ಶಹಾಬಾದ: ಸರ್ವಜ್ಞ ಜಯಂತಿ

1
70

ಶಹಾಬಾದ: ತ್ರಿಕಾಲ ಜ್ಞಾನಿಯಾಗಿ,ವಾಸ್ತವಿಕೆ ಅರಿತು,ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವರಕವಿ ಸರ್ವಜ್ಞ ಇಂದಿಗೂ ಅಜರಾಮರವಾಗಿದ್ದಾರೆ ಎಂದು ಭಂಕೂರ ಗ್ರಾಪಂ ಸದಸ್ಯ ಲಕ್ಷ್ಮಿಕಾಂತ ಕಂದಗೂಳ ಹೇಳಿದರು.

ಅವರು ಭಂಕೂರ ಗ್ರಾಮದ ಕೋರಿಸಿದ್ದೇಶ್ವರ ಕೋಚಿಂಗ್ ಕೇಂದ್ರ ಹಾಗೂ ಕುಂಬಾರ ಸಮಾಜದ ವತಿಯಿಂದ ಆಯೋಜಿಸಲಾದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಆಸ್ಪತ್ರೆ ವೈದ್ಯನ ವಿರುಧ್ಧ ಜಯ ಕರ್ನಾಟಕ ಪ್ರತಿಭಟನೆ

ನಾಡಿನೆಲ್ಲಡೆ ಸಂಚರಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕಂಡ ಸತ್ಯವನ್ನು ನೇರವಾಗಿ ಹೇಳುವ ಮೂಲಕ ಸಮಾಜಕ್ಕೆ ಎಚ್ಚರಿಕೆ ನೀಡಿದ್ದಾರೆ.ವಿದ್ಯೆ,ಜಾತಿ,ಕೃಷಿ,ಮಾತು,ದುಶ್ಚಟಗಳ ಕುರಿತು ವಚನಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.ಆದರೆ ಇಂದು ಗುಟಕಾ,ತಂಬಾಕು ಹಾಗೂ ಕುಡಿತ ಮೋಜಿಗೆ ಜನರು ಬಲಿಯಾಗುತ್ತಿದ್ದಾರೆ.ಆದ್ದರಿಂದ ಸರ್ವಜ್ಞನ ವಚನಗಳ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ನಡೆದರೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.

ಪ್ರಬುದ್ಧ ಚಿಂತನ ವೇದಿಕೆಯ ಅಧ್ಯಕ್ಷ ಭರತ್ ಧನ್ನಾ ಮಾತನಾಡಿ, ತ್ರಿಪದಿ ಕವಿ ಎಂದೇ ಪ್ರಸಿದ್ಧಿ ಪಡೆದು ಸಮಾನತೆ ಸಮಾಜ ಕಟ್ಟಲು ಬಯಸಿದವರು ಸರ್ವಜ್ಞ ಕವಿ.ಇವರು ಶಾಲೆಯ ಮೆಟ್ಟಿಲು ಹತ್ತಿದವನಲ್ಲ, ಪೋ?ಕರ ಆಶ್ರಯದಿಂದ ವಂಚಿತನಾಗಿ ಅಕ್ಷರ ಜ್ಞಾನದಿಂದ ವಂಚಿತನಾಗಿ ವಿರಾಗಿಯಾಗಿ ದೇಶ ಸಂಚಾರ ಮಾಡಿದರು, ಆದರೂ ಕನ್ನಡ ಸಾಹಿತ್ಯ ಲೋಕದ ಶ್ರೇ? ಸಂತ ಕವಿಗಳಲ್ಲಿ ಸರ್ವಜ್ಞ ಕವಿಗೆ ಮೊದಲ ಸ್ಥಾನವಿದೆ. ತನ್ನ ತ್ರಿಪದಿಗಳಲ್ಲಿ ಜಾನಪದ ಸೊಗಡು, ಸರಳ ನಿರೂಪಣೆ ಹಾಗೂ ಮಾನವ ವಿಶ್ವಮಾನವವಾಗಲು ಅವಶ್ಯವಿರುವ ಅದ್ಭುತ ತ್ರಿಪದಿ ವಚನಗಳ ಗಟ್ಟಿ ಸಾಹಿತ್ಯ ಸಂಪತ್ತು ಕನ್ನಡ ಅಕ್ಷರಲೋಕ ಶ್ರೀಮಂತಗೊಳಿಸಿದ ಶ್ರೇಯಸ್ಸು ಸರ್ವಜ್ಞ ಕವಿಗೆ ಸಲ್ಲುತ್ತದೆ ಎಂದರು.

ಪ್ರಧಾನಿ ಮೋದಿ, ಷಾ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕುಂಬಾರ ಸಮಾಜದ ತಾಲೂಕಾ ಅಧ್ಯಕ್ಷ ತಿಪ್ಪಣ್ಣ ಕುಂಬಾರ, ಕುಂಬಾರ ಸಮಾಜದ ತಾಲೂಕಾ ಪ್ರಧಾನ ಕಾರ್ಯದರ್ಶಿ ಹಣಮಂತ.ಎಸ್.ಕುಂಬಾರ, ಸಿದ್ದಪ್ಪ ಕುಂಬಾರ, ಮರಲಿಂಗ ಯಾದಗಿರಿ ಸೇರಿದಂತೆ ಕುಂಬಾರ ಸಮಾಜದ ಅನೇಕ ಜನರು ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here