ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ

0
104

ಅಫಜಲಪುರ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ಯಲ್ಲಿ ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ .ಇಂದು ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ ಬಿ ಹಾಗೂ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದ ಉದ್ಘಾಟನೆಯನ್ನು ಆಶಾ ಪ್ರಾಚಾರ್ಯರು ಸರಕಾರಿ ಪದವಿ ಪೂರ್ವ   ಮಹಾವಿದ್ಯಾಲಯ ಗೊಬ್ಬುರ ಬಿ ಕಾರ್ಯಕ್ರಮ ನೆರವೇರಿಸಿದರು ಘನ ಅಧ್ಯಕ್ಷ ಸ್ತಾನವನ್ನು ಸೋಮಶೇಖರ್ ಹಂಚಿನಾಳ ವಹಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ತೆಯನ್ನು ಮಲ್ಲಿಕಾರ್ಜುನ ಶಿಂಗೆ ಆರ್ ಕೆಎಸ್ ಕೆ  ಆಪ್ತ ಸಮಾಲೋಚಕರು ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ  ರೂಪರೇಷೆಯ ಬಗ್ಗೆ ತಿಳಿಸಿದ್ದರು ತದನಂತರ ಗೊಬ್ಬುರ ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿತಾಕಾರ್ಯಕ್ರಮದ ಮುಖ್ಯ ಉದ್ದೇಶ ಹದಿಹರೆಯದವರ ವಯಸ್ಸು ತುಂಬಾ ಮಹತ್ವವಾದ ಘಟ್ಟ ವಿದ್ಯಾರ್ಥಿಗಳ ೧೦ ರಿಂದ ೧೯ ವಯಸ್ಸಿನಲ್ಲಿ ದೈಹಿಕ ಬೆಳವಣಿಗೆ ಹಾರ್ಮೋನ್ ಗಳ ಬದಲಾವಣೆ ಸಾಮಾಜಿಕ. ಮಾನಸಿಕ ಬದಲಾವಣೆ.  ಚಿತ್ರಣವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.

Contact Your\'s Advertisement; 9902492681

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ನಂತರ ಆರೋಗ್ಯದ ಮೇಲೆ ಆಗುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಸರಕಾರ ಸೌಲಭ್ಯಗಳಲ್ಲಿ ವಿಪ್ಸ್  ಕಾರ್ಯಕ್ರಮ ಶುಚಿತ್ವ ಅಪೌಷ್ಟಿಕತೆ ದುಷ್ಪರಿಣಾಮಗಳು ಸ್ನೇಹ ಕ್ಲಿನಿಕ್ ಪ್ರಯೋಜನವನ್ನು ಪಡೆಯಲು ಕರೆ ನೀಡಿದರು ಅಲ್ಲದೇ ದುಶ್ಚಟಗಳು ಈ ವಯಸ್ಸಿನಲ್ಲಿ ಬಿಟ್ಟು ಹದಿಹರೆಯದ ಆರೋಗ್ಯ ಕಾಪಾಡುವುದೇ ಇದರ ಉದ್ದೇಶ ಅದಕ್ಕಾಗಿ ಆರ್ ಕೆಎಸ್ ಕೆ ಗುರಿ ಆಗಿದೆ ಎಂದು ತಿಳಿಸಿದರು.

ನಂತರ ವೇದಿಕೆಯ ಮೇಲೆ ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಸುನಿತಾ ಸಮಾಲೋಚಕರು ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾತನಾಡಿ ಹೆಣ್ಣುಮಕ್ಕಳ ಶಿಕ್ಷಣದ ಅವಶ್ಯಕತೆ ಹಾಗೂ ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ ಮಾತನಾಡಿದರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಸಿಬ್ಬಂದಿಗಳು ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ ಗೊಬ್ಬುರ ಬಿ ಪ್ರಿಯಾ ಹಾಗೂ ಅಂಬುಜಾ ನೇತ್ರಾಧಿಕಾರಿ ಗಳಾದ ಸುರೇಶ್ ಬಂಡೇಗರ್ ದೇವಾನಂದ್ ದೊಡಮನಿ ಆಪ್ತಸಮಾಲೋಚಕರು ಗೊಬ್ಬುರ ಬಿ ಭಾಗವಹಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಯಾದಗಿರಿ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ

ಕಾರ್ಯಕ್ರಮದ ನಿರೂಪಣೆಯನ್ನು ಭೀಮಶಂಕರ್ ಸಹ ಶಿಕ್ಷಕರು ಸರಕಾರಿ ಪ್ರೌಢಶಾಲೆ ಗೊಬ್ಬುರ ಬಿ ನೆರವೇರಿಸಿದರು ವಂದನಾರ್ಪಣೆ ದೇವಾನಂದ್ ದೊಡ್ಮನಿ ಆರ್ ಕೆ ಎಸ್ ಕೆ ಆಪ್ತಸಮಾಲೋಚಕರು ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ ಬಿ ವಂದನಾರ್ಪಣೆಯನ್ನು ನಡೆಸಿಕೊಟ್ಟರು ಹೀಗೆ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here