ತಹಸೀಲ್ದಾರ ನೇತೃತ್ವದಲ್ಲಿ  ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ

1
89

ಶಹಾಬಾದ: ತಾಲೂಕಿನ ಮರತೂರ ಗ್ರಾಪಂಯ ಅಲ್ದಿಹಾಳ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಯೋಜನೆಯಡಿ ತಹಸೀಲ್ದಾರ ಸುರೇಶ ವರ್ಮಾ ನೇತೃತ್ವದಲ್ಲಿ ಕಂದಾಯ ಇಲಾಖೆಯ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಿದ್ದಾರೆ.

ಬೆಳಿಗ್ಗೆ ತಹಸೀಲ್ದಾರ ಸುರೇಶ ವರ್ಮಾ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಸುತ್ತಾಡಿ, ಕುಡಿಯುವ ನೀರಿನ ಹಳೆ ಟ್ಯಾಂಕ್, ಹಳೆ ಬಾವಿ, ಪುರಾತನ ದೇವಾಲಯ, ಶಾಲೆ, ಅಂಬೇಡ್ಕರ್ ಭವನ, ಸರ್ಕಾರಿ ಜಾಗವನ್ನು ವೀಕ್ಷಣೆ ಮಾಡಿದರು. ನಂತರ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

Contact Your\'s Advertisement; 9902492681

ಗ್ರಾಮದ ಮನ್ನೆ ಪಟೇಲ್,ರಾಜಮಾಬೇಗಂ,ಮಾಣಿಕರಾವ ಸಜ್ಜನ್, ಅಣ್ಣಾರಾವ ಸಾಹೇಬಗೌಡ ಅವರು ವೃದ್ಯಾಪ ವೇತನ ಬಗ್ಗೆ ತಮ್ಮ ನೋವನ್ನು ತೋಡಿಕೊಂಡರು.ಅದಕ್ಕೆ ತಹಸೀಲ್ದಾರರು ಸ್ಥಳದಲ್ಲಿಯೇ ಪೂರಕ ದಾಖಲೆಗಳನ್ನು ಪರಿಶೀಲಿಸಿ ವೃದ್ಯಾಪ ವೇತನದ ಬಾಂಡ್ ವಿತರಿಸಿದರು.

ಅಲ್ಲದೇ ಕಂದಾಯ ಇಲಾಖೆಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ಗ್ರಾಮದಲ್ಲಿಯೇ ತಂದು ಶಾಲಾ ಮಕ್ಕಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸ್ಥಳದಲ್ಲಿಯೇ ವಿತರಿಸುವ ಕೆಲಸ ಮಾಡಿದ್ದು ಮಾತ್ರ ಗ್ರಾಮಸ್ಥರ ಪ್ರಶಂಸೆಗೆ ಕಾರಣವಾಯಿತು.

ಅಲ್ಲದೇ ಕುಡಿಯುವ ನೀರಿನ ಸಮಸ್ಯೆ, ಹಳೆ ಬಾವಿ ದುರಸ್ತಿ ಹಾಗೂ ಶಿಥಿಲಗೊಂಡ ನೀರಿನ ಟ್ಯಾಂಕ್ ದುರಸ್ತಿಗಾಗಿ ಸಂಬಂಧಪಟ್ಟ ಇಲಾಖೆಗೆ ತಿಳಿಸಿ ವಾರದಲ್ಲಿ ಕ್ರಮಕೈಗೊಳ್ಳಲು ತಾಕೀತು ಮಾಡಿದರು.ವೃದ್ಯಾಪ ವೇತನ, ವಿಧವಾ ವೇತನ, ಅಂಗವಿಕಲರ್ ವೇತನವನ್ನು ಹೊಸದಾಗಿ ಮಾಡಿಕೊಡುವುದಲ್ಲದೇ, ಬಂದ್ ಆದ ವಿಧವಾ ವೇತನವನ್ನು ಸ್ಥಳದಲ್ಲಿಯೇ ಅಪ್‍ಡೇಟ್ ಕೂಡ ಮಾಡಿಕೊಡಲಾಯಿತು. ಸರ್ಕಾರಿ ಶಾಲೆಗೆ ಕಂಪೌಂಡ ಗೋಡೆ ಇಲ್ಲದ ಕಾರಣ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದಾಗ, ಅದಕ್ಕೆ ಸಂಬಂಧಪಟ್ಟವರಿಗೆ ಕರೆ ಮಾಡಿ ತಿಳಿಸಿದರು.

