ಕಾಯಕ, ದಾಸೋಹ ಮೌಲ್ಯಗಳ ಸಂಗಮ್ಮವಾಗಿದೆ: ಪ್ರೊ. ಹಲಸೆ

0
31

ಕಲಬುರಗಿ: ’ಶ್ರೀ ಶರಣಬಸವ ಮಹಾದಾಸೋಹ ದರ್ಶನಂ ಮಹಾಕಾವ್ಯ ಕಾಯಕ ದಾಸೋಹ ಮೌಲ್ಯಗಳ ಸಂಗಮ್ಮವಾಗಿದೆ. ಇಂತಹ ಮಹಾಕಾವ್ಯಗಳು ಇನ್ನೂ ಹೆಚ್ಚು ಹೆಚ್ಚು ಹೊರ ಹೊಮ್ಮಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶರಣಪ್ಪ ವ್ಹಿ. ಹಲಸೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ ’ಶ್ರೀ ಶರಣಬಸವ ಮಹಾದಾಸೋಹ ದರ್ಶನಂ ಮಹಾಕಾವ್ಯ ವಿಷಯದ ಕುರಿತು ಎರಡು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನ್ನ, ಅಕ್ಷರ ದಾಸೋಹ ನಡೆಸುತ್ತಿದ್ದ ಪೂಜ್ಯ ಅಪ್ಪಾಜಿಯವರು, ಈ ಸಂಸ್ಥಾನದಲ್ಲಿ ಸೇವೆ ಸಲ್ಲಿಸುವರ ಪತ್ರಿಯೊಬ್ಬರ ಕಲ್ಪನೆಗಳನ್ನು ಎತ್ತರ ಮಟ್ಟಕ್ಕೆ ಕೊಂಡೊಯ್ಯಬಲ್ಲರು. ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಪೂಜ್ಯರು ದೂರ ದೃಷ್ಠಿಕೋನಯುಳ್ಳವರು.ವಿದ್ಯಾರ್ಥಿ ಮತ್ತು ಶಿಕ್ಷರಲ್ಲಿಯ ಕೌಶಲ್ಯಗಳನ್ನು ಗುರುತಿಸಿ, ಕಠಿಣ ಪರಿಶ್ರಮದಿಂದ ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳುವಲ್ಲಿ ಕಾರಣಿಕರ್ತರಾಗಿದ್ದಾರೆ ಎಂದರು.

Contact Your\'s Advertisement; 9902492681

ಬೆಲೆ ಏರಿಕೆ ಖಂಡಿಸಿ ಮಾ.೪ ರಂದು ಜನಾಂದೋಲನ

ದೊಡ್ಡವರ ವಿದ್ವಾಂಸರ, ಮಹಾತ್ಮರ ದರ್ಶನದಿಂದ ನಮ್ಮಲ್ಲಿ ಸಕರಾತ್ಮಕ ಅಂಶಗಳು ವೃದ್ಧಿಗೊಳ್ಳುತ್ತವೆ. ಸಣ್ಣ ಕ್ರಿಮಿಯಂತೆ ಜೀವಿಸುತ್ತಿದ್ದ ವ್ಯಕ್ತಿಗೆ ರಾಜಕುಮಾರನನ್ನಾಗಿ ಪರಿವರ್ತಿಸುವ ಶಕ್ತಿ ಮಹಾತ್ಮರಿಗೆ ಇರುತ್ತದೆ. ಅಂತಹ ಮಹಾತ್ಮರ ಸಾಲಿನಲ್ಲಿ ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪರವರು ಶ್ರೇಷ್ಠ ಶ್ರೇಣಿಯಲ್ಲಿ ನಿಲ್ಲವಂತಹವರಾಗಿದ್ದಾರೆ ಎಂದು ಪ್ರಸಂಶೆ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾದ ಡಾ. ದಯಾನಂದ ಅಗಸರ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಹಿಳಾ ಶಿಕ್ಷಣದ ಮೂಲಗಲ್ಲು ಆಗಿದ್ದ, ಶರಣಬಸವೇಶ್ವರ ಸಂಸ್ಥಾನ ಈಗ ಹೆಮ್ಮರವಾಗಿ ನಿಂತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಮಹಾನ್ ಕ್ರಾಂತಿಯಾಗಿ ನಿಂತಿದೆ ಎಂದರು. ಶ್ರೀ ಶರಣಬಸವೇಶ್ವರ ಸಂಸ್ಥಾನ ಕೇವಲ ಗ್ರಂಥಾಲಯ ಆರಂಭಿಸುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದೆ. ಈ ಶಿಕ್ಷಣ ಸಂಸ್ಥೆಯ ಹೆಸರು ವಿಶ್ವಮಟ್ಟಕ್ಕೆ ಬೆಳೆಯಲ್ಲಿ ಎಂಬ ಆಶಾಭಾವ ವ್ಯಕ್ತಪಡಿಸಿದರು.

ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಸವರಾಜ ದೇಶಮುಖ ಮಾತನಾಡಿ, ಡಾ. ಶಿವರಾಜ ಶಾಸ್ತ್ರೀ ಬರೆದ ’ಶ್ರೀ ಶರಣಬಸ ಮಹಾದಾಸೋಹ ದರ್ಶನಂ ’ಮಹಾಕಾವ್ಯ’ ೨೫ ವರ್ಷಗಳಿಂದ ಪುರಾಣ, ಪ್ರವಚನ ನಡೆಸಿದ್ದರ ಫಲವಾಗಿದೆ. ಶ್ರದ್ಧಾ ಭಕ್ತಿಯಿಂದ ಮಾಡಿದ ಸೇವೆ ಯಾವತ್ತು ನಮ್ಮ ಕೈ ಹಿಡಿಯುತ್ತೆ ಎಂದರು.

ಸಿಎಂ ಯಡಿಯೂರಪ್ಪ ರವರ ಹುಟ್ಟು ಹಬ್ಬ ಆಚರಣೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ವಿ. ನಿಷ್ಠಿ ಮಾತನಾಡಿ, ಸಾಹಿತಿಗಳೊಂದಿಗೆ ನಡೆಸಿದ್ದ ಸಂವಾದ ಚರ್ಚೆ ಪತ್ರಿಯೊಬ್ಬರಿಗೂ ಬರೆಯುವಂತಹ ಹವ್ಯಾಸ ಹುಟ್ಟಿಸುತ್ತದೆ. ಈ ಕಾರ್ಯಕ್ರಮ ನನ್ನ ಮನದಲ್ಲೂ ಹೊಸ ಬರವಣಿಗೆಯ ಆಕಾಂಕ್ಷೆ ಹುಟ್ಟುಹಾಕಿದೆ ಎಂದರು. ಪೂಜ್ಯ ಅಪ್ಪಾಜಿಯವರು ಯಾರೊಬ್ಬರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರೆ ಅವರಲ್ಲಿ ಯಾವದೋ ಒಂದು ಶಕ್ತಿಯಿದೆ ಎಂದು ಅರ್ಥ. ಅಂತಹ ಶಕ್ತಿಯನ್ನು ಗುರುತಿಸುವ ವಿಶೇಷ ಶಕ್ತಿ ಪೂಜ್ಯರಿಗಿದೆ ಎಂದರು.

