- ಬಸವರಾಜ ಸಿನ್ನೂರ
ಶಹಾಪುರ: ಕೇಂದ್ರ ಸರ್ಕಾರದ ಗ್ರಾಮೀಣ ಭಾಗದ ಯೋಜನೆಗಳಲ್ಲೊಂದಾದ ಉದ್ಯೋಗ ಖಾತ್ರಿ ಕೆಲಸ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾ್ರ ಸಂಘದ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ದವಲಸಾಬ್ ನದಾಫ್ ಹೇಳಿದರು.
ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿ ಮಾತನಾಡಿದರು ಈ ವರ್ಷ ಮಳೆಯೂ ಇಲ್ಲ ಬೆಳೆಯೂ ಇಲ್ಲ ಗ್ರಾಮೀಣ ಭಾಗದ ಕೃಷಿ ಕೂಲಿಕಾರರು ಇದರಿಂದ ಕಂಗಾಲಾಗಿದ್ದಾರೆ ಅವರ ನೋವು ವೇದನೆ ಎಂದು ಹೇಳಿದರು.
ಕಳೆದ ತಿಂಗಳಿನಲ್ಲಿ ಕೂಲಿಕಾರರ ಸಮಸ್ಯೆಗಳ ಕುರಿತು ೪ ಗ್ರಾಮ ಪಂಚಾಯಿತಿಗಳ ಮುಂದೆ ಪ್ರತಿಭಟನೆ ಮಾಡಿದರೂ ಪ್ರಯೋಜನೆಯಾಗಿಲ್ಲ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಯಾದಗಿರಿ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾದ ಮಲ್ಲಯ್ಯ ಪೊಲಂಪಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಶಹಾಪುರ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷರಾದ ಸವಿತಾ ಪೂಜಾರಿ. ಮಲ್ಲಮ್ಮ ಕೋಡ್ಲಿ,ಖಾಜಾಸಾಬ್ ಬೋನಾಳ, ಬಸವರಾಜ್ ಕಟ್ಟಿಮನಿ, ನಿಂಗಣ್ಣ ನಾಟೇಕಾರ, ಮಶಾಕ್ ಸಾಬ್, ಬಾಬುರಾವ್, ಹಾಗೂ ವಿವಿಧ ಹಳ್ಳಿಗಳಿಂದ ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿದ್ದರು.