ಮನೆ ಕಳೆದುಕೊಂಡ ಬಡವರಿಗೆ ಮನೆಗಳನ್ನು ಕಲ್ಪಿಸಲಾಗುವುದು: ಪೌರಾಯುಕ್ತ ಜೀವನ್

0
34

ಸುರಪುರ: ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಂಗಂಪೇಟೆಯಲ್ಲಿನ ರಸ್ತೆ ಅಗಲೀಕರಣ ಕಾರ್ಯಾರಂಭವಾಗಿದೆ.ಕಳೆದ ಕೆಲ ದಿನಗಳಿಂದ ಎಲ್ಲೆಡೆ ವ್ಯಾಪಕ ಪ್ರಚಾರ ನಡೆಸಿ ರಸ್ತೆ ಅಗಲೀಕರಣದ ಅಂಗವಾಗಿ ರಸ್ತೆ ಬದಿಯಲ್ಲಿನ ಮನೆಗಳನ್ನು ತೆರವುಗೊಳಿಸಿಕೊಳ್ಳಿ ಇಲ್ಲವಾದಲ್ಲಿ ಫೆಬ್ರವರಿ 3 ರಿಂದ ನಗರಸಭೆ ವತಿಯಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವುದಾಗಿ ಪ್ರಚಾರ ಮಾಡಲಾಗಿತ್ತು.

ಅದರಂತೆ ಕಾರ್ಯಾಚರಣೆ ಆರಂಭಿಸಿದ ನಗರಸಭೆ ರಂಗಂಪೇಟೆಯ ಮಂಡಳ ಬಟ್ಟಿ ಬಳಿಯಲ್ಲಿನ ಆಟೋ ನಿಲ್ದಾಣದಿಂದ ರಸ್ತೆ ಅಗಲೀಕರಣಕ್ಕಾಗಿ ಜೆಸಿಬಿ ಯಂತ್ರಗಳ ಮೂಲಕ ತೆರವು ಆರಂಭಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ನಗರಸಭೆ ಅಧ್ಯಕ್ಷರಾದ ಸುಜಾತಾ ವೇಣುಗೋಪಾಲ ಜೇವರ್ಗಿಯವರು ಮಾತನಾಡಿ,ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಅನಿವಾರ್ಯವಾಗಿದ್ದು ಎಲ್ಲರು ಕೂಡ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಪೌರಾಯುಕ್ತ ಜೀವನ್ ಕುಮಾರ ಕಟ್ಟಿಮನಿ ಮಾತನಾಡಿ,ಈಗಾಗಲೇ ಗುರುತಿಸಿರುವಂತೆ ಒಟ್ಟು ನಲವತ್ತು ಅಡಿ ಅಗಲದ ರಸ್ತೆ ನಿರ್ಮಾಣದ ಅಂಗವಾಗಿ ರಸ್ತೆಯ ಮದ್ಯ ಭಾಗದಿಂದ ಎರಡು ಬದಿಗಳಲ್ಲಿ ಇಪ್ಪತ್ತು ಅಡಿಗಳ ಅಗಲದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ಆಟೋ ನಿಲ್ದಾಣದಿಂದ ಮರಗಮ್ಮ ದೇವಸ್ಥಾನ ಮಾರ್ಗವಾಗಿ ತಿಮ್ಮಾಪುರ ವರೆಗೆ ಹಾಗು ಅಲ್ಲಿಂದ ರಂಗಂಪೇಟೆ ಬಜಾರ ಮೂಲಕ ಮಾರುತಿ ದೇವಸ್ಥಾನದ ವರೆಗೆ ಒಟ್ಟು ಎರಡುವರೆ ಕಿಲೊ ಮೀಟರ್ ರಸ್ತೆ ಅಗಲೀಕರಣವಾಗಲಿದ್ದು,ತೆರವು ಕಾರ್ಯಾಚರಣೆ ನಂತರದಲ್ಲಿ ರಸ್ತೆ ಹಾಗು ಚರಂಡಿ ನಿರ್ಮಾಣವನ್ನು ಆರಂಭಿಸಲಾಗುವುದು ಇದಕ್ಕಾಗಿ ಒಟ್ಟು 5.52 ಕೋಟಿ ರೂಪಾಯಿಗಳ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ರಸ್ತೆ ಅಗಲೀಕರಣ ಸಂದರ್ಭದಲ್ಲಿ ತೀರಾ ಕಡುಬಡವರ ಮನೆಗಳು ತೆರವಾದಲ್ಲಿ ಅಂತವರಿಗೆ ಸರಕಾರದಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.

ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ರಂಗಂಪೇಟೆಯ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಕಾರ್ಯಾಚರಣೆಯನ್ನು ಆಶ್ಚರ್ಯಚಕಿತರಾಗಿ ವೀಕ್ಷಿಸುತ್ತಿರುವುದು ಕಂಡುಬಂತು.

ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕರಾದ ಯಲ್ಲಪ್ಪ ನಾಯಕ ನೈರ್ಮಲ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಕಂದಾಯ ನಿರೀಕ್ಷಕ ವೆಂಕಟೇಶ ಸಂಪನ್ಮೂಲ ವ್ಯಕ್ತಿ ಓಂಕಾರೆಪ್ಪ ಪೂಜಾರಿ ಕಿರಿಯ ಅಂಭಿಯತರರಾದ ಶಿವರಾಜ ಮಹೇಶ ಮಾಳಗಿ ಹಾಗು ನಗರಸಭೆ ಸದಸ್ಯರಾದ ಮಹ್ಮದ್ ಗೌಸ್ ಮುಖಂಡರಾದ ಸೋಮಶೇಖರ ಶಾಬಾದಿ ಅರುಣ ಪುಲ್ಸೆ ಕಾಲಿದ್ ಅಹ್ಮದ್ ತಾಳಿಕೋಟಿ ವಿಶ್ವನಾಥ ಅಂಬುರೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here