ಸುರಪುರ: ತಾಲೂಕಿನಲ್ಲಿ ಇದೇ ತಿಂಗಳು ವಲಯವಾರು ಗುರು ಸ್ಪಂದನ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ಬಾಕಿ ಇರುವ ಶಿಕ್ಷಕರ ವೇತನ ಹಾಗೂ ಹಿಂಬಾಕಿ ಪಾವತಿಸುವಂತೆ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗೋವಿಂದ ತನಿಕೇದಾರ ಮನವಿ ಮಾಡಿದ್ದಾರೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು ಜಿಲ್ಲಾಧ್ಯಕ್ಷರ ಮನವಿ ಮೇರೆಗೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಾಲೂಕುವಾರ ಗುರು ಸ್ಪಂದನ ಕಾರ್ಯಕ್ರಮ ಕೈಗೊಳ್ಳಲು ಆದೇಶಿಸಿದ್ದು ಈ ತಿಂಗಳು ದಿನಾಂಕಗಳನ್ನು ನಿಗದಿಪಡಿಸಿ ತಾಲೂಕಿನಲ್ಲಿ ವಲಯವಾರು ಗುರು ಸ್ಪಂದನ ಕಾರ್ಯಕ್ರಮ ಕೈಗೊಳ್ಳುವ ಮೂಲಕ ತಾಲೂಕಿನ ಶಿಕ್ಷಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಲ್ಲದೆ ತಾಲೂಕಿನಲ್ಲಿ ಹಲವಾರು ಎಸ್‌ಎಸ್‌ಎ ಮತ್ತು ನಾನ್‌ಪ್ಲ್ಯಾನ್ ಶಿಕ್ಷಕರ ಹಿಂಬಾಕಿ(ಅರಿಯರ‍್ಸ್) ಬಾಕಿ ಇದ್ದು ಕೂಡಲೇ ಈ ಎಲ್ಲಾ ಬಾಕಿ ಕಾರ್ಯಗಳನ್ನು ಪೂರ್ತಿಗೊಳಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಗೋನಾಲ,ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸದಸ್ಯ ಹಳ್ಳೆಪ್ಪ ಖಾಂಜಾಂಜಿ,ಗುರು ರಾಠೋಡ,ರಾಮಣ್ಣ ಪೂಜಾರಿ,ಮಲ್ಲಣ್ಣ ಮುದನೂರ,ರಹೀಮ್ ಹವಾಲ್ದಾರ,ನದಾಫ್‌ಇತರರಿದ್ದರು.