ಅಲ್ಲದೇ ಹೊಸ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲು ಕೆಕೆಆರ್‍ಡಿಬಿಗೆ ನಿರ್ದೇಶಿಸಲಾಯಿತು.

ಕೆಲವು ಮಹಿಳೆಯರು ನಮಗೆ ಜಾಬ್ ಕಾರ್ಡ ಮಾಡಿ ಕೊಟ್ಟಿಲ್ಲ ಎಂದು ದೂರು ಸಲ್ಲಿಸಿದಾಗ, ಸ್ಥಳದಲ್ಲಿಯೇ ಪಿಡಿಓ ಅವರಿಂದ ಜಾಬ್ ಕಾರ್ಡ ವಿತರಿಸಲಾಯಿತು.ಒಟ್ಟಾರೆಯಾಗಿ ಗ್ರಾಮದ ಜನರ ಸುಮಾರು 90 ರಷ್ಟು ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಿದರು.ಇನ್ನು ಜಾಗದ ಸಮಸ್ಯೆ, ಹೊಲಗಳ ಅಳತೆಯ ಬಗ್ಗೆ ಪೂರಕ ದಾಖಲೆ ಒದಗಿಸದ ಕಾರಣ ಬಗೆಹರಿಸಲು ಆಗಲಿಲ್ಲ.ಇನ್ನುಳಿದ ಕೆಲವು ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮಗಳ ಜನರು ಪಿಂಚಣಿ, ವೃದ್ಧಾಪ್ಯ, ವಿಧವಾ ವೇತನದಂತಹ ಸಮಸ್ಯೆ ಎದುರಿಸಬಾರದು. ಪ್ರತಿ ಸಮಸ್ಯೆಗೆ ಪರಿಹಾರಕ್ಕಾಗಿ ತಾಲೂಕಾ ಕೇಂದ್ರಕ್ಕೆ ಬರುವಂತಾಗಬಾರದು.ಬದಲಾಗಿ ಸ್ಥಳದಲ್ಲೇ ಸಾಧ್ಯವಾದಷ್ಟು ಪರಿಹಾರ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸುತ್ತಿದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು-ಸುರೇಶ ವರ್ಮಾ ತಹಸೀಲ್ದಾರ.

ತಾಪಂ ಮಾಜಿ ಸದಸ್ಯ ಪಾಶಾ ಪಟೇಲ್, ಗ್ರಾಪಂ ಸದಸ್ಯರಾದ ಖಾಲೀದ್ ಪಟೇಲ್, ಕಾಶಪ ದೊಡ್ಡಮನಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ,ಗ್ರೇಡ್-2 ತಹಸೀಲ್ದಾರ ವೆಂಕನಗೌಡ ಪಾಟೀಲ, ಸಿಡಿಪಿಓ ಎಸ್.ಎಮ್.ಪಾಟೀಲ, ಭೂ ಮಾಪನ ಇಲಾಖೆಯ ವಿನೋದ ಗೋಳಾ,ಪಶು ಆಸ್ಪತ್ರೆಯ ವೈದ್ಯ ಡಾ.ಅಭಿಲಾಷ, ಪಿಡಿಓ ವೇದಾಂತ ತುಪ್ಪದ್, ಕಂದಾಯ ಅಧಿಕಾರಿ ವೀರಭದ್ರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here