ಸುರಪುರ: ಇಲ್ಲಿಯ ಸುರಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಕಾಶ ಸಜ್ಜನ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಸರಕಾರದ ಅಧಿನ ಕಾರ್ಯದರ್ಶಿಗಳಾದ ಲತಾ.ಕೆ ಅವರು ಅಧಿಸೂಚನೆ ಹೊರಡಿಸಿದ್ದು ಸುರಪುರ ನಗರ ಯೋಜನಾ ಪ್ರಾಧಿಕಾರಕ್ಕೆ ಸರ್ಕಾರೇತರ ಅಧ್ಯಕ್ಷರನ್ನಾಗಿ ಪ್ರಕಾಶ ಸಜ್ಜನ್ ಹಾಗು ಸದಸ್ಯರುಗಳನ್ನಾಗಿ ವೀರಭದ್ರಪ್ಪ ಕುಂಬಾರ ತಿಮ್ಮಾಪುರ ವಿಜಯಕುಮಾರ ಚಿಟ್ಟಿ ಸುರಪುರ ಹಾಗು ರೀನಾ ಜಿತೇಂದ್ರಸಿಂಗ್ ಠಾಕೂರ್ ಸುರಪುರ ಅವರನ್ನು ನೇಮಕಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.