ಕಲಬುರಗಿ: ಪೆಟ್ರೊಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕಿರುವ ಮತ್ತು ಸೀಮೆ ಎಣ್ಣೆ ಹಾಗು ಎಲ್‌ಪಿಜಿ ಬೆಲೆ ಏರಿಕೆಯನ್ನು ಖಂಡಿಸಿ, ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ಎಸ್,ವಿ,ಪಿ ಸರ್ಕಲ್‌ನಲ್ಲಿ ಇಂದು ಪ್ರತಿಭಟನೆ ಮಾಡಲಾಯಿತ್ತು.
ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಎಚ್,ವಿ,ದಿವಾಕರ್ ಅವರು ಮಾತನಾಡಿ ಕೇಂದ್ರ ಸರ್ಕಾರದ ೨೦೨೧ನೆ ಇಸವಿಯ ಬಜೆಟ್, ಮುಂಬರುವ ೨೦೨೧ ಏಪ್ರಿಲ್‌ನಲ್ಲಿ ಆರಂಭವಾಗುವ ಆರ್ಥಿಕ ವರ್ಷದಲ್ಲಿ ಸೀಮೆ ಎಣ್ಣೆ ಮೇಲಿನ ಸಬ್ಸಿಡಿ ಪಾವತಿಗೆ ಯಾವುದೇ ಅವಕಾಶವನ್ನು ಒದಗಿಸಿಲ್ಲ. ಈ ಮೊದಲು, ೨೦೧೬ರಲ್ಲಿ ಸರ್ಕಾರವು ಹಂತ ಹಂತವಾಗಿ ಸಬ್ಸಿಡಿಯನ್ನು ಕಡಿತಗೊಳಿಸಲು, ಪ್ರತಿ ಹದಿನೈದು ದಿನಗಳಿಗೊಮ್ಮೆ ಸೀಮೆ ಎಣ್ಣೆ ಬೆಲೆಯನ್ನು ಪ್ರತಿ ಲೀಟರ್‌ಗೆ ೨೫ ಪೈಸೆ ಹೆಚ್ಚಿಸಲು ರಾಜ್ಯ ಮಾಲೀಕತ್ವದ ಇಂಧನ ರೀಟೇಲ್ ಸಂಸ್ಥೆಗಳಿಗೆ ಅವಕಾಶ ಒದಗಿಸಿತ್ತು. ಬಡಜನರ ಇಂಧನವಾದ ಸೀಮೆ ಎಣ್ಣೆಯ ಮೇಲೆ ಪಾಕ್ಷಿಕ ಬೆಲೆ ಏರಿಕೆಯ ಮೂಲಕ ಸಬ್ಸಿಡಿಯನ್ನು ಕಡಿತಗೊಳಿಸುತ್ತಿರುವುದು ಈಗಾಗಲೇ ಆರ್ಥಿಕವಾಗಿ ಜರ್ಜರಿತರಾಗಿರುವ ಬಡಜನರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.
ಈಗಾಗಲೆ ದೇಶದ ಜಿಡಿಪಿ ಕೆಳಗೆ ಬಿಳುತ್ತಿದೆ. ಜನರಿಗೆ ಉದ್ಯೋಗವಿಲ್ಲದೆ ಯುವಕರು ಅಲೆದಾಡುತ್ತಿದ್ದಾರೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಪೆಟ್ರೊಲ್ ಮತ್ತು ಡೀಸೆಲ್ ಬಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೇಲಾಗಿ, ಸಬ್ಸಿಡಿ ಬೆಲೆಯಲ್ಲಿ ದೊರಕುತ್ತಿದ್ದ ಅಡುಗೆ ಅನಿಲ(ಎಲ್‌ಪಿಜಿ)ದ ಬೆಲೆಯನ್ನು ಕೂಡ ಪ್ರತಿ ಸಿಲಿಂಡರ್‌ಗೆ ರೂ.೨ ಏರಿಸಲಾಗಿದೆ. ಕಾರ್ಪೊರೇಟ್‌ಗಳನ್ನು ತೃಪ್ತಿಪಡಿಸುವ ಮತ್ತು ಬಡವರಿಗೆ ಕನಿಷ್ಟ ಬೆಂಬಲ ಒದಗಿಸುವುದನ್ನು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಈ ನೀತಿಯು ಅದರ ಪ್ರತಿಯೊಂದು ಆರ್ಥಿಕ ಹೆಜ್ಜೆಯಲ್ಲೂ ಕಣ್ಣಿಗೆ ರಾಚುವಂತೆ ಕಾಣಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಬಂಡವಾಳಶಾಹಿಗಳ ಪರವಾಗಿ ಮತ್ತು ಜನ ಸಾಮನ್ಯರ ವಿರೋಧಿ ಬಜೆಟ್ ಆಗಿದೆ. ಸಾಮಾನ್ಯ ಜನರ ಇಂಧನಗಳ ಮೇಲಿನ ಸಬ್ಸಿಡಿಯು ಈ ಹಿಂದಿನಂತೆ ಮುಂದುವರಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ಬಿಜೆಪಿ ಸರ್ಕಾರದ ಈ ಜನವಿರೋಧಿಯಾದ ಮತ್ತು ಕಾರ್ಪೊರೇಟ್ ಪರ ಧೋರಣೆ ವಿರುದ್ಧ ಬೃಹತ್ ಸಮೂಹ ಆಂದೋಲಗಳನ್ನು ಸಂಘಟಿಸಬೇಕೆಂದು ಅವರು ಜನರಿಗೆ ಕರೆ ನೀಡಿದರು.