’ಶ್ರೀ ಶರಣಬಸವ ಮಹಾದಾಸೋಹ ದರ್ಶನಂ’ ’ಮಹಾಕಾವ್ಯ’ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಚ್.ಎಸ್. ರಾಘವೇಂದ್ರರಾವ ವಿಶೇಷ ಉಪನ್ಯಾಸ ನೀಡುತಾ, ನಂಬಿಕೆ, ಕಾಯಕ, ಪ್ರೀತಿ, ಅನ್ನ ದಾಸೋಹಗಳಂತಹ ಮೌಲ್ಯಗಳಿಂದ ಈ ಸಂಸ್ಥಾನ ಹುಟ್ಟಿಕೊಂಡಿದೆ. ಆಧ್ಯಾತ್ಮಿಕತೆ ಒಂದು ಕಡೆಯಾದರೇ, ಆಧುನಿಕತೆ ಮತ್ತೊಂದು ಕಡೆ. ಈ ಎರಡು ಒಂದುಗೂಡಿಸಿ ಸಮಾಜ ಕಟ್ಟುವ ಪ್ರಯತ್ನ ಈ ಸಂಸ್ಥೆಯಲ್ಲಿ ಕಾಣುತ್ತಿದ್ದೇವೆ ಎಂದರು.

ವಿಕಲಚೇತನರು ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗಿ: ಮೀನಾಕ್ಷಿ ಪಾಟೀಲ್

ಕನ್ನಡ ಸಾಹಿತ್ಯದ ಮೊದಲಿಗರು ಉತ್ತರ ಕರ್ನಾಟಕದ ಪ್ರದೇಶದವರಾಗಿದ್ದಾರೆ. ಈ ಭಾಗದ ಸಾಹಿತ್ಯ ಬೇರೆ ಬೇರೆ ಭಾಷೆ ಸಂಸ್ಕೃತಿಗಳ ಸಂಗಮವಾಗಿದೆ ಎಂದರು. ’ಶ್ರೀ ಶರಣಬಸವ ಮಹಾದಾಸೋಹ ದರ್ಶನಂ’ ’ಮಹಾಕಾವ್ಯ’ ಈ ಪ್ರದೇಶದ ಚರಿತ್ರೆಯ್ನು ಪರಿಚಯಿಸುವ ಮಹಾಕಾವ್ಯವಾಗಿದೆ ಎಂದರು. ಪ್ರೊ. ನಾನಾಸಾಹೇಬ ಹಚ್ಚಡದ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ರೇವಯ್ಯವಸ್ತ್ರದ ಮಠ ಪ್ರಾರ್ಥನೆ ಗೀತೆ ಹಾಡಿದರು. ಡಾ. ಶಿವರಾಜ ಶಾಸ್ತ್ರೀ ಹೆರೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಚಿದಾನಂದ ಚಿಕ್ಕಮಠ ವಂದಿಸಿದರು.

ಡಾ.ಎನ್.ಎಸ್.ಪಾಟೀಲ, ಡಾ. ಎಸ್.ಜಿ. ಡೊಳ್ಳೆಗೌಡರ, ಡಾ.ಎಸ್.ಎಸ್.ಪಾಟೀಲ, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನೀಲಾಂಬಿಕಾ ಶೇರಿಕಾರ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸುರೇಶ ನಂದಗಾಂವ ಇದ್ದರು.

ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು: ಚುಟುಕು ಸಾಹಿತಿ ಬೀರಣ್ಣ ಸುರಪುರ

ಕಾರ್ಯಕ್ರಮದ ನಂತರ ಮೊದಲನೇಯ ಗೋಷ್ಠಿ- ’ಶರಣಬಸವೇಶ್ವರ ಪೀಠ ಪರಂಪರೆಗೆ ಶರಣಾರ್ಥಿ’- ಡಾ. ಸೋಮಶಂಕ್ರಯ್ಯ ವಿಶ್ವನಾಥಮಠ, ’ಅರಳಗುಂಡಿಗೆ ಸಂಪುಟಂ’- ಡಾ. ನಿಂಗಮ್ಮ ಪತಂಗೆ, ’ಅವರಾದಿ ಸಂಪುಟಂ’- ಎಂಬ ವಿಷಯದ ಬಗ್ಗೆ ಡಾ.ಮಹಾದೇವ ಬಡಿಗೇರ ವಿಚಾರಮಂಡಿಸಿದರು. ಡಾ.ಎಂ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದರು, ಡಾ. ಸುಮಂಗಲಾ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here