ಆಳಂದ: ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಫೆ. ೨೭ರಂದು ನಡೆಯಲಿರುವ ಅಖಿಲ ಕರ್ನಾಟಕ ಗೋಂಧಳಿ ಸಮಾಜದ ತಾಲೂಕು ಮಟ್ಟದ ಸಮಾವೇಶದ ಪೋಸ್ಟರ್‌ಗಳನ್ನು ಸಮಾಜದ ಅಧ್ಯಕ್ಷ ಸುರೇಶ ಡಿ. ಮಾನೆ ಪಟ್ಟಣದಲ್ಲಿ ಭಾನುವಾರ ಸಭೆ ಕರೆದು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಗೋಂದಳಿ ಸಮಾಜದ ಗೌರವ ಅಧ್ಯಕ್ಷ ರಮೇಶ ಸಾಳುಂಕೆ, ಸಂತೋಷ ಹದವೆ, ಸೂರ್ಯಕಾಂತ ವಾಘ್ಮೋರೆ, ಬಲರಾಅಮ ಗೋತ್ರಾಳ, ದಿಲೀಪ ಮಾನೆ, ಮಾರುತಿ ಉಗಾಡೆ, ದತ್ತಾತ್ರೆಯ ಸಾಳುಂಕೆ, ನಿರ್ದೇಶಕ ಉದಯಕುಮಾರ ಸಾಳುಂಕೆ ಜಿಡಗಾ ಮತ್ತಿತರು ಪೂರ್ವ ಸಿದ್ಧತೆಯ ಕುರಿತು ಚರ್ಚಿಸಿದರು.
ಈ ಸಭೆಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಸುರೇಶ ಡಿ. ಮಾನೆ ಅವರು, ಫೆ. ೨೭ರಂದು ಮಾದನಹಿಪ್ಪರಗಾದಲ್ಲಿ ನಡೆಯುವ ಸಮಾವೇಶಕ್ಕೆ ತಾಲೂಕು ಹಾಗೂ ಜಿಲ್ಲೆಯ ಗೋಂಧಳಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಎಲ್ಲಾ 21 ವೈದ್ಯಕೀಯ ಸಂಸ್ಥೆಗಳ ಉನ್ನತೀಕರಣ: ಸಚಿವ ಡಾ.ಕೆ.ಸುಧಾಕರ್
ಅಂದು ಬೆಳಗಿನ ೧೦:೩೦ಕ್ಕೆ ಗ್ರಾಮದ ಅಂಬಾಭವಾನಿ ಮಂದಿರದಲ್ಲಿ ನಡೆಯುವ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ವಹಿಸುವರು. ಶಾಂತವೀರ ಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಸುಭಾಷ ಗುತ್ತೇದಾರ, ಜಿಪಂ ಅಧ್ಯಕ್ಷೆ ಸುವರ್ಣ ಎಚ್. ಮಲಾಜಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಬಿಜೆಪಿ ಅಧ್ಯಕ್ಷ ಆನಂದ ಪಾಟೀಲ, ಗೋಂದಳಿ ಸಮಾಜದ ರಾಜ್ಯ ಅಧ್ಯಕ್ಷ ವಿಠ್ಠಲ ಗಣಾಚಾರಿ, ಗೌರವ ಅಧ್ಯಕ್ಷ ಬಂಡುರಾವ್ ವಿ. ಬೋಸಲೆ, ಮಹಿಳಾ ರಾಜ್ಯ ಅಧ್ಯಕ್ಷೆ ಭಾರತಿ ಸೂರ್ಯವಂಶಿ, ಉಪಾಧ್ಯಕ್ಷ ಗೋವಿಂದ ವಿ. ಭಟ್ ಮತ್ತು ಎಂ.ಬಿ. ಶಾಸ್ತ್ರಿ, ಜಿಲ್ಲಾಧ್ಯಕ್ಷ ಸಂತೋಷ ಚ. ಸಿಂಧೆ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಗುರುಶಾಂತ ಪಾಟೀಲ, ತಾಪಂ ಸದಸ್ಯ ಸಾತಪ್ಪ ಎಸ್. ಕೋಳಶೆಟ್ಟಿ, ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಶಿ. ದುದಗಿ, ಉಪಾಧ್ಯಕ್ಷ ಚನ್ನಪ್ಪ ಹಾಲೇನವರು, ಪಿಎಸ್‌ಐ ಇಂದೂಮತಿ, ಮಹೇಶ ಗೌಳಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು. ವಿಶೇಷ ಉಪನ್ಯಾಸಕರಾಗಿ ಪ್ರಾಚಾರ್ಯ ಡಾ| ಶ್ರವಣಕುಮಾರ ಮುದ್ರೇಕರ್, ವಿಜಯಪೂರದ ಅಶೋಕ ಕಾಳೆ ಆಗಮಿಸಲಿದ್ದಾರೆ ಎಂದು ಹೇಳಿದರ ಅವರು ಸಮಾವೇಶದ ಯಶಸ್ವಿಗೆ ಸರ್ವರು ಸಹಕರಿಸಬೇಕು ಎಂದು ಅವರು ಕೋರಿದರು.
ಅತಿವೃಷ್ಠಿ ಹಾನಿ: ವಾರದಲ್ಲಿ ರೈತರ ಖಾತೆಗೆ 29.58 ಕೋಟಿ ಜಮಾ: ಬಿ. ಸಿ.ಪಾಟೀಲ