ಜ್ಞಾನ ಎಂಬ ಅಸ್ತ್ರ ಇದ್ದರೆ ಎತ್ತರಕ್ಕೆ ಬೆಳೆಯಬಹುದು: ಸಾಬಣ್ಣ ತಳವಾರ

0
145

ಶಹಾಬಾದ: ಜ್ಞಾನ ಎಂಬ ಅಸ್ತ್ರ ಒಂದಿದ್ದರೇ ವ್ಯಕ್ತಿ ಬಹು ಎತ್ತರಕ್ಕೆ ಬೆಳೆಯುತ್ತಾನೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ ಹೇಳಿದರು.

ಅವರು ಮಂಗಳವಾರ ಭಂಕೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದರು.

Contact Your\'s Advertisement; 9902492681

ರಾಯಚೂರು ವಿವಿ ಲಾಂಛನದಲ್ಲಿ ಯಾದಗಿರಿ ಜಿಲ್ಲೆಯನ್ನು ಪರಿಗಣಿಸಲು ಕಸಾಪ ಆಗ್ರಹ

ಮನೆಯಲ್ಲಿ ದೀಪ ಇರಲಿಲ್ಲ. ಸೋರು ಮನೆಯ ಮ್ಯಾಳಗಿ. ಇದರ ಮಧ್ಯೆ ಬಡತನದ ಬೆಂದ ನನಗೆ ಇಂದು ರಾಜ್ಯ ಸರ್ಕಾರ ವಿಧಾನಸೌಧದ ಪಕ್ಕದಲ್ಲೇ ಮನೆ ನೀಡಿದ್ದಾರೆ. ಇದು ಸಾಬಣ್ಣನವರಿಗೆ ನೀಡಿದ ಕೊಡುಗೆ ಅಲ್ಲ.ಅದು ನಾನು ಪಡೆದುಕೊಂಡ ವಿದ್ಯೆಯಿಂದಲೇ ಸಾಧ್ಯವಾಯಿತು. ವಿದ್ಯೆ ಗುಡಿಸಲಿನಲ್ಲಿ ಹುಟ್ಟಿದರೂ ಅರಮನೆಯಲ್ಲಿ ಮೆರೆಯುತ್ತದೆ ಎನ್ನುವುದಕ್ಕೆ ಅನೇಕ ಮಹಾ ವ್ಯಕ್ತಿಗಳ ಉದಾಹರಣೆಗಳಿವೆ. ಸೈಕಲ್ ಮೇಲೆ ಪೇಪರ್ ಹಾಕಿದ ಅಬ್ದುಲ್ ಕಲಾಂ ಅವರು ಈ ದೇಶದ ರಾಷ್ಟ್ರಪತಿಗಳಾಗಿದ್ದು, ಅವರು ಪಡೆದ ವಿದ್ಯೆಯಿಂದ. ಪೇಪರ್ ಹಾಕಿ, ಹೊಟೇಲ್‌ನಲ್ಲಿ ಕೆಲಸ ಮಾಡಿ, ನದಿಯಲ್ಲಿ ಈಜುಕೊಂಡು ಶಾಲೆಗೆ ಹೋಗಿ ಅನೇಕ ಜನರು ಕಲಿತವರಿದ್ದಾರೆ.ಅದಕ್ಕಾಗಿ ಮಕ್ಕಳು ಜೀವನದಲ್ಲಿ ಓದುವ ಹಂಬಲ ಮತ್ತು ಓದುವ ಹಸಿವನ್ನು ಬೆಳೆಸಿಕೊಳ್ಳಬೇಕು.

