ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡುತ್ತಿಲ್ಲ: ಜಗನ್ನಾಥ.ಎಸ್.ಹೆಚ್

2
73

ಶಹಾಬಾದ: ಉದ್ಯೋಗ ಮೂಲಭೂತ ಹಕ್ಕು. ಆದರೆ ಸರ್ಕಾರವು ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರು ಭರ್ತಿ ಮಾಡುತ್ತಿಲ್ಲ ಎಂದು ಎಐಡಿವೈಒಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಎಐಡಿವೈಒ ಶಹಾಬಾದ ಸ್ಥಳೀಯ ಸಮಿತಿಯಿಂದ ಹೊನಗುಂಟಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯುವಜನ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಪ್ರಸಕ್ತ ಪರಿಸ್ಥಿತಿಯಲ್ಲಿ ಯುವಜನರು ನಿರುದ್ಯೋಗ ಸಮಸ್ಯೆಯನ್ನು ತಿವ್ರವಾಗಿ ಎದುರಿಸುತ್ತಿದ್ದಾರೆ. ಇನ್ನೊಂದು ಕಡೆ ಸರ್ಕಾರವು ಸಾರ್ವಜನಿಕ ಸೇವೆಗಳಾದ ಆರೋಗ್ಯ, ಶಿಕ್ಷಣ ,ರೈಲ್ವೆ, ಬ್ಯಾಂಕ ಗಳನ್ನು ವ್ಯಾಪಾರಿಕರಣ ಮಾಡುತ್ತಿದ್ದು, ಇದರಿಂದ ನಿರುದ್ಯೋಗ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಇದರ ವಿರುದ್ಧ ಸಂಘನೆಯು ರಾಷ್ಟ್ರದ್ಯಾದಂತ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕೆಂದು ಹೇಳಿದರು.

ಕೋವಿಡ್ ಲಸಿಕೆಗಳು ಸಂಪೂರ್ಣ ಸುರಕ್ಷಿತ,ಯಾರೂ ಭಯಪಡಬೇಕಿಲ್ಲ: ಡಿಸಿ

ಎಐಡಿವೈಒ ಅಧ್ಯಕ್ಷ ಸಿದ್ದು ಚೌದ್ರಿ ಮಾತನಾಡಿ, ಸರಕಾರವು ಭಗತ್‌ಸಿಂಗ್ ಜೀವನ ಚರಿತ್ರೆಯು ಪಠ್ಯಪುಸ್ತಕದಲ್ಲಿ ತೆಗೆದು ಹಾಕಿರುವುದು ಬಹಳ ಬೇಸರದ ಸಂಗತಿಯಾಗಿದೆ. ಯುವಜನ ಸಂಘಟನೆಯಿಂದ ಗ್ರಾಮೀಣ ಕ್ರೀಡಾಕೂಟ ಹಾಗೂ ಮಹಾಮ ವ್ಯಕ್ತಿಗಳ  ಕಾರ್ಯಕ್ರಮಗಳು ಯುವಜನರ ಮಧ್ಯೆ ಆಯೋಜಿಸಲಾಗುತ್ತಿದೆ. ಆದ್ದರಿಂದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇವರ  ವಿಚಾರಗಳನ್ನು ತಿಳಿದುಕೋಳಬೇಕೆಂದರು. ಇದೇ ಸಂದರ್ಭದಲ್ಲಿ ಎಐಡಿವೈಒ ಹೊನಗುಂಟ ಗ್ರಾಮದ ಯುವಜನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಶ್ರೀಶೈಲ ಬುರ್ಲಿ-ಅಧ್ಯಕ್ಷ, ಸಂತೋಷ ಪ್ರಭಾನೂರ್-ಉಪಾಧ್ಯಕ್ಷ, ಹುಲಿಯಪ್ಪ ಕರಗಾರ, ಕಾರ್ಯದರ್ಶಿಯಾಗಿ ಶಂಕರ್ ಭಂಜತ್ರಿ ,ಸದಸ್ಯರಾಗಿ ದೇವರಾಜ ರಾಜೋಳ, ಮನು ಪೂಜಾರಿ , ಮೌನೇಶ ರಾಜೋಳ, ಮೈಲಾರಿ ಇಟಗಿ ಕ್ರಿಷ್ಣಾ ,ಸೈಬಣ್ಣಾ ಹಾಗೂ ಚಂದ್ರು ಮರಗೋಳ,ದತ್ತು ಕಂಟಿಕರ್ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.

ಉದ್ಯೋಗಕ್ಕಾಗಿ ಆಗ್ರಹಿಸಿ ಎಐಡಿವೈಒ ಸಹಿ ಸಂಗ್ರಹ ಚಳುವಳಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here