ಎಂ.ಎಸ್.ಅಯ್. ಕಾಲೇಜಿನಲ್ಲಿ ಸಂತ್ ಸೇವಾಲಾಲ್ ಜಯಂತಿ ಆಚರಣೆ

0
52

ಕಲಬುರಗಿ: ನಗರದ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್.ಆಯ್. ಕಾಲೇಜಿನಲ್ಲಿ ಇಂದು ಸಂತ್ ಸೇವಾಲಾಲ್ ರ 282ನೇ ಜಯಂತಿಯನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು.
ಸಂತ್ ಸೇವಾಲಾಲ್ ರ ಜೀವನದ ಕುರಿತು ಕನ್ನಡ ವಿಭಾಗದ ಮುಖ್ಯಸ್ತ್ರರಾದ ಶ್ರೀಮತಿ ಕವಿತಾ ಎಂ. ಅವರು ವಿಶೇಷ ಉಪನ್ಯಾಸ ಮಂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಎ. ಪಾಟೀಲರು ವಹಿಸಿಕೊಂಡು ಸಂತ್ ಸೇವಾಲಾಲ್ ಜೀವನದ ಕುರಿತು ಮಾತನಾಡಿದರು.

ಕಾರ್ಯಕ್ರಮದ ಆಯೋಜನೆಯನು ಕಾಲೇಜಿನ ಸಾಂಸ್ಕೃತಿಕ ಸಮಿತಿ ಮತ್ತು ಅಯ್.ಕ್ಯೂ.ಎ. ಸಿ. ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಪ್ರತಿಭಾ ಸಂಗಾಪುರಕರ ಅವರು ಮಾಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂಧಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here