ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮದ ಹೊಳಿ ಯಲ್ಲಮ್ಮಾ ದೇವಿಯ ಸ್ನಾನ ಘಟ್ಟದ ಭೀಮಾನದಿಯ ಮೊದಲ ಹಂತದ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಬ್ರಿಗೇಡ ಸಂಚಾಲಕರಾದ ಆನಂದ ಶೆಟ್ಟಿ ಹಾಗೂ ರಾಹುಲ ಸುತಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಕ್ಷೇತ್ರ ಮಣ್ಣೂರ ಗ್ರಾಮದ ಹೊಳಿ ಯಲ್ಲಮ್ಮಾ ದೇವಿಯ ದೇವಸ್ಥಾನ ಭೀಮಾ ನದಿಯ ದಡದಲ್ಲಿ ಇರುವುದರಿಂದ ದೇವಿಯ ದರ್ಶನಕ್ಕೆ ದಿನಾಲು ವಿವಿದಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ ಭೀಮಾನದಿಯಲ್ಲಿ ಸ್ನಾನ ಮಾಡುತ್ತಾರೆ ಹೀಗಾಗಿ ನದಿಯಲ್ಲಿ ಕಸ, ಕಡ್ಡಿ, ಪ್ಲಾö್ಯಸ್ಟಿಕ್ ಬಾಟಲಿಗಳು, ಹಾಗೂ ಭಕ್ತರು ಮಡಿ ಬಟ್ಟೆಗಳನ್ನು ನದಿಯಲ್ಲಿ ಬಿಡುವದರಿಂದ ನದಿಯಲ್ಲಿ ತ್ಯಾಜ್ಯ ಹೆಚ್ಚಾಗಿದೆ ಹೀಗಾಗಿ ನದಿಯ ನೀರು ಕಲುಷಿತಗೊಳ್ಳುತ್ತಿರುವುದನ್ನು ನೋಡಿ ನಮ್ಮ ಬ್ರಿಗೇಡ್ ತಂಡ ತರುಣರು ಸೇರಿ ಸ್ವಚ್ಚತೆಗೆ ಮುಂದಾಗಿದ್ದೇವೆ ಎಂದರು.
ಶೀಘ್ರದಲ್ಲಿ ಬೇಡಿಕೆ ಇಡೇರದಿದ್ದರೆ ಹೋರಾಟ ಖಚಿತ ಉಮೇಶ
ಈ ಸ್ವಚ್ಚತಾ ಕಾರ್ಯದಲ್ಲಿ ಸುಮಾರು ೪೦ಕ್ಕೂ ಹೆಚ್ಚು ಬ್ರಿಗೇಡ ಕಾರ್ಯಕರ್ತರು ಭಾಗಿಯಾಗಿ ಸುಮಾರು ೬ ಟಾಕ್ಟರ್‌ನಷ್ಟು ತ್ಯಾಜ್ಯವನ್ನು ಹೊರತೆಗೆಯಲಾಗಿದೆ ಎಂದು ಹೇಳಿದ ಅವರು ಈ ಸ್ವಚ್ಚತಾ ಕಾರ್ಯ ತಾಲೂಕಿನ ಗುಡಿ-ಗುಂಡಾರ, ದೇವಸ್ಥಾನಗಳ ಆವರಣ, ಗೂಪೂರಗಳು ಸುತ್ತ-ಮುತ್ತ, ಪುರಾತನ ದೇಗುಲಗಳ ರಕ್ಷಣೆ ಹಾಗೂ ಸ್ವಚ್ಚತೆ ಮಾಡಲಾಗುತ್ತಿದೆ ಅಷ್ಟೇ ಅಲ್ಲದೇ ತಾಲೂಕಿನ ವಿವಿಧ ಮಹಾಪುರಷರ, ಶರಣರ, ಸಂತರ, ಋಷಿಮುನಿಗಳ ವೃತ್ತಗಳ ಸುತ್ತ ಮುತ್ತ ಸ್ವಚ್ಚತೆ ಕಾಪಾಡುವ ಕೆಲಸ ಬ್ರಿಗೇಡ ಯುವ ತರುಣರಿಂದ ನಿರಂತರ ಸಮಾಜಮುಖಿ ಸೇವೆ ಮಾಡಲಾಗುತ್ತಿದೆ ಎಂದ ಅವರು ಮಣ್ಣೂರನಲ್ಲಿ ನಡೆತ್ತಿರುವ ಸ್ವಚ್ಚತಾ ಕಾರ್ಯ ತಾಲೂಕಿನ ಸುಕ್ಷೇತ್ರ ಚಿನ್ಮಯಗಿರಿ ಮಠದ ಶ್ರೀ ವೀರ ಮಹಾಂತ ಶಿವಾಚಾರ್ಯರ ಜನ್ಮ ದಿನದ ಅಂಗವಾಗಿ ಅವರಿಗೆ ಈ ಸೇವೆ ಸಮರ್ಪಣೆ ಮಾಡಲಾಗುವುದು ಎಂದರು.