ಸಾರ್ವಜನಿಕರಿಗೆ 108 ಅಂಬುಲೆನ್ಸ್ ಸೇವೆ ಒದಗಿಸಲು ಆಗ್ರಹ

1
28

ಕಲಬುರಗಿ: ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜನರಿಗೆ ಉಪಯೋಗವಾಗಬೇಕಿದ್ದ ೧೦೮ ಅಂಬುಲೆನ್ಸ್‌ಗಳು ಕೆಟ್ಟು ನಿಂತಿದ್ದು,ಇವುಗಳನ್ನು ದುರಸ್ಥಿಗೊಳಿಸಿ ಕೂಡಲೇ ಸಾರ್ವಜನಿಕರ ಅನುಕೂಲಕ್ಕೆ ಬಳಸಬೇಕು ಎಂದು ಆಗ್ರಹಿಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಈ ವಾಹನಗಳು ನಿಂತಲ್ಲೆ ನಿಲ್ಲಿಸಿದ್ದರಿಂದ ಉಪಯೋಗಕ್ಕೆ ಬಾರದಂತೆ ಆಗಿವೆ. ಇದರಿಂದ ಸರಕಾರಕ್ಕೆ ನಷ್ಟವಾಗುತ್ತಿದೆ. ಅಲ್ಲದೇ ಸಾರ್ವಜನಿಕರಿಗೂ ಈ ವಾಹನಗಳ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಈ ಕುರಿತು ಶೀಘ್ರವೇ ಟೆಂಡರ್ ಕರೆದು ವಾಹನಗಳನ್ನು ರಿಪೇರಿಗೊಳಿಸಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಬೆಲೆ ಏರಿಕೆ ಖಂಡಿಸಿ ಮಾ.೪ ರಂದು ಜನಾಂದೋಲನ

ಈ ಕುರಿತು ವಿಳಂಬ ಧೋರಣೆ ತಾಳಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ವೇದಿಕೆ ರಾಜ್ಯಾಧ್ಯಕ್ಷ ಸಚೀನ್ ಫರಹತಾಬಾದ್, ಸುರೇಶ್ ಹನಗುಡಿ, ಅಂಬು ಮಸ್ಕಿ, ಅಕ್ಷಯ್, ರಾಹುಲ್ ಫರಹತಾಬಾದ್,ಅರ್ಜುನ್ ಸಿಂಗೆ, ಸುನೀಲ್ ಜಾಧವ್, ಪ್ರವೀಣ ಸಜ್ಜನ್, ಲಕ್ಷ್ಮಿಕಾಂತ, ಉದಯಕುಮಾರ, ರಾಹುಲ್ ಆಶ್ರಯ ಕಾಲೊನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here