ಕಲಬುರಗಿ: ನಗರದ ರಾಘವೇಂದ್ರ ಕಾಲೋನಿಯಲ್ಲಿರುವ ಗೌತಮ ವೆಲ್ಫೇರ್ ಸೊಸೈಟಿಯ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಎಐಸಿಸಿ ಅಧ್ಯಕ್ಷ ರಾಹುಲ ಗಾಂಧಿ ಅವರ ಜನ್ಮದಿನದ ನಿಮಿತ್ತ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ, ಕಮಕನೂರ ಗ್ರಾ.ಪಂ ಸದಸ್ಯ ಸಂದೇಶ ಕಮಕನೂರ, ರಾಜವಿ ಜಾನೆ, ಶರಣು ವಾರದ, ಶಿವಾನಂದ ಹೊನಗುಂಟಿ, ಸಿದ್ದಪ್ಪ ಹರಿಜನ, ಅಮರ ಶಿರವಾಳ, ಪಿಂಟು ಸುರ್ಯಪ್ರಕಾಶ, ಮಲ್ಲಿಕಾರ್ಜುನ್, ಮಲ್ಲಣಗೌಡ ಇದ್ದರು.