ಕಲಬುರಗಿ: ರೈತರು, ದಾನಿಗಳ ದೇಣಿಗೆಯಿಂದ ಸ್ಥಾಪನೆಗೊಂಡಿರುವ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರಸಕ್ತ ಚುನಾವಣೆಯಲ್ಲಿ ಸಂಸ್ಥೆಯನ್ನು ಉಳಿಸಿ ಬೆಳೆಸುವವರಿಗೆ ಆದ್ಯತೆ ನೀಡಿ ಎಂದು ಸಂಸ್ಥೆಯ ಮತದಾರರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ, ರಾಜ್ಯ ಸಂಚಾಲಕ ಮಂಜುನಾಥ ನಾಲವಾರಕರ್ ಮನವಿ ಮಾಡಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಐವರ ಪೈಕಿ ಇಬ್ಬರು ಹೊಸ ಉಮೇದುವಾರರಾಗಿದ್ದು, ಮೂವರು ಈ ಮೊದಲು ಅಧ್ಯಕ್ಷರಾದವರೇ ಇದ್ದಾರೆ. ಸಂಸ್ಥೆಯ ಎಲ್ಲಾ ಮತದಾರರು ಮೂವರ ಆಡಳಿತ ವೈಖರಿ ನೋಡಿದ್ದಾರೆ. ಆದರೆ ಈ ಬಾರಿ ಸಂಸ್ಥೆ ಬೆಳೆಸುವವರಿಗೆ ಪ್ರಾಶಸ್ತ್ಯ ನೀಡುವ ಮೂಲಕ ಸಂಸ್ಥೆಯ ಏಳಿಗೆಗೆ ಬೆಂಬಲಿಸಬೇಕು ಎಂದು ಕೋರಿದ್ದಾರೆ.
ಫೆ. 28ಕ್ಕೆ ಶಾಸಕ ಡಾ. ಅಜಯ್ ಸಿಂಗ್ ಎರಡನೇಯ ಗ್ರಾಮ ವಾಸ್ತವ್ಯ
ಈಗಾಗಲೇ ವಿಧಾನ ಪರಿಷತ್ ಸದಸ್ಯರಾಗಿರುವ ಶಶೀಲ್ ನಮೋಶಿ ಅವರು ಅಧಿಕಾರದ ಹಪಾಹಪಿ ಇನ್ನೂ ಕಡಿಮೆಯಾಗಿಲ್ಲ. ಒಬ್ಬರಿಗೆ ಒಂದೇ ಅಧಿಕಾರ ನೀಡಿದರೆ ಸಂಸ್ಥೆಯ ಏಳಿಗೆ ಸಾಧ್ಯ ಎಂದು ಅಭಿಪ್ರಾಯ ಪಟ್ಟಿರುವ ಅವರು, ಡಾ. ಭೀಮಾಶಂಕರ ಬಿಲಗುಂದಿ ಮತ್ತು ಬಸವರಾಜ ಭೀಮಳ್ಳಿ ಅವರಿಗೆ ಯಾವುದೇ ಅಧಿಕಾರ ಇಲ್ಲ ಈ ಇಬ್ಬರ ಪೈಕಿ ಯಾರಾದರೂ ಅಧ್ಯಕ್ಷರಾದರೆ ಮಾತ್ರ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದಿದ್ದಾರೆ.