ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಪೌರರ ಜವಾಬ್ದಾರಿ

0
148

ಆಳಂದ: ಸಮಾಜದಲ್ಲಿರುವ ಎಲ್ಲ ರೀತಿಯ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಪ್ರತಿ ಪೌರರ ಜವಾಬ್ದಾರಿಯಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ದಯಾನಂದ ಅಗಸರ್ ಅಭಿಪ್ರಾಯಪಟ್ಟರು.

ಇದನ್ನೂ ಸಹ ಓದಿ: ಮದುವೆಗೆ ವಿಳಂಬ: ಇಬ್ಬರು ಯುವ ಪ್ರೇಮಿಗಳ ಆತ್ಮಹತ್ಯೆ

Contact Your\'s Advertisement; 9902492681

ಮಂಗಳವಾರ ಆಳಂದ ತಾಲೂಕಿನ ಧುತ್ತರಗಾಂವನ ಭಾವಿನಾಲದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಪೂಜ್ಯ ರಾಜಶೇಖರ ಮಹಾಸ್ವಾಮೀಜಿ ಬಿ.ಎಡ್ ಕಾಲೇಜ್ ವತಿಯಿಂದ ಹಮ್ಮಿಕೊಂಡ ಮೂರು ದಿನಗಳ ಪೌರತ್ವ ಮತ್ತು ನಾಯಕತ್ವ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಸಹ ಓದಿ: ತೊಗರಿ ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಸರಪಳಿ ಪ್ರತಿಭಟನೆ

ಅಧ್ಯಾಪನ ವೃತ್ತಿಯಲ್ಲಿರುವವರಿಗೆ ಸ್ವಲ್ಪ ಸಾಮಾಜಿಕ ಕಳಕಳಿ, ಜವಾಬ್ದಾರಿ ತುಸು ಜಾಸ್ತಿಯೇ ಇರಬೇಕು ಹೀಗಾಗಿ ಪ್ರಶಿಕ್ಷಾಣಾರ್ಥಿಗಳು ಗಂಭೀರ ಓದಿನ ಕಡೆ ಆಸಕ್ತಿ ಇಟ್ಟು ಶಿಸ್ತು ಸ್ವಯಮದಿಂದ ಸಮಾಜದಲ್ಲಿ ಬದಲಾವಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಸರ್ಕಾರಗಳು ಉನ್ನತ ಮಟ್ಟದ ಶಿಕ್ಷಣ ವ್ಯವಸ್ಥೆ ಗುಣಾತ್ಮಕವಾಗಿ ಕಾಪಾಡಿಕೊಂಡು ಬರಲು ನಿರಂತರವಾಗಿ ಶ್ರಮಿಸುತ್ತಿವೆ ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯ ಮಾಡುತ್ತಿವೆ ಅದರ ಲಾಭವನ್ನು ವಿದ್ಯಾರ್ಥಿ ಸಮೂಹ ಪಡೆಯಬೇಕು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿ, ಬೋಧಕ ವರ್ಗವು ಸಮಾಜದ ಅಡಿಪಾಯ ಇದ್ದಂತೆ ಕೆಳಹಂತದ ಶಿಕ್ಷಣ ವ್ಯವಸ್ಥೆ ಮೆಲ್ಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ಅಲುಗಾಡದಂತೆ ನೋಡಿಕೊಳ್ಳುತ್ತದೆ ಈ ನಿಟ್ಟಿನಲ್ಲಿ ಶಿಕ್ಷಣ ರಂಗವನ್ನು ಆಯ್ಕೆ ಮಾಡಿಕೊಂಡಿರುವವರು ತಮ್ಮ ಪಾಠ, ಪ್ರವಚನಗಳಲ್ಲಿ ತೊಡಗಬೇಕಾಗುತ್ತದೆ ಎಂದರು.

ನಾಗರಿಕ ಸಮಾಜದಲ್ಲಿ ಎಲ್ಲ ಪೌರರಿಗೂ ನಿರ್ದಿಷ್ಟ ಕರ್ತವ್ಯ ಮತ್ತು ಜವಾಬ್ದಾರಿಗಳಿವೆ ದೇಶದ ಐಕ್ಯತೆ, ಸಮಗ್ರತೆಗೆ ಧಕ್ಕೆ ಬಾರದಂತೆ ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಅವುಗಳನ್ನು ನಿರ್ವಹಿಸುವ ಕಾರ್ಯ ಮಾಡಬೇಕಿದೆ ಎಂದು ನುಡಿದರು.

ಇದನ್ನೂ ಸಹ ಓದಿ: ಪಟ್ಟಾಧಿಕಾರ ಮಹೋತ್ಸವ ಅದ್ದೂರಿ ಆಚರಣೆ; ರಾಜಕುಮಾರ ಪಾಟೀಲ್ ತೇಲ್ಕೂರ್

ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಎನ್‌ಈಎಸ್‌ಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಮಾತನಾಡಿದರು. ವೇದಿಕೆಯ ಮೇಲೆ ಜಿ.ಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾವ ಮಲಾಜಿ, ಆನಂದರಾವ ಪಾಟೀಲ ಕೊರಳ್ಳಿ, ಗ್ರಾ.ಪಂ ಅಧ್ಯಕ್ಷ ಚಂದ್ರಕಾಂತ ಮಂಗಾಣೆ, ಚೆನ್ನಬಸಪ್ಪ ಇದ್ದರು.

ಇದನ್ನೂ ಸಹ ಓದಿ: ನಟ ದರ್ಶನ ಜನ್ಮದಿನದ ನಿಮಿತ್ತ ಅನ್ನಸಂತರ್ಪಣೆ

ಕಾಲೇಜಿನ ಪ್ರಾಚಾರ್ಯ ಅಶೋಕರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನೀತಾ ನಿರೂಪಿಸಿದರೆ, ಪ್ರಶಾಂತ ಜಿಡ್ಡೆ ವಂದಿಸಿದರು.

ಶಿಸ್ತಿ ಜೀವನದಲ್ಲಿ ಬಹಳ ಮುಖ್ಯ ಅದನ್ನು ಇಂತಹ ಶಿಬಿರಗಳು ಕಲಿಸಿ ಕೊಡುತ್ತವೆ ವಿದ್ಯಾರ್ಥಿಗಳು ಇದರಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಬೇಕು- ಡಾ. ರಾಘವೇಂದ್ರ ಚಿಂಚನಸೂರ, ಆಡಳಿತಾಧಿಕಾರಿ, ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here