ಕಲಬುರಗಿ: ಸೋಮವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾದ ಸಂತ ಸೇವಾಲಾಲರ 282ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮಾಜಿ ಸಚಿವರು ಹಾಗೂ ಬಂಜಾರಾ ಸಮಾಜದ ಮುಖಂಡರಾದ ರೇವು ನಾಯಕ್ ಬೆಳಮಗಿ ಮತ್ತು ಕಲಬುರಗಿಯ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ಅವರು ಸಂತ ಸೇವಾಲಾಲ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಬಂಜಾರ ಸಮಾಜದ ಮುಖಂಡರುಗಳಾದ ಆಹಾರ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ವಿಠ್ಠಲ ಚವ್ಹಾಣ, ಉಪ ತಹಶೀಲ್ದಾರ ಹೋಪ ಸಿಂಗ್, ಬಿ.ಎಸ್.ಎನ್.ಎಲ್ ನಿವೃತ್ತ ಡಿ.ಜಿ.ಎಂ ಬಲದೇವ ಸಿಂಗ್ ರಾಠೋಡ್, ಬಂಜಾರ ನೌಕರರ ಸಂಘದ ಸಂಸ್ಥಾಪಾಕ ಅಧ್ಯಕ್ಷ ಬಿ.ಬಿ. ನಾಯಕ್, ಶಿವರಾಂ ರಾಠೋಡ್, ಛತ್ರು ರಾಠೋಡ್, ಪಿ.ಜಿ ರಾಠೋಡ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೇವಾಲಾಲ್ ಜಯಂತಿ ಅಧ್ಯಕ್ಷ ಮಹೇಶ ನಾಯಕ, ಪ್ರ.ಕಾರ್ಯದರ್ಶೀ ಕೃಷ್ಣಾ ನಾಯಕ, ಸತೀಶ್ ರಾಠೋಡ, ರಾಕೇಶ ಚವ್ಹಾಣ, ಕಂಚು ಯುವರಾಜ ನಾಯಕ, ಬೊಗೇಶ ರಾಠೋಡ, ಈಶ್ವರ ರಾಠೋಡ, ಅವಿನಾಶ ಚವ್ಹಾಣ, ಆನಂದ ರಾಠೋಡ, ಧಮಂದರ, ಅಮರ, ಪ್ರಕಾಶ, ಪ್ರವಿಣ, ರಮೇಶ ಇದ್ದರು.