ಉತ್ತಮ ಅರೋಗ್ಯಕ್ಕೆ ಓಟ ಅವಶ್ಯಕ: ಅಲೋಕ ಕುಮಾರ

0
49

ಕಲಬುರಗಿ: ಇಂದಿನ ಯಾಂತ್ರಿಕ ಜೀವನದಲ್ಲಿ ಉತ್ತಮ ಅರೋಗ್ಯ ಕಾಪಾಡಿಕೊಳ್ಳಲು ಓಟ ಅವಶ್ಯಕವಾಗಿದೆ ಎಂದು ಕೆ.ಎಸ್.ಆರ್.ಪಿ.ಯ ಎ.ಡಿ.ಜಿ.ಪಿ. ಅಲೋಕ ಕುಮಾರ ಹೇಳಿದರು.

ಮಂಗಳವಾರ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ಕಲಬುರಗಿಯ ಕೆ.ಎಸ್.ಆರ್.ಪಿ. 6ನೇ ಘಟಕದಿಂದ ಆಯೋಜಿಸಿದ ಅರೋಗ್ಯಕ್ಕಾಗಿ ಓಟ (ರನ್ ಫಾರ್ ಫಿಟನೆಸ್)ಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಕನಸನ್ನು ನನಸು ಮಾಡುವುದಕ್ಕಾಗಿ ಅರೋಗ್ಯಕ್ಕಾಗಿ ಓಟ (ರನ್ ಫಾರ್ ಫಿಟ್ನೆಸ್)ದಂತಹ ಯೋಜನೆಗಳನ್ನು ಏರ್ಪಡಿಸಲಾಗಿದೆ. ಅದೇ ರೀತಿ ಫಿಟ್ ಕಲಬುರಗಿ, ಫಿಟ್ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆ.ಎಸ್.ಆರ್.ಪಿ.ಯ 40 ವರ್ಷದೊಳಗಿನ ಸಿಬ್ಬಂದಿಗಳು ಕಡ್ಡಾಯವಾಗಿ ಪ್ರತಿನಿತ್ಯ ಕನಿಷ್ಠ 5ಕಿ.ಮೀ ವರೆಗೂ ಓಡಲೇಬೇಕು. ಇದರಿಂದ ದೈಹಿಕ ಅರೋಗ್ಯ ಕಾಪಾಡಿಕೊಳ್ಳುವುದಲ್ಲದೆ ನಾಡು ಮತ್ತು ದೇಶ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದರು.

ಕೋವಿಡ್ ಕಾಯಿಲೆಯ ಮಾನಸಿಕದಿಂದ ಬಹುತೇಕ ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದರಿಂದ ಹೊರಬರಬೇಕೆಂದರೆ ಅರೋಗ್ಯವಂತ ಸಮಾಜದ ನಿರ್ಮಾಣ ಅನಿವಾರ್ಯ. ಪೆÇಲೀಸರು ಅಲ್ಲದೆ ಸಾರ್ವಜನಿಕರು ಸಹ ಪ್ರತಿನಿತ್ಯ ಓಟ ಮಾಡಲೇಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ರನ್ ಫಾರ್ ಫಿಟ್‍ನೆಸ್ ಕಾರ್ಯಕ್ರಮ ಪ್ರತಿ ಜಿಲ್ಲೆಯಲ್ಲೂ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಈ ಓಟದಲ್ಲಿ ಕೆ.ಎಸ್.ಆರ್.ಪಿಯ 6ನೇ ಪಡೆ, ಕಲಬುರಗಿ ನಗರ ಪೆÇಲೀಸ್, ಕಲಬುರಗಿ ಜಿಲ್ಲಾ ಪೆÇಲೀಸ್, ಎನ್.ಎಸ್.ಎಸ್ ಘಟಕ, ಅಗ್ನಿ ಶಾಮಕಾದಳ, ಕ್ರೀಡಾ ಆಟಗಾರರು, ಎಸ್.ಬಿ.ಐ ಬ್ಯಾಂಕಿನ ಸಿಬ್ಬಂದಿಗಳು, ದಾನಮ್ಮ ಪೆಟ್ರೋಲ್ ಬಂಕ್, ಬಿ. ಎನ್.ಆರ್.ಬ್ರಿಕ್ಸ್ ಸಿಬ್ಬಂದಿಗಳು ಸೇರಿ ಸುಮಾರು 800 ಜನ ಭಾಗವಹಿಸಿದರು.

ಈ ಸಂದರ್ಭದಲ್ಲಿ ಡಿ.ಸಿ.ಪಿ. ಕಿಶೋರ್ ಬಾಬು, ಹೆಚ್ಚುವರಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪ್ರಸನ್ನ ದೇಸಾಯಿ, ಕಲಬುರಗಿಯ ಕೆ.ಎಸ್.ಆರ್.ಪಿ. 6ನೇ ಘಟಕದ ಕಮಾಂಡೆಂಟ್ ಬಸವರಾಜ ಜಿಳ್ಳೆ, ಎನ್.ಎಸ್.ಎಸ್ ಘಟಕದ ಮುಖ್ಯಸ್ಥ ಎಸ್.ಕೆ ತಿವಾರಿ ಹಾಗೂ ವಿವಿಧ ಜಿಲ್ಲೆಯ ಕೆ.ಎಸ್.ಆರ್.ಪಿ ಕಮಾಂಡೆಂಟ್‍ಗಳಾದ ರಮೇಶ ಬೋರಗಾವಿ, ಎಸ್.ಡಿ. ಪಾಟೀಲ್, ರಾಮಕೃಷ್ಣ ಮುದ್ದೇಪಲ್ಲಿ, ಪ್ರವೀಣ ಆಳ್ವ, ಮಹಾದೇವ ಪ್ರಸಾದ್, ಹಮ್ಜಾ ಹುಸೇನ್, ಸಹಾಯಕ ಕಮಾಂಡಂಟ್ ನಿಸಾರ್ ಅಹ್ಮದ್, ವೈಜನಾಥ ಚನ್ನಬಸವ, ಎಸ್.ಬಿ.ಐ. ಬ್ಯಾಂಕಿನ ಎಂ.ಡಿ. ಸೌರಭ್ ಸುಕುಮಾರ್, ಬ್ಯಾಂಕಿನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಬಿ ಜೋಸ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಸಿಂಪಿ ಸೇರಿದಂತೆ ವಿವಿಧ ವಿಭಾಗದ ಪೆÇಲೀಸ್ ಅಧಿಕಾರಿಗಳು-ಸಿಬ್ಬಂದಿಗಳು ಭಾಗಿಯಾಗಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here