ಸಾಧನೆಗೆ ಎಂದಿಗೂ ಬಡತನ ಅಡ್ಡಿಯಾಗುವುದಿಲ್ಲ. ಮನೆಯಲ್ಲಿ ವಿದ್ಯುತ್ ಇರಲಿಲ್ಲ.ಪಾಲಕರ ಸಹಕಾರ ಇರಲಿಲ್ಲ.ಅಲ್ಲದೇ ಓದಬೇಡ ಎನ್ನುತ್ತಿದ್ದರು.ಆದರೂ ನಮ್ಮ ತಂದೆ ಮಾಡಿದ ಒಂದು ಒಳ್ಳೆ ಕೆಲಸವೆಂದರೆ ಅದು ಶಾಲೆಯಲ್ಲಿ ದಾಖಲಾತಿ ಮಾಡಿಸಿದ್ದು.ಒಂದು ವೇಳೆ ದಾಖಲಾತಿ ಮಾಡಿಸದಿದ್ದರೇ ನಾನು ದನ ಕಾಯುವ, ಯಾವುದೋ ರಸ್ತೆಯಲ್ಲಿ ಹರಟೆ ಹೊಡೆಯುತ್ತಿದ್ದೆ.ಆದರೆ ನಾನು ನನ್ನಲ್ಲಿದ್ದ ಓದುವ ಹಸಿವು ನನ್ನನ್ನು ಮೇಲಕ್ಕೆ ತೆಗೆದುಕೊಂಡು ಹೋಯಿತು. ಅದಕ್ಕಾಗಿ ಸಾಕಷ್ಟು ಶ್ರಮವಹಿಸಿ ಅಭ್ಯಾಸ ಮಾಡಿ.ಸಮಯಕ್ಕೆ ಮಹತ್ವ ನೀಡಿ.ಕಾರಣ ಜಗತ್ತಿನಲ್ಲಿಯೇ ಏನಾದರೂ ಸಮಾನವಾಗಿ ಹಂಚಲ್ಪಟ್ಟಿದ್ದು ಇದ್ದರೇ ಅದು ಸಮಯ ಮಾತ್ರ.ಅದರ ಮಹತ್ವವನ್ನು ತಿಳಿದುಕೊಂಡು ಮುನ್ನಡೆಯಿರಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

“ನೌಕರಿ ಕೊಡಿ ಇಲ್ಲ ಅಂದ್ರೆ ನಮ್ಮ ಪದವಿ ಪತ್ರ ವಾಪಸ ತಗೊಳಿ” ಶಾಸಕರಿಂದ ಪೋಸ್ಟರ ಬಿಡುಗಡೆ

ಇದೇ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಿಕಾಂತ ಕಂದಗೂಳ, ವೀಣಾ ನಾರಾಯಣ ಅವರನ್ನು ಸನ್ಮಾನಿಸಲಾಯಿತು.ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಮುಖ್ಯಗುರುಗಳಾದ ಶಂಕರ ಜಾಧವ ವೇದಿಕೆಯ ಮೇಲಿದ್ದರು. ಎಮ್.ಡಿ.ಜಕಾತೆ,ಸೀತಮ್ಮ.ಎನ್, ಸಯ್ಯದ್ ಯುನೂಸ್,ನಿಂಗಣ್ಣ ಹುಳಗೋಳಕರ್, ಶ್ರೀಮಂತ ನಾಟೇಕಾರ,ಮರಲಿಂಗ ಯಾದಗಿರಿ ಇತರರು ಇದ್ದರು.

ಶಾಂತಮಲ್ಲ ಶಿವಭೋ ನಿರೂಪಿಸಿದರು, ದತ್ತಪ್ಪ ಕೋಟನೂರ್ ಸ್ವಾಗತಿಸಿದರು, ವಿಷ್ಣುತೀರ್ಥ ಆಲೂರ ವಂದಿಸಿದರು.

ನಾನು ಹುಟ್ಟಿದ್ದು ಭಂಕೂರ ಗ್ರಾಮದಲ್ಲಿ. ಇದೇ ಗ್ರಾಮದ ಶಾಲೆಯಲ್ಲಿಯೇ ಕಲಿತ್ತಿದ್ದೆನೆ. ಕಲಿಯುವ ಸಂದರ್ಭದಲ್ಲಿ ನನ್ನನ್ನು ಹುಚ್ಚ ಎನ್ನುತ್ತಿದ್ದರು. ಇದೇ ಗ್ರಾಮದ ಸರಕಾರಿ ಶಾಲೆಯಲ್ಲಿ ಕಲಿತು ಇಂದು ಇದೇ ಶಾಲೆಯಿಂದ ಸನ್ಮಾನ ಸ್ವಿಕರಿಸಿಕೊಂಡಿದ್ದು ನೋಡಿದರೇ, ಈ ಸನ್ಮಾನ ನೋಬೆಲ್ ಪ್ರಶಸ್ತಿಗಿಂತ ಹೆಚ್ಚಿನ ಸಂತೋಷ ನೀಡಿದೆ -ಸಾಬಣ್ಣ ತಳವಾರ ವಿಧಾನ ಪರಿಷತ್ ಸದಸ್ಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here