ರಾಯಚೂರು: 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿರುವ ಹೊಸ ಧರ್ಮಗಳ ಉದಯ ಪಾಠವನ್ನು ಬೋಧನೆ ಮಾಡಬಾರದು ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂಬ ಸುತ್ತೋಲೆಯನ್ನು ವಾಪಸ್ ಪಡೆಯಲು ಎಸ್ಎಫ್ಐ ಆಗ್ರಹಿಸಿದೆ.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ಮಾಡಲಾಯಿತು. ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಬರುವ ಪೇಜ್ ನಂಬರ್ 82 ಮತ್ತು 83 ರಲ್ಲಿ ಇರುವು ಹೊಸ ಧರ್ಮಗಳ ಉದಯ ಎಂಬ ಪಾಠವನ್ನು ಶೈಕ್ಷಣಿಕ ವರ್ಷದಲ್ಲಿ ಬೋಧನೆ ಮಾಡಬಾರದು ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಾರದು ಎಂಬ ವಿವಾದಾತ್ಮಕ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆ ಒತ್ತಾಯಿಸಿದೆ.
ಆರನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಹೊಸ ಧರ್ಮಗಳ ಉದಯ ಎಂಬ ಪಾಠದಲ್ಲಿ ಹೊಸ ಧರ್ಮಗಳ ಏಕೆ ಉದಯಿಸಿದವು ಎಂಬುದರ ಕುರಿತು ವಿವರಣೆಯಲ್ಲಿ ಉತ್ತರ ವೇದಗಳ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ, ಯಜ್ಞಗಳ ಹೆಸರಿನಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು, ಇದರಿಂದಾಗಿ ಆಹಾರದ ಉತ್ಪಾದನೆಯು ಕುಂಠಿತವಾಯಿತ್ತು, ಅಷ್ಟು ಮಾತ್ರವಲ್ಲ ಯಾಗ, ಯಜ್ಞಗಳಲ್ಲಿ ಆಹಾರಧಾನ್ಯ ಹಾಲು,ತುಪ್ಪಗಳನ್ನು ‘ಹವಿಸ್ಸು’ ಎಂದು ದಹಿಸಲಾಗುತ್ತಿತು.
ಎಸಿಸಿ ಅಧಿಕಾರಿಗಳ ಬಂಧನಕ್ಕೆ ವಾಲ್ಮೀಕಿ ಸಮಾಜ ಒತ್ತಾಯ
ಪರಿಣಾಮವಾಗಿ ಆಹಾರದ ಅಭಾವ ಕೂಡ ಸೃಷ್ಟಿಯಾಯಿತು, ಈ ದುಬಾರಿ ಆಚರಣೆಗಳು ಜನಸಾಮಾನ್ಯರಿಗೆ ಸಾಧ್ಯವಿರಲಿಲ್ಲ, ಆಚರಣೆಗಳನ್ನು ಸಂಸ್ಕೃತ ಮಂತ್ರಗಳ ಮೂಲಕ ನಡೆಸಲಾಗುತ್ತಿತ್ತು, ಸಂಸ್ಕೃತವು ಪುರೋಹಿತರ ಭಾಷೆಯಾಗಿದ್ದರಿಂದ ಜನ ಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ ಹಾಗಾಗಿ ಜನರು ಸಹ ಜನಸಾಮಾನ್ಯರ ಸರಳ ಭಾಷೆಯ ಮೂಲಕ ಮುಕ್ತಿ ತೋರುವ ಹೊಸ ಧರ್ಮ ಗಳನ್ನು ಅಪೇಕ್ಷಿಸುತ್ತಿದ್ದರು, ಎಂದು ಹೊಸ ಧರ್ಮಗಳ ಉದಯದ ಪ್ಯಾರಾದಲ್ಲಿ ವಿವರಣೆಯನ್ನು ಕೊಡಲಾಗಿದೆ ಇದು ತಪ್ಪಾ? ಸುಮಾರು ವರ್ಷಗಳಿಂದ ಇದ್ದ ಪಾಠವನ್ನು ಏಕೆ ಏಕೆ ಈ ಶೈಕ್ಷಣಿಕ ವರ್ಷದಲ್ಲಿ ಬೋಧನೆ ಮಾಡಬಾರದು ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸಬಹುದು ಎಂಬುದರ ಅರ್ಥವೇನು, ಒಂದರ್ಥದಲ್ಲಿ ಕೈಬಿಡಬೇಕೆಂಬ ಸೂಚನೆಯು ಈ ಸುತ್ತಲೇ ತೋರಿಸುತ್ತದೆ.
