ಸುರಪುರ: ನಗರ ನಾಡಿನ ಆರಾಧ್ಯ ದೇವತೆಯಲ್ಲಿ ಒಬ್ಬರಾದ ಸಗರದ ಯಲ್ಲಮ್ಮ ದೇವಿಯ ಪಲ್ಲಕ್ಕಿ ಮೇರವಣಿಗೆ ಉತ್ಸವವು ನಗರದ ರಂಗಂಪೇಟೆಯಲ್ಲಿ ಅದ್ಧೂರಿಯಾಗಿ ಜರುಗಿತು.
ಹಸನಾಪುರ ಕ್ಯಾಂಪ್‌ನಿಂದ ಆರಂಭಗೊಂಡ ಮೆರವಣಿಗೆಯು ತಿಮ್ಮಾಪುರ ಮೂಲಕ ಕೋಮಟಗಲ್ಲಿವರೆಗೆ ಭಕ್ತಾದಿಗಳು ದೇವಿಯ ಪಲ್ಲಕ್ಕಿಗೆ ಹೂ ಹಣ್ಣು ಕಾಯಿ ನೈವೇದ್ಯ ಸಮರ್ಪಿಸುವುದು ಹಾಗು ದೇವಿಯ ಅರ್ಚಕರ ಪಾದಕ್ಕೆ ನೀರು ಹಾಕಿ ಭಕ್ತಿ ಸಮರ್ಪಿಸಿದರು.
ಸುರಪುರ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಉದ್ಯೋಗ ಮೇಳ
ಮೆರವಣಿಗೆಯುದ್ದಕ್ಕೂ ಭಾಜಾ ಭಜಂತ್ರಿಗಳ ವಾದ್ಯದೊಂದಿಗೆ ಯಲ್ಲಮ್ಮ ನಿನ್‌ನಾಲ್ಕ್ ಉದೋ ಉದೋ ಎಂದು ಘೋಷಣೆ ಕೂಗುವುದು ಹಾಗು ಎಲ್ಲರಿಗು ದೇವಿಯ ಭಂಡಾರವನ್ನು ಹಚ್ಚುತ್ತ ಜನರು ಹರ್ಷಗೊಂಡರು.
ದೇವಿಯ ಉತ್ಸವ ಮೆರವಣಿಗೆಯಲ್ಲಿ ಮುಖಂಡರಾದ ಮುರಳಿ ಅಂಬುರೆ ಅರುಣ ಕಂಚಗಾರ ಹರೀಶ್ ತ್ರಿವೇದಿ ಬಾಲು ಹಸನಾಪುರ ಯಲ್ಲಪ್ಪ ಪರಶುರಾಮ ಮಂಜುನಾಥ ಧೋತ್ರೆ ಸೇರಿದಂತೆ ನೂರಾರು ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.