ಕಲಬುರಗಿ: ಹವಾಮಾನ ಮತ್ತು ಪರಿಸರವಾದಿ ದಿಶಾ ರವಿ ಬಂಧನ ಕೇಂದ್ರ ಸರ್ಕಾರದ ಧೋರಣೆ ಖಂಡಿ ನಯಾ ಸವೇರಾ ಸಂಘಟನೆ ಇಂದು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಬಿಡುಗಡೆಗೆ ಒತ್ತಾಯಿಸಿದೆ.
ದೇಶ ಪ್ರಜಾಪ್ರಭುತ್ವ ರಾಷ್ಟ್ರ ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಯೊಬ್ಬ ನಾಗರಿಕರಿಗೆ ಹಕ್ಕಿದೆ. ಅವರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ಬಂಧಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ನಯ ಸವೆರ ಸಂಘಟನೆ ಮನವಿ ಮತ್ರದಲ್ಲಿ ತಿಳಿಸಿ, ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸುವವರುನೆಲ್ಲ ಬಂಧಿಸಿರುವುದು ಸರಿಯಲ್ಲ ಬಿಜೆಪಿ ಸರ್ಕಾರದ ಐಟಿ ಸೆಲ್ ಬರೀ ಸುಳ್ಳು ಸುದ್ದಿಗಳನ್ನು ಹರಿ ಬಿಡುತ್ತದೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಲಿ ದಿಶಾ ಬಂಧನ ಪ್ರಜಾಪ್ರಭುತ್ವದ ಮೇಲೆ ನಡೆದ ಘನಘೋರ ದಾಳಿಯಾಗಿದೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಹೈವೋಲ್ಟ್ ವಿದ್ಯುತ್ ತಂತಿ ಸ್ಪರ್ಷ: ಇಬ್ಬರು ಗಂಭೀರ
ರೈತರಿಗೆ ಬೆಂಬಲ ನೀಡುವುದು ಅಪರಾಧವಲ್ಲ 21 ವರ್ಷದ ಯುವತಿಯ ಮೇಲೆ ತಮ್ಮ ಬಲ ಪ್ರಯೋಗಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ. ದಿಶಾ ಅವರ ಬಗ್ಗೆ ಮಾಹಿತಿ ಸಸಿ ಆಧಾರಿತ ಆಹಾರ ಪದಾರ್ಥಗಳನ್ನು ಬೆಳೆಸಿ ಮಾರಾಟ ಮಾಡುವ ಗುಡ್ ಮಿಲ್ಕ್ ಹೆಸರಿನ ಕಂಪನಿಯಲ್ಲಿ ಎಕ್ಸ್ಪಿರಿಯನ್ಸ್ ಮ್ಯಾನೇಜರಾಗಿ ಕೆಲಸ ತೊಡಗಿ, ಪರಿಸರ ಸ್ನೇಹಿಯಾಗಿ ಕೆರೆಗಳ ಸ್ವಚ್ಛತೆ, ಸಸಿ ನೆಡುವ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವುದು ಅವರ ಹವ್ಯಾಸವಾಗಿತ್ತು ಎಂಬ ವಿಷಯ ದೇಶಕ್ಕೆ ಗೊತ್ತಾಗಿದೆ.
ಕೇಂದ್ರ ಸರ್ಕಾರ ರೈತರ ಮೇಲೆ ದೌರ್ಜನ್ಯದಿಂದ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮೂರು ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಅನ್ಯಾಯವಾಗಲಿದ್ದು, ಕೂಡಲೆ ಈ ಕಾಯ್ದೆಗಳು ವಾಪಸ್ ಪಡೆಯಬೇಕು ಎಂದು ನಯ ಸವೆರ ಸಂಘಟನೆ ಆಗ್ರಹಿಸಿದೆ.
ಮತ್ತು ದಿಶಾ ರವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಇಲ್ಲದಿದ್ದರೆ ದೇಶಾದ್ಯಂತ ಹೋರಾಟ ನಡೆಯಲಿದೆ ಎಂದು ನಯಾ ಸವೇರ ಸಂಘಟನೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿ ಪತ್ರದ ಮೂಲಕ ಎಚ್ಚರಿಕೆ ನೀಡಿ ಆಗ್ರಹಿಸಿದೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಅವ್ಯವಸ್ಥೆ: ಕ್ರಮ ಆಗ್ರಹ
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಯುನೂಸ್ ಅಲಿ, ಸಾಯೆರಾ ಬಾನು, ರಾಬಿಯಾ ಶಾಕಿರ್, ಮೊಹಮ್ಮದ್ ಖಾಲೀಕ್, ಗೀತಾ ಮುದಗಲ್, ಬಾಬಾ ಫಕರೋದ್ದಿನ್ ಅನಸಾರಿ, ಆಯೆಶಾ ಶಕೀರ್ ಸೇರಿದಂತೆ ಇತರರು ಇದ್ದರು.