ಆದಿ ಬಣಜಿಗ ಯುವ ವೇದಿಕೆ ಉದ್ಘಾಟನಾ ಸಮಾರಂಭ

0
56

ಕಲಬುರಗಿ: ಬಣಜಿಗ ಸಮಾಜ ಅಭಿವೃದ್ಧಿಯಾಗುವುದು ಅಗತ್ಯವಾಗಿದೆ ಎಂದು ಗೋರಚಿಂಚೋಳಿ ಸಿದ್ಧರಾಮೇಶ್ವರ ಮಠದ ಶ್ರೀ ಸಿದ್ಧರಾಮೇಶ್ವರ ಪಟ್ಟದೇವರು ಅಭಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಹೀರಾಪೂರ ಆದಿ ಬಣಜಿಗ ಯುವ ವೇದಿಕೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಸಮಾಜ ಅಭಿವೃದ್ಧಿಗೆ ಯುವ ಶಕ್ತಿ ಸಂಘಟಿತವಾಗುವುದು ಅಗತ್ಯವಾಗಿದೆ ಎಂದರು.

Contact Your\'s Advertisement; 9902492681

ಆದಿ ಬಣಜಿಗ ಸಮಾಜ ಅತ್ಯಂತ ಪುರಾತನ ಇತಿಹಾಸ ಹೊಂದಿದೆ. ಆದಿ ಕಾಲದಿಂದಲೂ ನಮ್ಮ ಸಮಾಜ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಅನೇಕ ಇತಿಹಾಸಗಳೇ ಸಾಕ್ಷಿಯಾಗಿದೆ. ಸರ್ಕಾರದ ಸೌಲಭ್ಯ ಪಡೆಯಬೇಕಾದರೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸಹೆ ನೀಡಿದರು.

ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಬಸವರಾಜ ಕೊನೇಕ್ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಸಾಮಾಜಿಕ ಜಾಲತಣದ ಪ್ರಮುಖ ಸಾಹೇಬಗೌಡ ಮೂಡಬೂಳ, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ರಾಜು ನವಲ್ದಿ, ಮುಖಂಡರಾದ ಗುರುರಾಜ ನಿಂಬಾಳ, ಶಿವಪುತ್ರಪ್ಪ ಬರುಡೆ, ರಾಜಶೇಖರ ಯಳಮೇಲಿ, ಪ್ರಕಾಶ ಮಾಲಿ ಪಾಟೀಲ್, ಶಿವಕುಮಾರ ಪದ್ಮಾಜಿ, ಶಿವಾನಂದ ಸಹುಕಾರ, ಸರಣಪ್ಪ ಯಳಮೇಲಿ ಕುಪೇಂದ್ರ ಬಿರಾದಾರ, ಚಂದ್ರಕಾಂತ ಪೊಲೀಸ್ ಪಾಟೀಲ್, ನಾಗೇಂದ್ರಪ್ಪ ಉಪಸ್ಥಿತರಿದ್ದರು.

ಹೀರಾಪೂರ ಆದಿ ಬಣಜಿಗ ಯುವ ವೇದಿಕೆಯ ನೂತನ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಗುರುಶಾಂತಪ್ಪ ಅಣ್ಣಾರಾವ ಪೋಲಿಸ್ ಪಾಟೀಲ, ಅಧ್ಯಕ್ಷ ಭೀಮಾಶಂಕರ ಎನ್.ಯಳಮೇಲಿ, ಉಪಾಧ್ಯಕ್ಷರಾದ ಮಂಜುನಾಥ ಅಣ್ಣಾರಾವ ಬಿರಾದಾರ, ಚಂದ್ರಕಾಂತ ಹಡಲಗಿ, ಬಸವರಾಜ ಪದ್ಮಾಜಿ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಮಲ್ಲಿಕಾರ್ಜುನ ಪದ್ಮಾಜಿ, ಹಣಮಂತ ರಾಜಾಪೂರ, ಸಹ ಕಾರ್ಯದರ್ಶಿಗಳಾದ ಶಿವಾನಂದ ವಾಡಿ, ಶಿವಾನಂದ ಎಗದರಗಿ, ಸಂತೋಷ ಬಡದಾಳ, ಖಜಾಂಚಿ ನೀಲಕಂಠ ನಂದರ್ಗಿ, ಕೋಶಾಧ್ಯಕ್ಷ ಮಹಾಂತೇಶ ಗುಡಪ್ಪ ಹಿರೋಳ್ಳಿ, ಪತ್ರಿಕಾ ಪ್ರತಿನಿಧಿ ಲಕ್ಷ್ಮೀಕಾಂತ ರಾಜಾಪೂರ ಇವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.

ಯುವ ವೇದಿಕೆ ಜಿಲ್ಲಾ ಗೌರವಧ್ಯಕ್ಷ ವಿಶ್ವನಾತ ಪಾಟೀಲ್ ಗೌನಳ್ಳಿ ಸ್ವಾಗತಿಸಿದರು. ಆನಂದ ಗೌಡ ಖಾನಾಪುರ ಪ್ರಾಸ್ತಾವಿಕ ಮಾತನಾಡಿದರು. ಬಾಬುರಾವ ಬಸವಂತವಾಡಿ ವಂದಿಸಿದರು. ಸಂಗೀತ ಶಿಕ್ಷಣ ಶಿವಶಂಕರ ಬಿರಾದಾರ ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here