ಸುರಪುರ: ನಗರದ ಸಮುದಾಯ ಆರೋಗ್ಯ ಕೇಂದ್ರ ವಿಶೇಷ ಉಚಿತ ಕ್ಷೇತ್ರ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು.
ಶಿಬಿರವನ್ನು ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ಪ್ರತಿಯೊಬ್ಬರು ವರ್ಷದಲ್ಲಿ ಒಂದುಬಾರಿಯಾದರೂ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು.ಅಲ್ಲದೆ ಇಂದು ಅತೀ ಹೆಚ್ಚಿನ ಜನರಲ್ಲಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಂತಹ ಕಾಯಿಲೆಗಳು ಬರುತ್ತದೆ ಆದ್ದರಿಂದ ಮುಂಚಿತವಾಗಿಯೇ ನಿತ್ಯವು ವ್ಯಾಯಾಮ ಯೋಗಾಸನ ಮತ್ತು ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು ಎಂದು ತಿಳಿಸಿದರು.
ಸುರಪುರ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಉದ್ಯೋಗ ಮೇಳ
ಖಾಜಾ ಸಮೀ ಉರ್ ರಹೆಮಾನ್ ಅನ್ಸಾರಿ ನೇತೃತ್ವ ವಹಿಸಿ ಮಾತನಾಡಿ,ಸರಕಾರ ಜನರ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವ ಒಳ್ಳೆಯ ಯೋಜನೆಯನ್ನು ಹಮ್ಮಿಕೊಂಡಿದೆ,ಇದರಿಂದ ಅನೇಕ ಜನರು ಮನೆಯಿಂದ ಹೊರಗೆ ಹೋಗಲಾಗದಂತವರಿಗು ಉತ್ತಮವಾದ ಸೇವೆ ಲಭಿಸಿದಂತಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಕಲಾಪಕ್ಕೆ ಮಾಧ್ಯಮ ನಿರ್ಬಂಧ ಇಲ್ಲ: ಸಭಾಪತಿ ಬಸವರಾಜ ಹೊರಟ್ಟಿ
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಡಾ. ಪರಿಮಳ ಮುಖಂಡ ಅಬೀದ್ ಹುಸೇನ್ ಪಗಡಿ ಹಿರಿಯ ಆರೋಗ್ಯ ಸಹಾಯಕ ಸೈಯದ್ ಉಸ್ತಾದ ಬಹರಿ ಕಿರಿಯ ಮಹಿಳಾ ಆರೋಗ್ಯ ಅಧಿಕಾರಿ ನಾಗಮಣಿ ನೇತ್ರ ತಜ್ಞ ಡಾ.ಶಮೀಮ್ ಅಹ್ಮದ್ ಹಾಗು ಅಶೋಕ ಉಮಾಶಂಕರ ಸೇರಿದಂತೆ ಆಶಾ ಮತ್ತು ಶುಶ್ರೂಷಕಿಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.