ಕೊರೋನಾ ಲಸಿಕೆಗೆ ಕೇಂದ್ರ ದರ ನಿಗದಿ: ಉಚಿತ ವಿತರಣೆ ಯಾಕಿಲ್ಲ: ಶಾಸಕ ಖರ್ಗೆ

0
48

ಬೆಂಗಳೂರು/ಕಲಬುರಗಿ: ಅಮೆರಿಕಾ ಸೇರಿದಂತೆ ಬೇರೆ ಬೇರೆ ರಾಷ್ಟ್ರ ಗಳು ತಮ್ಮ ಪ್ರಜೆಗಳಿಗೆ ಕೊರೋನಾ ಲಸಿಕೆ ಉಚಿತವಾಗಿ ಹಂಚುತ್ತಿವೆ. ಆದರೆ, ಭಾರತ ರೂ 500 ರಿಂದ ರೂ 1800 ರವರೆಗೆ ನಿಗದಿ ಮಾಡಿದೆ. ಲಸಿಕೆಯನ್ನು ಉಚಿತವಾಗಿ ಯಾಕೆ ಒದಗಿಸುತ್ತಿಲ್ಲ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿದ್ದಾರೆ.

ಟ್ವಿಟ್ ಮೂಲಕ ಸರ್ಕಾರದ ನಡೆಯನ್ನು ಪ್ರಶ್ನಿಸಿರುವ ಅವರು ಅಮೇರಿಕಾ, ಕೆನಡಾ, ಇಂಗ್ಲೆಂಡ್ ಹಾಗೂ ಪಾಕಿಸ್ಥಾನಗಳಲ್ಲಿ ಕೊರೋನಾಗೆ ಉಚಿತ ಉಸಿಕೆ ಹಂಚುತ್ತಿರುವಾಗ ಭಾರತ ಹಣ ನಿಗದಿಪಿಸಿರುವುದು ಯಾಕೆ ? ಎಂದು ಪ್ರಶ್ನಿಸಿದ್ದಾರೆ. ಪಿ ಎಂ ಕೇರ್ಸ್ ಗೆ ಜನರು ಹಣ ಧಾರೆ ಎರೆದರೂ ಕೂಡಾ ಸರ್ಕಾರ ಲಸಿಕೆಯನ್ನು ಉಚಿತವಾಗಿ ನೀಡುತ್ತಿಲ್ಲ ಎಂದು ಟೀಕಿಸಿದ್ದಾರೆ.

Contact Your\'s Advertisement; 9902492681

ತಾಪಂ ಕಚೇರಿಯ ಮುಂದೆ ಸರದಿ ಉಪವಾಸ ಸತ್ಯಾಗ್ರಹ

ದೇಶಾದ್ಯಂತ ನಡೆದ ಉಚಿತ ಲಸಿಕಾ ಕಾರ್ಯಕ್ರಮದಿಂದಾಗಿ ಇಂದು ದೇಶ ಪೋಲಿಯೋ ಮುಕ್ತವಾಗಿದೆ. ಕೊರೋನಾದಂತಹ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ವಿತರಿಸಬೇಕಿರುವುದು ಅವಶ್ಯಕತೆಯಷ್ಟೇ ಅಲ್ಲ ಅನಿವಾರ್ಯತೆ ಕೂಡಾ ಎಂದು ಪೋಲಿಯೋ ಲಸಿಕೆ ವಿತರಣಾ ವ್ಯವಸ್ಥೆಯನ್ನು ನೆನಪಿಸಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಕೂಡಾ ಅವರಿಗೆ ಹಣ ಸಂಗ್ರಹಿಸಲು ಅನಮತಿ ಕೊಟ್ಟಿರುವ ಔಚಿತ್ಯವನ್ನು ಶಾಸಕರು ಪ್ರಶ್ನಿಸಿದ್ದಾರೆ.

ಪಿ.ಹೆಚ್.ಡಿ. ಫೆಲೋಶೀಪ್‍ಗಾಗಿ ಅರ್ಜಿ ಆಹ್ವಾನ

ಲಸಿಕೆಗೆ ಹಣ ನಿಗದಿಪಡಿಸಿರುವುದು ಲಸಿಕಾ ಅಭಿಯಾನಕ್ಕೆ ಕಂಟಕವಾಗಲಿದೆ ಎಂದು ಎಚ್ಚರಿಸಿರುವ ಶಾಸಕರು, ಈಗಾಗಲೇ ಲಸಿಕೆ ಹಾಕಲು ನಿಗದಿ ಪಡಿಸಿರುವ ಟಾರ್ಗೆಟ್ ನ ಶೇ 50 % ರಷ್ಟನ್ನೂ ಕೂಡಾ ಮುಟ್ಟಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದಿದ್ದಾರೆ.

ಆದ್ದರಿಂದ ಸರ್ಕಾರ ಈ ಕೂಡಲೇ ಲಸಿಕೆಯನ್ನು ಸಂಪೂರ್ಣ ಉಚಿತವಾಗಿ ವಿತರಿಸುವಂತೆ ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here