ಸಾರಿಗೆ ಬಸ್ ಡಿಕ್ಕಿ: ಮೃತ ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ

2
39

ಕಲಬುರಗಿ: ಫೆ. 23 ರಂದು ಸಂಜೆ ಕಾಳಗಿ ಡಿಪ್ಪೂಬಸ್ಸು ವಿದ್ಯಾರ್ಥಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದ್ದು, ಘಟನೆಯಲ್ಲಿ ಇನ್ನೋರ್ವ ವ್ಯಕ್ತಿ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಮೃತ ಕುಟುಂಬ ಹಾಗೂ ಗಾಯಾಳುಗಳ ಭೇಟಿ ನೀಡಿದ ವಿರುದ್ಧ ಕೆಪಿಆರ್ಎಸ್ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಶರಣಬಸಪ್ಪಾ ಮಮಶೆಟ್ಟಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ನೀಡುವಂತೆ ಆಗ್ರಹ

Contact Your\'s Advertisement; 9902492681

ಕಾಳಗಿ ತಾಲ್ಲೂಕಿನ ಕುಡಳ್ಳಿ ಗ್ರಾಮದ ನಿವಾಸಿ ಕಾಲೇಜ ವಿಧ್ಯಾರ್ಥಿಯಾದ ಸಿದ್ಧಲಿಂಗ ಮಾರುತಿ (18) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೋರ್ವ ರೆವಣಸಿದ್ದಪ್ಪಾ ರಾಜಕುಮಾರ (18) ಬೆನ್ನಿನ ಎಲುಬು ಮುರಿದು ಕಲಬುರಗಿಯ ಚಿರಾಯಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಮುಂಬಡ್ತಿ ಕಲ್ಯಾಣ ಕರ್ನಾಟಕ್ಕೆ ಮಾದರಿಯಾದ ಸಿಸಿಎಫ್

NEKSRTC ಅಧಿಕಾರಿಗಳು ನೊಂದ ಕುಟುಂಬಕ್ಕೆ ಭೇಟಿ ನೀಡಲಾರದ ಇದೊಂದು ಹಿನಾಯ ಸಂಗತಿಯಾಗಿದೆ ಎಂದು ಮಮಶೆಟ್ಟಿ ಆಕ್ರೊಶ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ವಿರೋಧಿ ಧೋರಣೆ ವಿರೋಧಿಸಿ ಅವರ ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯಿಸಿ ಕುಡಳ್ಳಿ ಗ್ರಾಮದಲ್ಲಿ ರಸ್ತಾ ರೊಕ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here