ಎಲ್ಲಾ 21 ವೈದ್ಯಕೀಯ ಸಂಸ್ಥೆಗಳ ಉನ್ನತೀಕರಣ: ಸಚಿವ ಡಾ.ಕೆ.ಸುಧಾಕರ್

1
35

ಕಲಬುರಗಿ: ಪ್ರಸ್ತುತ ಎಲ್ಲಾ 21 ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನು ಉನ್ನತಮಟ್ಟಕ್ಕೇರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.

ಭಾನುವಾರ ಸೇಡಂ ರಸ್ತೆಯಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕರ್ನಾಟಕ ಪ್ರಾದೇಶಿಕ ಕೇಂದ್ರದ ಹೊಸ ಆಡಳಿತ ಕಟ್ಟಡವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿ ನಿಜವಾದ ಕಲ್ಯಾಣವೆಂಬ ಅರ್ಥಕ್ಕೆ ಮತ್ತಷ್ಟು ಬಲವನ್ನು ಈ ಕಟ್ಟಡ ನೀಡಿದೆ. ಹಿಂದುಳಿದ, ಅಭಿವೃದ್ಧಿ ವಂಚಿತ ಎಂದು ಕರೆಸಿಕೊಳ್ಳುತ್ತಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು, ಮುಖ್ಯಮಂತ್ರಿ ಬಿ.ಎಸ್. ಬಿ.ಎಸ್.ಯಡಿಯೂರಪ್ಪ ಅವರ ಕಾಯಕಲ್ಪದಿಂದ ಇಂದು ಕಲ್ಯಾಣ ಕರ್ನಾಟಕವಾಗಿದೆ ಎಂದು ಪುನರುಚ್ಚರಿಸಿದರು.

ಅತಿವೃಷ್ಠಿ ಹಾನಿ: ವಾರದಲ್ಲಿ ರೈತರ ಖಾತೆಗೆ 29.58 ಕೋಟಿ ಜಮಾ: ಬಿ. ಸಿ.ಪಾಟೀಲ

ಈ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 25 ವರ್ಷÀ ಕಳೆದಿದೆ. ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಸ್ವಂತ ಕಟ್ಟದ ಕಲಬುರಗಿಯಲ್ಲಿ ಸ್ಥಾಪನೆಯಾಗಿರುವುದು ಇದೇ ಮೊದಲು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಪ್ರಸ್ತು 800 ಕಾಲೇಜುಗಳನ್ನು ಹೊಂದಿದೆ. ಸರ್ಕಾರದ ಆಶಯದಂತೆ ರಾಜ್ಯದ ಎಲ್ಲಾ ಪ್ರದೇಶಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿಶ್ವವಿದ್ಯಾಲಯದ ಬೆಂಗಳೂರು ಕೇಂದ್ರಸ್ಥಾನದ ಸಹಯೋಗದೊಂದಿಗೆ ಆಡಳಿತ ವಿಕೇಂದ್ರೀಕರಣ ಮಾಡಲು 2000 ನೇ ಇಸವಿಯಲ್ಲ್ಲಿ ಮೊದಲ ಬಾರಿಗೆÀ ವಿವಿ ಸೆನೆಟ್ ಸದಸ್ಯರಾದ ಡಾ.ಹೆಚ್.ವೀರಭದ್ರಪ್ಪ ಅವರು ಪ್ರಾದೇಶಿಕ ಆಡಳಿತ ಕೇಂದ್ರಗಳನ್ನು ರಚನೆ ಮಾಡಬೇಕು ಎಂಬ ವಿಷಯ ಪ್ರಸ್ತಾಪಿಸಿದ್ದರು. ಹೀಗಾಗಿ ಇಂತಹ ದೂರದೃಷ್ಟಿಯುಳ್ಳ  ನಾಯಕರ ಆಲೋಚನೆಗಳಿದ್ದಲ್ಲಿ ಅಭಿವೃದ್ಧಿ ಯೋಜನೆಗಳಾಗಿ ಕಾರ್ಯರೂಪಕ್ಕೆ ಬರುತ್ತವೆ ಎಂದು ಭವ್ಯ ಕಟ್ಟಡ ಸ್ಥಾಪನೆಯ ಕುರಿತು ಸಾಗಿ ಬಂದ ಹೆಜ್ಜ್ಚೆಗಳ ಗುರುತುಗಳ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

