ಬೆಂಗಳೂರು: ರಾಜ್ಯದ ಹಲವು ಪ್ರಮುಖ ದಲಿತ ಸಂಘಟನೆಗಳು ಜೊತೆಗೂಡಿ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳೊಂದಿಗೆ ಫೆಬ್ರವರಿ 20 ಮತ್ತು 21 ರಂದು ದ.ಸಂ.ಸೆ ಒಕ್ಕೂಟದಿಂದ ಚಿಂತನೆ ಮಂಥನ ಮತ್ತು ಮಹತ್ವದ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಸಂಘಟನೆಯ ಎನ್ ವೆಂಕಟೇಶ್ ಅವರು ತಿಳಿಸಿದ್ದಾರೆ.
ದೇಶವನ್ನು ಕಾಡುತ್ತಿರುವ ಹಲವು ಸಮಸ್ಯೆಗಳು ದಲಿತ ಹಾಗೊ ಇನ್ನಿತೆರೆ ಶೋಷಿತ ಸಮುದಾಯಗಳ ಹಕ್ಕುಗಳನ್ನು ಕಿತ್ತುಕೊಂಡು ಎರಡನೇ ದರ್ಜೆಯ ನಾಗರೀಕರನ್ನಾಗಿಸುವ. ಕಡೆಗೆ ಕೊಂಡೊಯ್ಕ್ಯಲಾಗುತ್ತಿದ್ದು, ಸಂವಿಧಾನಬದ್ಧವಾಗಿ ಗಳಿಸಿಕೊಂಡ ಹಕ್ಕುಗಳು ಮತ್ತು ಪ್ರಾತಿನಿಧ್ಯದ ಮೀಸಲಾತಿಯನ್ನು ಶೋಷಿತರ ವಿರುದ್ಧದ ಅಸ್ತ್ರವನ್ನಾಗಿಸಲು ಸಂವಿಧಾನ ವಿರೋಧಿ ಶಕ್ತಿಗಳು ಹುನ್ನಾರ ನೆಡೆಸಿವೆ.
ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಅಧ್ಯಕ್ಷರಾಗಿ ಸಿಎ ಬಿ ಟಿ ಶೆಟ್ಟಿ
ಇದುವರೆಗೂ ಶಿಕ್ಷಣವು ಶೋಷಿತ ಸಮುದಾಯಗಳಿಗೆ ವಿಮೋಚನೆಯ ಹಾದಿಯನ್ನು ತೆರೆದಿಟ್ಟಿದ್ದರೆ ಈಗ ಇದರ ಬಾಗಿಲನ್ನು ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ದಲಿತ ಸಂಘಟನೆಗಳು ಜೊತೆಗೂಡಿ ದ.ಸಂ.ಸ. ಒಕ್ಕೊಟಿ (ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ) ರಚಿಸಿಕೊಂಡು ರಾಜ್ಯ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳಿಗೆ ಎರಡು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕಾರ್ಯಗಾರವು ಫೆಬ್ರವರಿ 20 ಮತ್ತು 21 ರಂದು ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು, ಕಾರ್ಯಾಗಾರವನ್ನು ದ.ಸೆಂ.ಸ ರಾಜ್ಮ ಸಂಚಾಲಕರಾದ ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ವಿ.ನಾಗರಾಜ್, ಗುರುಪ್ರಸಾದ ಕೆರಗೋಡು, ಲಕ್ಷ್ಮೀನಾರಾಯಣ್ ನಾಗವರ, ಎನ್.ಮುನಿಸ್ಟುಮಿ ಜೊತೆಗೂಡಿ ಉದ್ಘಾಟಿಸಲಿದ್ದಾರೆ.
ದಿಶಾ ರವಿ ಬಂಧನ ಖಂಡಿ ನ್ಯಾಯಲಯದ ಮುಂದೆ ಮೌನ ಪ್ರತಿಭಟನೆ
ಸಂವಿಧುನ ಮತ್ತು ಪ್ರಜಾಪ್ರಭುತ್ತಕ್ಕೆ ಎದುರಾಗಿರುವೆ ಅಪಾಯಗಳು, ಖಾಸಗೀಕರಣ/ ಮೀಸಲಾತಿ, ಮೀಸಲಾತಿ ವರ್ಗೀಕರಣ, ರಾಷ್ಟ್ರೀಯ ಹೊಸ ಶಿಕ್ಷಣ ನೀತಿ, ಅಂಬೇಡ್ಕರ್ ರವರ ತಾತ್ವಿಕ ಚಿಂತನೆಗಳ ಕುರಿತಂತೆ ವಿಚಾರಗೋಷ್ಠಿಗಳು ನಡೆಯಲಿವೆ. ಹಲವು ಪರಿಣಿತರು ಮತ್ತು ದ.ಸಂ.ಸ ರಾಜ್ಕ ಪದಾಧಿಕಾರಿಗಳು ವಿಚಾರ ಮಂಡಿಸಲಿದ್ದಾರೆ ಎಂದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.