ಆಳಂದ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು ೫ ಲಕ್ಷ. ರೂ ದೇಣಿಗೆ ನೀಡಿದರು.
ಬುಧುವಾರ ಆರ್ಎಸ್ಎಸ್ ಪ್ರಮುಖರಿಗೆ ಶಾಸಕ ಸುಭಾಷ್ ಗುತ್ತೇದಾರ ಅವರು ೫ ಲಕ್ಷ.ರೂ ಮೊತ್ತದ ಚೆಕ್ ಹಸ್ತಾಂತರಿಸಿದರು.
ಮಂದಿರ ನಿರ್ಮಾಣ ಕೇವಲ ಧಾರ್ಮಿಕ ಸ್ಥಳವಾಗಿರದೇ ಅದು ರಾಷ್ಟ್ರ ಮಂದಿರವಾಗಿರಲಿದೆ ಅಲ್ಲಿ ನಡೆಯುವ ಪ್ರತಿಯೊಂದು ಆಧ್ಯಾತ್ಮಿಕ ಚಟುವಟಿಕೆಗಳಿಗೆ ತಮ್ಮ ಬೆಂಬಲವಿರಲಿದೆ ಎಂದರು.
ಜರ್ಮನಿ ಅಂತರಾಷ್ಟ್ರೀಯ ಕಲಾ ಪ್ರದರ್ಶನ: ರೆಹಮಾನ ಪಟೇಲ್ ಕಲಾಕೃತಿ ಆಯ್ಕೆ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಕೋಟ್ಯಾಂತರ ಹಿಂದೂಗಳ ಭಾವನೆಯಾಗಿತ್ತು ಅದಕ್ಕೆ ನ್ಯಾಯಾಲಯವು ಮನ್ನಣೆ ನೀಡಿ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದೆ ಇದು ತಮಗೆಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ಆರ್ಎಸ್ಎಸ್ನ ಉತ್ತರ ಪ್ರಾಂತ ಸಹ ಭೌದ್ಧಿಕ ಪ್ರಮುಖ ಕೃಷ್ಣಾಜೀ ಜೋಶಿ, ಕಲಬುರಗಿ ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಖ್ಯಾತ ಉದ್ಯಮಿ ಸುಭಾಷ್ ಕಮಲಾಪುರಕರ ಇದ್ದರು.