“ಅಕ್ಷರ ಬೀಜ ಬಿತ್ತೋಣ ಬನ್ನಿ” ವಿಚಾರ ವಿನಿಮಯ ಕಾರ್ಯಕ್ರಮ

ವೈದ್ಯರ ನೇರ ನೇಮಕಾತಿ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ವೈದ್ಯರನ್ನು ಸರ್ಕಾರದಿಂದ ನೇರ ನೇಮಕಾತಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಇದಲ್ಲದೇ, ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಕಾಯ್ದುಕೊಳ್ಳುವ ಸಂಸ್ಥೆಗಳಿಗೆ ಮಾತ್ರ ಪರವಾನಗಿ ನೀಡಬೇಕು ಎಂದು ಸಚಿವರು ತಿಳಿಸಿದರು.

ಮೀನಮೇಷ ಎಣಿಸದೆ ಲಸಿಕೆ ಪಡೆಯಿರಿ: ಈಗಾಗಲೇ ರಾಜ್ಯದಲ್ಲಿ ಕೋರೊನಾ ಲಸಿಕೆ ನೀಡಲಾಗುತ್ತಿದ್ದು, ಹಲವರು ಭಯಗೊಂಡು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಮೀನಾಮೇಷಬಿಟ್ಟು ಲಸಿಕೆ ಪಡೆದು ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸುವಂತೆÉ ಸಚಿವ ಕೆ.ಸುಧಾಕರ್ ಅವರು ಮನವಿ ಮಾಡಿದರು.

ಪ್ರಧಾಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ನಂ-1: ಬಿ.ಸಿ.ಪಾಟೀಲ

ಸಮಾರಂಭದ ಮುಖ್ಯ ಅತಿಥಿಯಾಗಿ ಸಂಸದ ಡಾ.ಉಮೇಶ ಜಾಧವ ಅವರು ಮಾತನಾಡಿ, ಇಂದು ಐತಿಹಾಸಿಕ ದಿನವಾಗಿದ್ದು, ‘ನಾನು ಸಹ ವೈದ್ಯ, ಇಂತಹ ಸಂಸ್ಥೆಯ ಮಹತ್ವದ ಕುರಿತು ನನಗೆ ಅರಿವಿದೆ’ ಎಂದು ವಿವಿಯ ಪ್ರಾದೇಶಿಕ ಕೇಂದ್ರ ಹೊಸಕಟ್ಟಡ ಆರಂಭದ ಕುರಿತು ಸಂತಸ ವ್ಯಕ್ತಪಡಿಸಿದರು. ವೈದ್ಯಕೀಯ ಸೇವೆ ಎಂಬುವುದು ದೇವರಿಗೆ ಸಮಾನವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ, ಆ ಮೂಲಕ ಅವರು ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಬಲ್ಲದು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಸಮಾರಂಭಕ್ಕೂ ಮುನ್ನ ಗಣ್ಯರು ನೂತನ ಕಟ್ಟಡದ ವೀಕ್ಷಣೆ ಮಾಡಿದರು. ವಿದ್ಯಾಲಯದ ಕುಲಪತಿ ಡಾ.ಎಸ್. ಸಚ್ಚಿದಾನಂದ ಅವರು ಗಣ್ಯರನ್ನು ಸ್ವಾಗತಿಸಿರು.

ITI ವಿದ್ಯಾರ್ಥಿಗಳಿಗೆ ದ್ವಿತೀಯ ವರ್ಷಕ್ಕೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ

ಸಮಾರಂಭದಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಆರ್.ಗುತ್ತೇದಾರ, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ಡಾ.ಸಾಯಿಬಣ್ಣ ತಳವಾರ,  ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಅಧ್ಯಕ್ಷ ಚಂದು ಪಾಟೀಲ್ ಸೇರಿದಂತೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here