ಸಂವಿಧಾನ ಕುರಿತಾದ ಭಾಷಣ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

0
72

ಕಲಬುರಗಿ: ಯುವತಿಯರು ಇಂದು ಸಂವಿಧಾನ ಓದು ಬಳಗ ಹುಟ್ಟುಹಾಕಿಕೊಂಡು ಸಂವಿಧಾನ ಓದುತ್ತಿರುವುದು ಹೆಮ್ಮೆಯ ಸಂಗತಿ. ಎಲ್ಲ ಅಧಿಕಾರಗಳ ಕೀಲಿ ಕೈ ರಾಜಕೀಯ ಅಧಿಕಾರ ಯುವತಿಯರು ರಾಜಕೀಯ ಪ್ರವೇಶಿಸಿದರೆ ಇಡೀ ದೇಶದ ಚಿತ್ರಣವೇ ಬದಲಾಗುತ್ತದೆ ಎಂದು ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರೀಮಂತ ಹೋಳ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಸೋಮವಾರ ಸಂವಿಧಾನ ಓದು ಬಳಗವು ಸಂವಿಧಾನ ಕುರಿತಾದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಯುವಜನರಿಗಾಗಿ ಭೀಮ ಆರ್ಮಿ ಸಹಯೋಗದಲ್ಲಿ ಏರ್ಪಡಿಸಿದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದ ಜನತೆಯ ಭವಿಷ್ಯ ನಿರ್ಧಾರವಾಗುವುದೇ ಪಾರ್ಲಿಮೆಂಟಿನಲ್ಲಿ. ಡಾ. ಬಿ.ಆರ್ ಅಂಭೇಡ್ಕರ್ ಅವರು ಹೇಳಿದಂತೆ ಎಲ್ಲ ಅಧಿಕಾರಗಳ ಕೀಲಿ ಕೈ ರಾಜಕೀಯ ಅಧಿಕಾರ. ಯುವಜನರು ರಾಜಕೀಯ ಅಧಿಕಾರ ಹಿಡಿಯಬೇಕು. ಈ ರೀತಿ ಗುಂಪು ರಚಿಸಿ ಸಂವಿಧಾನ ಓದುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದರ ಜೊತೆಜೊತೆಗೆ ಸ್ಪರ್ಧಾತ್ಮ ಪರೀಕ್ಷೆ ಎದುರಿಸಿ ಆಡಳಿತದಲ್ಲಿ ತೀರ್ಮಾನ ತೆಗೆದುಕೊಳ್ಳುವ ಹಂತಕ್ಕೆ ಯುವಜನರು ಬೆಳೆಯಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ಯುವಜನರ ಅಗತ್ಯದ ಸಹಾಯ ಸಹಕಾರ ಯಾವತ್ತೂ ಇರುತ್ತದೆ ಎಂದು ಪ್ರೋತ್ಸಾಹ ನುಡಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ತಡೆದು ಎಸ್ಎಫ್ಐ ಪ್ರತಿಭಟನೆ

ಅತಿಥಿಗಳಾಗಿ ಆಗಮಿಸಿದ ಯುವ ಚಿಂತಕ ನಾಗೇಶ ಹರಳಯ್ಯ ಮಾತನಾಡುತ್ತ ನಾವೆಲ್ಲ ಇಂದು ಸಂವಿಧಾನವನ್ನು ಅರ್ಪಿಸಿಕೊಂಡು ಸಂವಿಧಾನ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಕೌಟುಂಬಿಕ ಪ್ರಜಾಪ್ರಭುತ್ವವನ್ನು ಮರೆಯುತ್ತಿದ್ದೇವೆ. ಕುಟಂಬದ ಒಳಗಡೆ ಪುರುಷರಂತೆ ಸ್ತ್ರೀಯರಿಗೂ ಅಭಿವ್ಯಕ್ತಿಗಳಿವೆ. ಅವುಗಳಿಗೆ ಮನ್ನಣೆ ಸಿಗಬೇಕು. ಅವರ ಸ್ವಾತಂತ್ರ್ಯವನ್ನು ಅವರು ಅನುಭವಿಸುವಂತಾಗಬೇಕು. ಸ್ವತಃ ಅಂಬೇಡ್ಕರ್ ಅವರು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದರು.

