ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಬಸ್ ಓಡಿಸಿ

0
42

ಸುರಪುರ: ತಾಲೂಕಿನ ಗ್ರಾಮೀಣ ಭಾಗದಿಂ ಶಾಲಾ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಬಸ್ಸಿನ ಸೌಕರ್ಯವಿಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂzದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು ನಗರದ ಬಸ್ ಡಿಪೋ ಮುಂದೆ ಪ್ರತಿಭಟನೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು,ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳಿಗೆ ಗ್ರಾಮೀಣ ಭಾಗದಿಂದ ಆಗಮಿಸುತ್ತಾರೆ.ಈಗಾಗಲೇ ಶಾಲಾ ಕಾಲೇಜುಗಳು ಆರಂಭಗೊಂಡು ಒಂದುವರೆ ತಿಂಗಳಾಗಿದೆ,ಆದರೆ ಇದುವರೆಗೂ ಅನೇಕ ಗ್ರಾಮಗಳಿಗೆ ಬಸ್ ಓಡಿಸದ ಕಾರಣ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

Contact Your\'s Advertisement; 9902492681

ಇದಕ್ಕೆ ಸಾರೊಹೆ ಇಲಾಖೆಯೆ ನೇರ ಹೊಣೆಯಾಗಿದೆ,ತಾಲೂಕಿನ ಬೈರಿಮಡ್ಡಿ ಬಾದ್ಯಾಪುರ ಶೆಟ್ಟಿಕೇರಾ ದೊಡ್ಡಿ ಶೆಟ್ಟಿಕೇರಾ ಸೇರಿದಂತೆ ಅನೇಕ ಗ್ರಾಮಗಳಿಗೆ ಬಸ್ಸಿನ ಸೌಕರ್ಯವಿಲ್ಲದಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ ಆದ್ದರಿಂದ ಕೂಡಲೆ ಗ್ರಾಮೀಣ ಭಾಗಕ್ಕೆ ಬಸ್‌ಗಳನ್ನು ಆರಂಭಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಡಿಪೋ ಮುಂದೆ ಉಗ್ರ ಹೋರಾಟವನ್ನು ಎಬಿವಿಪಿಯಿಂದ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಘಟಕ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದರು.ಮುಖಂಡರಾ ಡಾ:ಉಪೇಂದ್ರ ನಾಯಕ ಸುಬೇದಾರ ಹುಲಗಪ್ಪ ಮುದನೂರ ನಾಗರಾಜ ಮಕಾಶಿ ಪರಮಗೌಡ ಮಕಾಶಿ ಕ್ಯಾತಪ್ಪ ಮೇದಾ ಮಹೇಶ ಹೆಮನೂರ ಭೀಮಾಶಂಕರ ಶೆಟ್ಟಿಗೇರಾ ಖಂಡಪ್ಪ ಶೆಟ್ಟಿಗೇರಾ ಮುರಳೀಧರ ವನದುರ್ಗ ಭೀಮಾಶಂಕರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here