಿಗೆ ನೃತ್ಯದ ಜೊತೆಗೆ ಅವರಲ್ಲಿ ಅನೇಕ ರೀತಿಯ ಕೌಶಲ್ಯಗಳನ್ನು ಬೆಳೆಸುತ್ತಿದೆ. ಜೊತೆಗೆ ಸದಾ ನಿಮ್ಮ ಪ್ರೋತ್ಸಾಹಕ್ಕಾಗಿ ಕಾಯುತ್ತಿದೆ ಎಂದರು.

ಈ ಸುಂದರ ಕಾರ್ಯಕ್ರಮದಲ್ಲಿ ಕಲೆ ಮತ್ತು ಸಂಸ್ಕೃತಿ ಘಟಕದ ಜಿಲ್ಲಾಧ್ಯಕ್ಷರಾದ ವಿನೋದ್. ಸಿ ರವರು ಮಾತನಾಡಿ  RDA ಸಂಭ್ರಮದ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾಗಿ ಆಸಕ್ತಿ ಹುಟ್ಟುವಂತೆ ಪ್ರೇರೇಪಿಸುವ, ಸ್ಫೂರ್ತಿ ನೀಡುವ ಕಾರ್ಯಚಟುವಟಿಕೆಗಳನ್ನು ರೂಪಿಸಲಾಗಿದೆ. ಪುಟಾಣಿ ಮಕ್ಕಳ ತುಂಟಾಟಗಳನ್ನು ನೋಡುತ್ತಾ, ಅವರ ಮುಗ್ದತೆಗಳನ್ನು ಕಣ್ತುಂಬಿ ಕೊಳ್ಳುವುದೆಂದರೆ ಎಲ್ಲರಿಗೂ ಇಷ್ಟ. ಮಕ್ಕಳಲ್ಲಿ ದೇವರನ್ನು ಕಾಣುವ ಭಾರತೀಯರು ನಾವು, ನಮ್ಮ ಮಕ್ಕಳು ಏನು ಮಾಡಿದರೂ ಚೆನ್ನ ಆದ್ದರಿಂದಲೇ ಮಕ್ಕಳನ್ನು ಭವಿಷ್ಯದ ಕಲಾವಿದರನ್ನಾಗಿ ಮಾಡಲು ರೀಗನ್ ಡ್ಯಾನ್ಸ್ ಅಕಾಡೆಮಿ ಉತ್ತಮ ವೇದಿಕೆಯಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ರೀಗನ್. ಸಿ, ವಿನೋದ್. ಸಿ, ಶ್ರೀನಾಥ್. ಪಿ.ಎಂ, ಪವನ್ ಲಕ್ಕಿ, ಕಾಶಿ, ಭವಾನಿ. ಪಿ, ಭುವನ. ಪಿ, ಶ್ವೇತ. ಎಂ ಹಾಗೂ ರೀಗನ್ ಡ್ಯಾನ್ಸ್ ಅಕಾಡೆಮಿಯ ಎಲ್ಲಾ ಮಕ್ಕಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here