ಶಿಕ್ಷಕೇತರ ಸಿಬ್ಬಂದಿಯವರ ಕೆಲಸ ಅತ್ಯಮೂಲ್ಯ: ಡಾ.ಹೆಚ್.ವಾಯ್.ಶ್ರೀಶಕುಮಾರ

0
21

ಕಲಬುರಗಿ : ಮಹಾವಿದ್ಯಾಲಯಗಳ ಎಲ್ಲಾ ಕೆಲಸಗಳು ಅರ್ಥಪೂರ್ಣವಾಗಿ ನಡೆಯಲು ಶಿಕ್ಷಕೇತರ ಸಿಬ್ಬಂದಿಯವರ ಕೆಲಸಗಳು ಅತ್ಯಮೂಲ್ಯವಾಗಿವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಹೆಚ್.ವಾಯ್.ಶ್ರೀಶಕುಮಾರ ತಿಳಿಸಿದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ ಮತ್ತು ಪ್ರಾದೇಶಿಕ ಜಂಟಿ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗೋದುತಾಯಿ ಮಹಾವಿದ್ಯಾಲಯದಲ್ಲಿ ಶಿಕ್ಷಕೇತರ ಸಿಬ್ಬಂದಿಯವರ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಹಾವಿದ್ಯಾಲಯಕ್ಕೆ ಬೋಧಕರು ಎಷ್ಟು ಮುಖ್ಯವೋ ಹಾಗೆಯೇ ಬೋಧಕೇತರರ ಕೆಲಸಗಳು ಅಷ್ಟೇ ಮುಖ್ಯವಾಗಿವೆ. ಮಹಾವಿದ್ಯಾಲಯದ ಆಡಳಿತ ಸುಗಮವಾಗಿ ಸಾಗಲು ಬೋಧಕೇತರ ಸಿಬ್ಬಂದಿಯವರ ಚುರುಕಾದ ಕಾರ್ಯ ಅವಶ್ಯಕ. ಸಿಬ್ಬಂದಿಯವರು ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಬೋಧಕೇತರ ಸಿಬ್ಬಂದಿಯವರು ಮಹಾವಿದ್ಯಾಲಯದ ಪ್ರಮುಖ ಅಂಗವಾಗಿದ್ದಾರೆ. ಅವರು ಪ್ರಾಚಾರ್ಯರೊಂದಿಗೆ ಸಹಕರಿಸುತ್ತಾ ಕಾರ್ಯನಿರ್ವಹಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಖಾಸಗಿ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಮಾತನಾಡಿ, ಶಿಕ್ಷಕೇತರ ಸಿಬ್ಬಂದಿಯವರಿಗೆ ಇಂತಹ ಕಾರ್ಯಗಾರ ಏರ್ಪಡಿಸಿರುವುದು ವಿನೂತನವಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದು ಅವಶ್ಯಕವಾಗಿದೆ. ಬೋಧಕೇತರ ಸಿಬ್ಬಂದಿಯವರ ಸಮಸ್ಯೆಗಳನ್ನು ಪರಿಹರಿಸಲು ತಾವು ಸದಾ ಸಿದ್ದರಾಗಿದ್ದೇವೆ ಎಂದರು.

ಮಹಾವಿದ್ಯಾಲಯ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೋಧಕೇತರ ಸಿಬ್ಬಂದಿಯವರಿಗೆ ಹೊಸ ಹೊಸ ವಿಷಯಗಳ ಕುರಿತು ತಿಳಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶರಣಬಸವೇಶ್ವರ ಸಂಸ್ಥಾನ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲು ಸದಾ ಮುಂಚೂಣಿಯಲ್ಲಿದೆ. ಬೋಧಕೇತರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಹಾವಿದ್ಯಾಲಯ ನ್ಯಾಕ್ ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ. ಇಂದಿರಾ ಶೆಟಕಾರ ಪ್ರಾಸ್ತಾವಿಕ ಮಾತನಾಡಿದರೆ, ಡಾ.ಸಿದ್ದಮ್ಮ ಗುಡೇದ್ ಸ್ವಾಗತಿಸಿದರು, ಶ್ರೀಮತಿ ಜಾನಕಿ ಹೊಸುರ ವಂದಿಸಿದರು. ಡಾ.ಪುಟ್ಟಮಣಿ ದೇವಿದಾಸ ನಿರೂಪಿಸಿದರು, ಸಂಗೀತ ವಿಭಾಗದ ಮುಖ್ಯಸ್ಥೆ ಡಾ.ಸೀಮಾ ಪಾಟೀಲ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಖಾಸಗಿ ಅಧ್ಯಾಪಕರ ಸಂಘದ ಉಪಾಧ್ಯಕ್ಷರಾದ ಪ್ರೊ.ನೀಲಕಂಠ ಕಣ್ಣಿ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ, ಕಾಲೇಜು ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾದ ರಾಜೇಂದ್ರ ಸಿಂಧೆ, ವೀರೇಶ ಎಂ.ಕ್ಷತ್ರೀಯ, ಎಲ್ಲಾ ಕಾಲೇಜುಗಳ ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಮಹಾವಿದ್ಯಾಲಯ ಶಿಕ್ಷಕೇತರ ಸಿಬ್ಬಂದಿ ವರ್ಗದವರಾದ ವಿನೋದಕುಮಾರ ಹಳಕಟ್ಟಿ, ಅಶೋಕ ಮೂಲಗೆ, ಅಪ್ಪಾರಾವ ಬಿರಾದಾರ, ಶ್ರೀಮತಿ ವಿದ್ಯಾ ರೇಷ್ಮಿ ಸಹಕರಿಸಿದರು. ಕಾರ್ಯಕ್ರಮದ ನಂತರ ಸೇವಾ ನಿಯಮಾವಳಿಗಳು, ಆಡಳಿತ ಮತ್ತು ಲೆಕ್ಕಪತ್ರ ನಿರ್ವಹಣೆ ಕುರಿತು ಗೋಷ್ಠಿಗಳು ನಡೆದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here