ಹೈವೋಲ್ಟ್ ವಿದ್ಯುತ್ ತಂತಿ ಸ್ಪರ್ಷ: ಇಬ್ಬರು ಗಂಭೀರ

3
40

ವಾಡಿ: ಹೈವೋಲ್ಟ್ ವಿದ್ಯುತ್ ತಂತಿ ಸ್ಪರ್ಷಿಸಿ ಅಸ್ವಸ್ತಗೊಂಡ ಇಬ್ಬರು ಯುವಕರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಮಂಗಳವಾರ ಸಂಜೆ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.

ಪಟ್ಟಣದ ಕುಂದನೂರ ವೃತ್ತದ ಅಂಗಡಿಯೊಂದರ ಮೇಲೇರಿ ಐಸ್ಕ್ರೀಂ ಕಂಪನಿಗೆ ಸೇರಿದ ಜಾಹಿರಾತು ಫಲಕವನ್ನು ಕಟ್ಟುತ್ತಿದ್ದ ವೇಳೆ ತೀರಾ ಕೆಳಗೆ ನೇತಾಡುತ್ತಿದ್ದ ೧೧೦೦೦ ಕೆ.ವಿ ವಿದ್ಯುತ್ ತಂತಿ ತಗುಲಿದೆ. ವಿದ್ಯುತ್ ಸ್ಪರ್ಷಕ್ಕೆ ಇಬ್ಬರೂ ಕುಸಿದು ಬಿದ್ದಿದ್ದಾರೆ.

Contact Your\'s Advertisement; 9902492681

ಕಲಬುರಗಿ ಮೂಲದ ಇಬ್ಬರು ಯುವಕರಲ್ಲಿ ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದು, ಇನ್ನೋರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಕಲಬುರಗಿ ಮೂಲದವರೆನ್ನಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here