ಹೊಸ ಧರ್ಮಗಳ ಉದಯ ದಲ್ಲಿ ಮೊದಲನೇದಾಗಿ ಬರುವ ನಮ್ಮ ಭಾರತ ದೇಶದಲ್ಲಿ ಜನ್ಮ ತಾಳಿ ಇರುವ ಬೌದ್ಧ ಧರ್ಮದಲ್ಲಿ ಹೊಸ ಧರ್ಮ ಉದಯವಾಗಲು ಉತ್ತರ ವೇದಗಳ ಕಾಲದಲ್ಲಿ ವರ್ಣವ್ಯವಸ್ಥೆಯಿಂದ ಸಾಮಾಜಿಕ ವಿಘಟನೆ ಆರಂಭವಾಯಿತು, ಇದು ಸಮಾಜದಲ್ಲಿ ತಾರತಮ್ಯಕ್ಕೆ ಎಡೆಮಾಡಿಕೊಟ್ಟಿತ್ತು, ಸಮಾಜದಲ್ಲಿ ಬ್ರಾಹ್ಮಣರೆಂದು ಕರೆಯಲ್ಪಡುತ್ತಿದ್ದ ಪುರೋಹಿತ ವರ್ಗ ಹಲವಾರು ಸವಲತ್ತುಗಳನ್ನು ಹೊಂದಿತ್ತು, ಇದೇ ಕಾಲದಲ್ಲಿ ಕ್ಷತ್ರಿಯರು ಕೂಡ ಪ್ರಾಬಲ್ಯಕ್ಕೆ ಬರಲಾರಂಭಿಸಿದರು, ಪರಿಣಾಮವಾಗಿ ನಂತರದ ಕಾಲದಲ್ಲಿ ಹಲವು ಗಣರಾಜ್ಯಗಳು ಉದಯಿಸಿದವು, ಈ ಗಣರಾಜ್ಯಗಳ ಕ್ಷತ್ರಿಯರು ಬಹು ಸವಲತ್ತನ್ನು ಹೊಂದಿದ್ದ ಬ್ರಾಹ್ಮಣರಿಗೆ ಪ್ರತಿಯಾಗಿ ಹೊಸ ಧರ್ಮಗಳ ಉದಯಕ್ಕೆ ಕಾರಣರಾದರು ಎಂದು ಹೇಳುತ್ತದೆ.
ಸಚಿವರಿಗೆ ಭೇಟಿಯಾದ ಕಲಬುರಗಿ ನಿಯೋಗ; ಗಣಿಗಾರಿಕೆ ಸರಳೀಕರಣಕ್ಕೆ ಮನವಿ
ಹಾಗಾದರೆ ನಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ರಾಜ್ಯದ ವಿದ್ಯಾರ್ಥಿಗಳಿಗೆ ಏನನ್ನು ಬೋಧನೆ ಮಾಡಿಸಲು ಹೊರಟಿದ್ದಾರೆ, ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್, ಅಂಬೇಡ್ಕರ್ ಅವರ ಹೇಳಿರುವಂತೆ ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ವಾಕ್ಯ ಅತ್ಯಂತ ಸ್ಪಷ್ಟವಾಗಿದೆ ಏಕೆಂದರೆ ಹೊಸ ಧರ್ಮಗಳ ಉದಯಕ್ಕೆ ಕಾರಣ ಏನು ಎಂಬುದನ್ನು ನಾವು ಅರಿತುಕೊಳ್ಳದೆ ಮುಂದೆ ಹೋಗುವುದು ಸರಿಯಲ್ಲ ಮತ್ತು ಬಿಜೆಪಿ ಸರ್ಕಾರವು ತನ್ನ ಅಜೆಂಡಾಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುವುದು ಕೆಲವೊಂದು ಪಾಠಗಳನ್ನು ಕೈಬಿಡಲು ಸೂಚಿಸುವುದು ಸಂವಿಧಾನಾತ್ಮಕವಾಗಿ ಸರಿಯಾದ ಕ್ರಮವಲ್ಲ, ಸತ್ಯವನ್ನು ಹೇಳಲಾರದೆ ಸುಳ್ಳನ್ನು ಹೇಳುವುದರ ಮೂಲಕ ರಾಜ್ಯದ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಯಾದಗಿರಿ: ವನದುರ್ಗ ಸರ್ಕಾರಿ ಆಸ್ಪತ್ರೆಗೆ ಬೀಗ
ವಿದ್ಯಾರ್ಥಿಗಳಿಗೆ ಸರ್ಕಾರ ಸತ್ಯವನ್ನು ಮರೆಮಾಚುವ ಯತ್ನವನ್ನು ಮಾಡುಲು ಹೊರಟಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಯು ಖಂಡಿಸುತ್ತದೆ. ಅಲ್ಲದೆ ಕೂಡಲೇ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರನ್ನು ಮತ್ತು ಸಂಬಂಧಿಸಿದ ಶಿಕ್ಷಣ ಸಚಿವರನ್ನು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ದೀನ ಸಮುದ್ರ, ಜಿಲ್ಲಾ ಸಮಿತಿ ಪದಾಧಿಕಾರಿ ಮೌನೇಶ ಬುಳ್ಳಾಪುರ ಜಿಲ್ಲಾ ಮುಖಂಡರಾದ , ವೀರಬ್ರಹ್ಮ, ರಾಜೇಶ್ವರಿ, ರಮೇಶ, ಶಂಕರ, ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.