ನಂತರದಲ್ಲಿ ಸಾಮಾಜಿಕ ಕಾರ್ಯಕರ್ತೆ ರುಕ್ಮಿಣಿ ನಾಗಣ್ಣವರ ಮಾತನಾಡಿ ನಾವು ಓದಿ ತಿಳಿದುಕೊಂಡಿರುವುದನ್ನು ನಮ್ಮ ನಡವಳಿಕೆಗಳಲ್ಲಿ ತರುವುದು ಬಹಳ ಮುಖ್ಯ. ಹಾಗೆ ಆದಾಗಲೇ ನಮ್ಮ‌ ನುಡಿ ನಡೆಗಳು ಇತರರಿಗೆ ಮಾದರಿ ಆಗುತ್ತವೆ. ಯುವಜನರು ಆ ದಿಶೆಯಲ್ಲಿ ಪುಟ್ಟ ಹೆಜ್ಜೆ ಹಾಕಿದ್ದಾರೆ. ಪುಟ್ಟ ಪುಟ್ಟ ಹೆಜ್ಜೆಗಳೇ ಧಿಟ್ಟ ಹೆಜ್ಜೆಗಳಾಗಲಿ. ಈ ಬೆಳಗವಣಿಗೆ ತುಂಬ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

“ನಿರ್ವಹಣೆಯಿಲ್ಲದೇ  ಗಬ್ಬೆದ ಸಾರ್ವಜನಿಕ ಮೂತ್ರಾಲಯ”

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭೀಮ ಆರ್ಮಿ ರಾಜ್ಯಾಧ್ಯಕ್ಷ ಎಸ್.ಎಸ್. ತಾವಡೆ ಮಾತನಾಡಿ ಯುವಜನರು ತಾವೇ ಸಂಘಟಿತರಾಗಿ ಒಂದು ಗುಂಪು ರಚಿಸಿ ಗೂಗಲ್ ಮೀಟ್ ನಲ್ಲಿ ‘ಸಂವಿಧಾನ ಓದು’ ನಡೆಸುತ್ತಿರುವುದು ಹೆಮ್ಮೆಯ ವಿಚಾರ. ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಸ್ವತಃ ಒಬ್ಬ ಕ್ರೀಡಾಪಟುವಾಗಿರುವ ನಾನು ಕಲಬುರಗಿಯ ಆ ನಿಟ್ಟಿನಲ್ಲಿ ಪ್ರತಿವರ್ಷ ೫೦ ಯುವಜನರಿಗೆ ತರಬೇತಿ ನೀಡುತ್ತಿದ್ದೇನೆ. ಯುವಜನರು ಅದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಚಿತ್ತಾಪುರ: ಬಸ್ಸಿಗಾಗಿ ವಿದ್ಯಾರ್ಥಿಗಳ ಪರದಾಟ

ಕಾರ್ಯಕ್ರಮವನ್ನು ರಮಾ ದೊಡ್ಡಮನಿ ನಿರೂಪಿಸಿದರು. ಸಂವಾದದ ಒಡನಾಡಿ ಉಮೇಶ ಸಜ್ಜನಕರ್ ಸಂವಿಧಾನ ಪ್ರಸ್ತಾವನೆ ಓದಿಸಿದರು. ಸಂವಿಧಾನ ಓದು ಬಳಗದ ಕುರಿತು ಪವಿತ್ರಾ ಕನ್ನಡಗಿ ಪರಿಚಯಾತ್ಮವಾಗಿ ಮಾತನಾಡಿದರು. ಅಶ್ವಿನಿ ಎಂಕಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ನೇಹ ದೊಡ್ಡಮನಿ ಸ್ವಾಗತಿಸಿದರು. ಪವಿತ್ರಾ ಗುಂಡಗುರ್ತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here