ನ್ಯಾಯವಾದಿಗಳ ರಕ್ಷಣೆಗಾಗಿ ಕಾನೂನು ರಚಿಸಲು ಆಗ್ರಹ

0
52

ಕಲಬುರಗಿ: ವಿಜಯನಗರ ಹೊಸಪೇಟೆ ಕೋರ್ಟ್ ಆವರಣದಲ್ಲಿ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಪರವಾಗಿ ವಾದ ಮಾಡುವ ವಕೀಲರಿಗೆ ಜೀವದ ಭದ್ರತೆ ಇಲ್ಲದಂತಾಗಿದ್ದು, ವೈದ್ಯರ ರಕ್ಷಣಾ ಕಾಯ್ದೆ ಮಾದರಿಯಲ್ಲೆ ನ್ಯಾಯವಾದಿಗಳ ರಕ್ಷಣೆಗಾಗಿ ಕಾನೂನು ರಚಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ ಶೆಟ್ಟಿ ಬಣ ) ಇಂದು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಒತ್ತಾಯಿಸಿದರು.

ರಾಜ್ಯದಲ್ಲಿರುವ ಎಲ್ಲಾ ನ್ಯಾಯಾಲಯಗಳಲ್ಲಿ ಭದ್ರತೆ ಕಲ್ಪಿಸಬೇಕು ನ್ಯಾಯಾಲಯದ ಒಳಗಡೆ ಬರುವ ಪ್ರತಿಯೊಬ್ಬರಿಗೂ ತಪಾಸಣೆ ಮಾಡಿ ಒಳಗಡೆ ಬಿಡುವ ವ್ಯವಸ್ಥೆ ಆಗಬೇಕು. ತಪಾಸಣೆ ವೇಳೆಯಲ್ಲಿ ಯಾವುದೇ ರೀತಿಯ ಆಯುಧ ಕಂಡುಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಅವರು ಆಗ್ರಹಿಸಿದರು.

Contact Your\'s Advertisement; 9902492681

ರಂಗಂಪೇಟೆ: ಆಕಸ್ಮಿಕ ವಿದ್ಯುತ್ ತಗುಲಿ ಕಾರ್ಮಿಕ ಸಾವು

ಜಿಲ್ಲಾ  ಕಾನೂನು ಘಟಕ ಅಧ್ಯಕ್ಷರಾದ ಸಂಪತ್ ಹಿರೇಮಠ್, ಗೋಪಾಲ್ ನಾಟಿಕರ್ , ಸಂತೋಷ್ ಚೌದ್ರಿ , ಮನೋಹರ್ ಬೀರನೂರ , ವಿಜಯಕುಮಾರ್ ಅಂಕಲಗಿ , ಅನಿಲ್ ಗಾಯಕ್ವಾಡ , ಶಂಭು  ಶರಣು ದ್ಯಾಮಾ, ಸಂತೋಷ ಅಂಕಲಗಿ ಮತ್ತು ಪವನ್ ಸುಲೇಪೇಟ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here