ರಾಜ್ಯ ಹೆದ್ದಾರಿ ತಡೆದು ಎಸ್ಎಫ್ಐ ಪ್ರತಿಭಟನೆ

1
95

ಕಲಬುರಗಿ: ಶಾಹಪೂರ-ಜೇವರ್ಗಿ ಮಧ್ಯದ ಗ್ರಾಮಗಳಲ್ಲಿ ಬಸ್ ನಿಲ್ಲಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಶಾಹಪೂರ-ಜೇವರ್ಗಿ ನಡುವೆ ಬರುವ ಮುದಬಾಳ (ಕೆ), ಕೊಡಚಿ, ವರ್ಚನಹಳ್ಳಿ, ಲಕಣಾಪೂರ, ಖಾದೇಪೂರ, ನೆರಡಗಿ, ಮಾರಡಗಿ, ಮುದಬಾಳ (ಬಿ) ಈ ಎಲ್ಲಾ ಗ್ರಾಮಗಳಿಗೆ ಸಾಮಾನ್ಯ ಬಸ ನಿಲ್ಲುಗಡೆ ಮಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಮೈಲಾರಿ ದೊಡ್ಡಮನಿ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಮೂರು ದಿನದಲ್ಲಿ ತಾಪಮಾನ ಹಠಾತ್ ಏರಿಕೆ

8 ಗ್ರಾಮಗಳಿಂದ 150-200 ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ತಕ್ಕಂತೆ ಸರಿಯಾಗಿ ಹೋಗಲು ಆಗದೆ ಶೈಕ್ಷಣಿಕವಾಗಿ ವ್ಯತ್ಯಯ ಉಂಟಾಗುತ್ತಿದೆ. ಸಣ್ಣ ರೈತರಿಗೆ, ಮಹಿಳೆಯರಿಗೆ, ಅಂಗವೀಕಲರಿಗೆ ಭಾರಿ ತೊಂದರೆಯಾಗುತ್ತಿದೆ. ಶಹಾಪೂರ-ಜೇವರ್ಗಿ ಮಾರ್ಗವಾಗಿ ಚಲಿಸುತ್ತಿರುವ ಸಗರನಾಡು ಬಸ್ಸಗಳು ಸೇರಿದಂತೆ ಎಲ್ಲಾ ರೀತಿಯ ಸಾಮಾನ್ಯ ಬಸ್ಸುಗಳ ಮತ್ತು ವೇಗದೂತ ಬಸ್ಸುಗಳು ನಿಲ್ಲಿಸಲು ನಿರ್ದೇಶನ ನಿಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಸಮಸ್ಯೆ ಪರಿಹಾರ ಸಿಗದಿದ್ದರೆ ಅನಿರ್ದಿಷ್ಟ ಕಾಲ ರಸ್ತೆ ತಡೆ ಚಳುವಳಿ ನಡೆಸುವುದು ಮತ್ತು ಸಾರಿಗೆ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಪ್ರತಿಭಟನೆಯ ವೇಳೆ ಸಾರಿಗೆ ಇಲಾಖೆಯ ವ್ಯವಸ್ಥಾಪ ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಕೊರೋನಾ ಲಸಿಕೆಗೆ ಕೇಂದ್ರ ದರ ನಿಗದಿ: ಉಚಿತ ವಿತರಣೆ ಯಾಕಿಲ್ಲ: ಶಾಸಕ ಖರ್ಗೆ

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗ ಪಾಳಾ, ಪ್ರಭಾಕರ ಈರಪ್ಪ, ಮಲ್ಲಿಕಾರ್ಜುನ ಕಟ್ಟಿಮನಿ, ಜೈಭೀಮ ಕಟ್ಟಿಮನಿ, ರಘುವೀರ ವರ್ಚನಳ್ಳಿ, ಕೈಲಾಸ ಮುದಬಾಳ, ರವಿ ಲಕಣಾಪೂರ, ಗೋಪಾಲ ಕೊಡಚಿ, ಮಲ್ಲಪ್ಪ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here