ನಂತರ ಪ್ರತಿಭಟನಾ ಸಭೆಯನ್ನು ಉದ್ದೇಸಿಸಿ ಕಾ ಮಹೇಶ ನಾಡಗೌಡರವರು ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರವು ಅತ್ಯಂತ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಪೆಟ್ರೊಲ್ ಮತ್ತು ಡೀಸೆಲ್ ಏರಿಕೆ ಮಾಡಿ ಎಲ್ಲ ವಸ್ತುಗಳ ಬೆಲೆ ಏರಿಕೆಗೆ ಅನುವು ಮಾಡಿಕೊಟಂತಾಗಿದೆ ಜನ ಸಮಾನ್ಯರು ಇನ್ನು ಮುಂದೆ ಜೀವನ ನಿರ್ವಹಣೆ ಮಾಡೋದು ತಂಬಾ ಕಷ್ಟವಾಗುತ್ತದೆ. ದೆಹಲಿಯಲ್ಲಿ ರೈತರು ಜನ ವಿರೋಧಿ ಕೃಷಿ ಮಸೂದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಹೋರಾಟ ನಡೆಸುತ್ತಿದ್ದಾರೆ ಆದರೆ ಸರ್ಕಾರ ಅವರ ಸಮಸ್ಯೆ ಪರಿಹರಿಸುತ್ತಿಲ್ಲ. ಯುವಕರು ಉದ್ಯೋಗಕಾಗಿ ಅಲೆದಾಡುತ್ತಿದ್ದಾರೆ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದಾರೆ ದೇಶದಲ್ಲಿ ಜನರು ಈಗಾಗಲೆ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ ಇದರ ಬಗ್ಗೆ ಸರ್ಕಾರಕ್ಕೆ ಯಾವುದೆ ಕಾಳಜಿ ಇಲ್ಲ. ಕೇವಲ ಬಂಡವಾಳಶಾಹಿಗಳ ಹಿತಸಕ್ತಿ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ. ಆದ್ದರಿಂದ ಇಂತ ಸರ್ಕಾರವನ್ನು ಸೋಲಿಸಲು ಜನರು ಹೋರಾಟಕ್ಕೆ ಸಜ್ಜಾಗಬೇಕೆಂದು ಅವರು ಹೇಳಿದ್ದರು.
ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯಾ ಸದಸ್ಯರಾದ ಕಾ ವಿ,ನಾಗಮ್ಮಾಳ್. ಕಾ ವಿ,ಜಿ ದೇಸಾಯ್. ಕಾ ಸೀಮಾ ದೇಶಪಾಂಡೆ. ಕಾ ಮಹೇಶ ಎಸ್,ಬಿ. ಹಾಗೂ ಹಣಮಂತ್ ಎಸ್,ಹೆಚ್ ರಾಧಾ ಜಿ. ಗೌರಮ್ಮ ಸಿ,ಕೆ. ಈರಣ್ಣ ಇಸಬಾ. ಸ್ನೇಹಾ ಕಟ್ಟಿಮನಿ. ಶಿಲ್ಪಾ ಬಿ,ಕೆ. ಪ್ರೀತಿ ದೊಡ್ಡಮನಿ. ಹರೀಶ್ ಸಂಗಾಣೆ. ಭೀಮು ಆಂದೊಲ. ನಾಗರಾಜ ರಾವೂರ್. ಈಶ್ವರ್ ಕುಂಬಾರ್. ಸೇರಿದಂತೆ ನೂರಾರು ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಿ.
ಪೆಟ್ರೊಲ್ ಡೀಸೆಲ್ ಬೆಲೆ ಏರಿಕೆಯನ್ನು ಮಾಡಿರುವ ಜನ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರದ ಘೋಷಣೆ ಕೂಗಿ, ಬೆಲೆ ಏರಿಕೆ ಹಿಂದಕ್ಕೆ ತೆಗೆದುಕೊಳಬೆಕೆಂದು ಸರ್ಕಾರಕ್ಕೆ ಆಗ್ರಹಿಸಿದರು.