ಕಲಬುರಗಿ: ಅಖಿಲ ಭಾರತ 85 ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಲೆಕ್ಕ ಪತ್ರವನ್ನು ಕೂಡಲೇ ಮುಗಿಸಿ ಆಡೀಟ್ ವರದಿಯನ್ನು ಕೂಡಲೇ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆಲವರು ಮಾಧ್ಯಮಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾಡಳಿತದ ಬಗ್ಗೆ ಆರೋಪಗಳನ್ನು ಮಾಡುವುದರ ಮೂಲಕ ಸಾರ್ವಜನಿಕ ವಲಯದಲ್ಲಿ ಅಪ ನಂಬಿಕೆ ಬಿತ್ತಿಸುವ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರತಿಕ್ರಿಯೆ ನೀಡಲು ಯಾವುದೇ ದಾಖಲೆಗಳಿಲ್ಲರುವುದರಿಂದ ಉತ್ತರಿಸಲಾಗುತ್ತಿಲ್ಲ.ಸರಕಾರಿ ನೌಕರರ ಜಮಾವಾದ ಹಣವನ್ನು ಕೂಡಲೇ ಸ್ಥಗಿತಗೊಳಿಸಿ ಲೆಕ್ಕ ಪತ್ರ ನೀಡಲು ಮನವಿ ಪತ್ರ ಸಲ್ಲಿಸಲಾಯಿತು.ಜಿಲ್ಲಾಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ಸೂಚಿಸಿದರು.
ಅರಣ್ಯ ಇಲಾಖೆಯಲ್ಲಿ ಮುಂಬಡ್ತಿ ಕಲ್ಯಾಣ ಕರ್ನಾಟಕ್ಕೆ ಮಾದರಿಯಾದ ಸಿಸಿಎಫ್
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಉತ್ತರ ವಲಯದ ಅಧ್ಯಕ್ಷ ಲಿಂಗರಾಜ ಸಿರಗಾಪೂರ,ವಿ.ಎಸ.ಹತ್ತಿ,ಬಿ.ಜಯಸಿಂಗ್, ಪ್ರಶಾಂತ ತಂಬೂರಿ, ಆನಂದ ನಂದೂರಕರ್, ವಿಜಯ ಚೇಂಗಟಾ ಸೇರಿದಂತೆ ಅನೇಕರು ಇದ್ದರು.