ಕಲಬುರಗಿ: ಎನ್ಎಸ್ಯುಐ ವತಿಯಿಂದ ದೇಶದಾದ್ಯಂತ ಹಮ್ಮಿಕೊಂಡಿರುವ ವಿದ್ಯಾರ್ಥಿಗಳಿಗೆ “ನೌಕರಿ ಕೊಡಿ ಇಲ್ಲ ಅಂದ್ರೆ ನಮ್ಮ ಪದವಿ ಪತ್ರ ವಾಪಸ ತಗೊಳಿ” ಎಂಬ ಪೋಸ್ಟರನ್ನು ಮಾಜಿ ಸಚಿವ, ಶಾಸಕರಾದ ಪ್ರಿಯಾಕ್ ಖರ್ಗೆ ಅವರು ಬಿಡುಗಡೆಗೊಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ, ಡಾ.ಕಿರಣ ದೇಶಮುಖ, ಪ್ರವೀಣ ಪಾಟೀಲ ಹರವಾಳ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ, ಎನ್ಎಸ್ಯುಐ ನ್ಯಾಷನಲ್ ಕಾರ್ಯದರ್ಶಿ ಅಜಯಕುಮಾರ, ಎನ್ಎಸ್ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ರಕಿಬ್, ಗುವಿಕಎನ್ಎಸ್ಯುಐ ಅಧ್ಯಕ್ಷ ಸುನೀಲ ಜಾಬಾದಿ, ಇಮ್ರಾನ್ ಸೌದಾಗರ್, ಬಾಬು ಬೀಳಗಿ, ರಾಜೇಶ ಕಾಂಬಳೆ, ಆಚಪ್ಪ, ಅಂಬರೀಷ್, ಶರತ್ ಕೊಗನೂರ್ ಇದ್ದರು.