ಸುರಪುರ: ಸಗರನಾಡಿನ ದಕ್ಷಿಣ ಶ್ರೀ ಶೈಲ ಎಂದೇ ಪ್ರಸಿದ್ಧವಾದ ಶ್ರೀ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾದಾಸೋಯಿ ಕಲಬುರಗಿ ಶ್ರೀ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮ ಲಕ್ಷ್ಮೀಪುರದ ಶ್ರೀ ಮಠದಲ್ಲಿ ಕಡ್ಲೆಪ್ಪನವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಮ.ನಿ.ಪ್ರ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಪೂಜ್ಯರ ದಿವ್ಯ ಸಾನಿಧ್ಯದಲ್ಲಿ, ಲಕ್ಷ್ಮೀಪುರ ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಷ.ಬ್ರ. ಚನ್ನಮಲ್ಲಿಕಾರ್ಜುನ ಶಿವಚಾರ್ಯರ ನೇತ್ರತ್ವದಲ್ಲಿ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡರಾದ ಬಸವರಾಜಪ್ಪ ನಿಷ್ಠಿ ದೇಶಮುಖ ಅವರು ಅಧಯಕ್ಷತೆ ವಹಿಸಿದ್ದರು, ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸುರಪುರ ನಗರ ಸಭೆ ಅಧ್ಯಕ್ಷರು ಸುಜಾತಾ ವೇಣುಗೋಪಾಲ ನಾಯಕ, ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಸೂಗುರೇಶ ವಾರದ, ನಗರ ಸಭೆ ಉಪಾಧ್ಯಕ್ಷರಾದ ಮಹೇಶ ಪಾಟೀಲ ಸೂಗುರ, ಮುಖಂಡರಾದ ಸೂಗುರೇಶ ಮಡ್ಡಿ, ಚಂದ್ರಶೇಖರ ಡೋಣುರ, ಶಿವರಾಜ ಕಲಕೇರಿ, ವಾಸುದೇವ ನಾಯಕ ಬೈರಿಮಡ್ಡಿ, ಆನಂದ ಮಡ್ಡಿ, ಭಾಗೆಶ ಕಾಳಗಿ,ದೇವು ನಾಯಕ, ಪುರಾಣಿಕರು ಶಿವಲಿಂಗಯ್ಯ ಹೀರೇಮಠ, ರಾಜಶೇಖರ ಗೇಜ್ಜಿ ತಬಲಾವಾದಕರು, ಪ್ರಭುಕುಮಾರ ಮದರಿ ಗವಾಯಿಗಳು ಇದ್ದರು.