ಅಫಜಲಪುರ: ಚಂಚಲತೆ ಇರುವ ಮನಸ್ಸನ್ನು ಕೇಂದ್ರಿಕರಿಸಿ ಹತೋಟಿಯಲ್ಲಿಡಲು ಯೋಗಭ್ಯಾಸ ಬಹಳ ಅಗತ್ಯವಾಗಿದೆ ಅಷ್ಟೇ ಅಲ್ಲದೇ ಉತ್ತಮ ಆರೋಗ್ಯ ವೃದ್ದಿಗೊಳಿಸಿ ಆರೋಗ್ಯದಿಂದರಲು ಹಾಗೂ ಉಲ್ಲಾಸದಿಂದರಲು ಯೋಗದಿಂದ ಮಾತ್ರ ಸಾಧ್ಯ ಎಂದು ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಹೇಳಿದರು.
ಅಫಜಲಪುರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ರಥ ಸಪ್ತಮಿ ಅಂಗವಾಗಿ ಹಮ್ಮಿಕೊಂಡ ತಾಲೂಕಿನ ಬಳೂರ್ಗಿ ಗ್ರಾಮದ ಸರಕಾರಿ ಆರ್ಯುವೇದಿಕ ಕ್ಷೇಮ ಕೇಂದ್ರ ಹಾಗೂ ಪತಂಜಲಿ ಸಂಸ್ಥೆಯಿAದ ಹಮ್ಮಿಕೊಂಡ ಯೋಗ ಶಿಬಿರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸುವ ಮೂಲಕ ಯೋಗದಿಂದ ನಮ್ಮ ಜೀವನದಲ್ಲಿ ಆಗುವ ಪ್ರಯೋಜನೆಗಳ ಬಗ್ಗೆ ತಿಳಿಸಿದ ಅವರು ವಿದ್ಯಾರ್ಥಿಗಳು ಸದೃಢ ದೇಹವನ್ನು ಕಾಪಾಡಿಕೊಳ್ಳಲು ಮತ್ತು ಓದಿದ ಅಭ್ಯಾಸವನ್ನು ನೆನಪಿನ್ನಲ್ಲಿ ಇಟ್ಟುಕೊಳ್ಳಲು ಯೋಗ ಬಹಳ ಸಹಕಾರಿಯಾಗಲಿದೆ ಹೀಗಾಗಿ ವಿದ್ಯಾರ್ಥಿಗಳು ತಮ್ಮ ನಿತ್ಯ ಜೀವನದಲ್ಲಿ ಯೋಗ ಬಹಳ ಮುಖ್ಯವಾಗಿದೆ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಡಾ. ರಾಜೇಶ್ವರಿ ಎಂ.ಎಸ್. ಡಾ. ಸೂಗೇಶ್ವರ ಮಠ, ಮಡಿವಾಳಪ್ಪ ಮುಗಳಿ, ಪದ್ಮಾವತಿ ಎಸ್, ಡಾ. ಸಾವಿತ್ರಿ, ಶ್ರೀಮತಿ ಖುತೇಜ ನಸ್ರೀನ್, ಶ್ರೀಮತಿ ಪ್ರೇಮಲತಾ, ಶ್ರೀಮತಿ ಪ್ರತಿಭಾ ಮಹೇಂದ್ರಕರ್, ಶ್ರೀಮತಿ ರಾಣಿ ಬುಕ್ಕೆಗಾರ, ಶ್ರೀಶೈಲ ಮೇತ್ರಿ, ಚಿದಾನಂದ ವಿಭೂತಿ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಕಾಲೇಜು ಉಪನ್ಯಾಸಕರು ಮತ್ತು ಸಿಬ್ಬಂದಿಗಳಿದ್ದರು.