ವಿಧಾನಪರಿಷತ್ ಕಲಾಪಕ್ಕೆ ಮಾಧ್ಯಮ ನಿರ್ಬಂಧ ಇಲ್ಲ: ಸಭಾಪತಿ ಬಸವರಾಜ ಹೊರಟ್ಟಿ

1
36

ಬೆಂಗಳೂರು: ಮಾರ್ಚ್ ನಾಲ್ಕರಿಂದ ಆರಂಭವಾಗುವ ಆಯವ್ಯಯ ಅಧಿವೇಶನದ ಸಮಯದಲ್ಲಿ ನಡೆಯುವ ವಿಧಾನಪರಿಷತ್ ಕಲಾಪದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.

ವಿಧಾನ ಪರಿಷತ್‍ನ ಸಭಾಪತಿಯಾದ ನಂತರ ಇಂದು ತಮ್ಮ ಕೊಠಡಿಯಲ್ಲಿ ಮೊದಲ ಬಾರಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತಾನಾಡಿದ ಅವರು ನಾವುಗಳು ಜನಪ್ರತಿನಿಧಿಗಳಾಗಿದ್ದು, ಸದÀನದಲ್ಲಿ ನಡೆಯುವ ಕಲಾಪವನ್ನು ನೇರವಾಗಿ ಸಾರ್ವಜನಿಕರ ವೀಕ್ಷಣೆಗೆ ಅನುವ ಮಾಡಿಕೊಡುವುದು ನಮ್ಮೆಲ್ಲರ ಜವಬ್ಧಾರಿಯಾಗಿದೆ, ಈ ಸಂಬಂಧ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು ಎಂದು ಹೇಳಿದರು.

Contact Your\'s Advertisement; 9902492681

ರಾಷ್ಟ್ರೀಯ ಹೆದ್ದಾರಿ ತಡೆದು ಎಸ್ಎಫ್ಐ ಪ್ರತಿಭಟನೆ

ಸದÀನದ ಬಗ್ಗೆ ಸಾರ್ವಜನಿಕರಲ್ಲಿ ಗೌರವ ಮೂಡುವಂತೆ ನಾವೆಲ್ಲ ಶಾಸನ ರಚನೆ ಹಾಗೂ ವಿದ್ಯಾಮಾನಗಳ ಕುರಿತು ಚರ್ಚೆಯಲ್ಲಿ ಭಾಗವಹಿಸುವುದು ಮುಖ್ಯ ಜವಬ್ಧಾರಿಯಾಗಿದೆ, ಅಂತೆಯೇ ಮಾಧ್ಯಮಗಳು ಸಹ ತುಂಬಾ ಜವಬ್ಧಾರಿಯಿಂದ ಕಾರ್ಯನಿರ್ವಹಿಸಬೇಕಾಗಿದೆ.
ಮಾರ್ಚ್ ನಾಲ್ಕರಿಂದ ಆರಂಭವಾಗುವ ಆಯವ್ಯಯ ಅಧಿವೇಶನ ಆ ತಿಂಗಳ ಕೊನೆಯವರೆಗೆ ನಡೆಯಲಿದೆ. ಈ ಸಮಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಂಬಂಧಿಸಿದಂತೆ ನೂತನ ಮಾಧ್ಯಮ ನಿಯಮಗಳನ್ನು ಜಾರಿಗೆ ತರಲು ಯೋಜಿಸಲಾಗಿದೆ. ಮಾರ್ಚ್ 2 ರಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸದನದಲ್ಲಿ ಮೊಬೈಲ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲು ಚಿಂತಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಮಾಧ್ಯಮವನ್ನು ನಿರ್ಬಂಧಿಸುವುದಿಲ್ಲ. ಆದರೇ, ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಸಂವಿಧಾನ ಕುರಿತಾದ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಈ ಸಂದರ್ಭದಲ್ಲಿ ವಿಧಾನಪರಿಷತ್ ಕಾರ್ಯದರ್ಶಿ ಶ್ರೀಮತಿ ಮಹಾಲಕ್ಷ್ಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಅವರು ಉಪಸ್ಥಿತರಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here