ಯಾದಗಿರಿ: ವನದುರ್ಗ ಸರ್ಕಾರಿ ಆಸ್ಪತ್ರೆಗೆ ಬೀಗ

2
106

ಯಾದಗಿರಿ : ಸುಸಜ್ಜಿತವಾದ ಆಸ್ಪತ್ರೆ ಕಟ್ಟಡ ವಿದ್ದರೂ ಆಸ್ಪತ್ರೆ ಸಿಬ್ಬಂದಿಗಳ ಕೊರತೆಯಿಂದ ಇಂದು ಬೀಗ ಜಡಿದು ಗ್ರಾಮದ ಸಾರ್ವಜನಿಕರು ದಿಢೀರನೆ ಪ್ರತಿಭಟನೆ ಮಾಡಿದರುವ ಘಟನೆ ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ ಜರುಗಿದೆ.

ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಂದ ರೋಗಿಗಳು ಆಸ್ಪತ್ರೆಗೆ ಬಂದು ಮರಳಿ ಹೋಗುವಂತ ಪರಿಸ್ಥಿತಿ ಎದುರಾಗಿದೆ. ಸಿಬ್ಬಂದಿಗಳು ಸಮಯ ಪಾಲನೆ ಮಾಡದಿರುವುದು, ನಿರ್ಲಕ್ಸಿಸುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

Contact Your\'s Advertisement; 9902492681

15ನೇ ಹಣಕಾಸು ಅನುದಾನ ದುರ್ಬಳಕೆ: ತನಿಖೆಗೆ ಕರವೇ ಆಗ್ರಹ

ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಬಂದು ಹಾಜರಿ ಹಾಕಿ ಹೋಗುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು ಇದರಿಂದ ರೋಗಿಗಳಿಗೆ ತುಂಬಾ ತೊಂದರೆ ಈಡಾಗಿದೆ. ಇಂದು ಸರ್ಕಾರದ ಸುತ್ತೋಲೆ ಇದ್ದರೂ ಕೂಡ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜಯಂತಿ ಕೂಡ ಆಚರಣೆ ಮಾಡದಿರುವುದೆ ವಿಪರ್ಯಾಸ.

ತಾ.ಪಂ. ಅಧ್ಯಕ್ಷರಾದ ಶ್ರೀ ಹಣಮಂತ್ರಾಯ ದೊರೆ ದಳಪತಿ,ಬೇಸರ ವ್ಯಕ್ತಪಡಿಸಿದ್ದಾರೆ ವೆಕ್ತಪಡಿಸಿದ್ದಾರೆ. ಇಂದು ಬೀಗ ಬಿದ್ದಿರುವ ಅರೋಗ್ಯ ಕೇಂದ್ರಕ್ಕೆ ಮತ್ತೊಂದೊಂದು ಬೀಗ ಹಾಕಲಾಗಿದೆ, ಆದಷ್ಟು ಬೇಗ ಮೇಲಧಿಕಾರಿಗಳ ಗಮನಕ್ಕೆ ಬಂದು ಸರಿಪಡಿಸದೆ ಹೊದರೆ ಕಠಿಣ ಕ್ರಮ ತೆಗೆದುಕೊಳ್ಳಾಗುವುದು ಎಂದು ಸೂಚಿಸಿದ್ದಾರೆ.

ಸಾಮಾನ್ಯ ಕಾನೂನುಗಳ ತಿಳಿಯಲು ಪದವಿ ವಿದ್ಯಾರ್ಥಿಗಳಿಗೆ ಪೊಲೀಸ್ ಕಿರು ಪರೀಕ್ಷೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here