ಮಾಲೂರು: ತಾಲ್ಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ಪುಟ್ಟ ಪೋರ ಕುಶಾಲ್.ಎನ್. ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ ಇದರಲ್ಲಿ ತನ್ನ ಹೆಸರು ನೋಂದಾಯಿಸಿಕೊಂಡಿದ್ದಾನೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಚೊಕ್ಕಂಡಹಳ್ಳಿ ಗ್ರಾಮದ ನಿವಾಸಿಗಳಾದ (ಕಾಕಣ್ಣ ನಾಗರಾಜ. ವಿ ಮತ್ತು ರತಿ .ವಿ ಇವರ ಪುತ್ರನಾದ ಕುಶಾಲ್.ಎನ್ 3 ವರ್ಷ 5 ತಿಂಗಳು ಈ ಪುಟ್ಟ ಬಾಲಕ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ ಸೇರುವ ಮೂಲಕ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಈ ಪೋರನು ನಮ್ಮ ರಾಷ್ಟ್ರೀಯ ಚಿಹ್ನೆಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳು, ಪ್ರಸಿದ್ಧ ವಿಜ್ಞಾನಿಗಳ ಹೆಸರುಗಳು, ವಚನಕಾರರ ಹೆಸರುಗಳು, ಶ್ಲೋಕಗಳು, ವಾರದ ದಿನಗಳು, ತಿಂಗಳುಗಳು, ಋತುಗಳು, ಕಾಲಗಳು, ಸಾಮಾನ್ಯ ಜ್ಞಾನದ ಪ್ರಶ್ನೆಗಳು, ತರಕಾರಿಗಳು, ಹಣ್ಣುಗಳು, ವಾಹನಗಳು, ಪ್ರಾಣಿಗಳು, ಇಂಗ್ಲೀಷ್ ವರ್ಣಮಾಲೆ, ಇಂಗ್ಲಿಷ್ ಪದಗಳ ಅರ್ಥವನ್ನು ಕನ್ನಡದಲ್ಲಿ ಹೇಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.
ಈ ಬಾಲಕನ ಸಾಧನೆಯನ್ನು
ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ ಆ ಸಂಸ್ಥೆಯು ಮೆಚ್ಚಿಕೊಂಡಿದೆ ಅಲ್ಲದೆ ಕುಶಾಲ್. ಎನ್. ಈ ಹುಡುಗನ ಸಾಧನೆಯನ್ನು ಎತ್ತಿ ತೋರಿಸಿದೆ.
ಈ ಪುಟ್ಟ ಬಾಲಕನ ಈ ಸಾಧನೆಗೆ ತಂದೆ ತಾಯಿಗಳು ಹಾಗೂ ಊರಿನ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