ಸೇಡಂ: ತಾಲೂಕಿನ ಕವಿ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ವತಿಯಿಂದ ಹಿರಿಯ ಜಾನಪದÀ ವಿದ್ವಾಂಸರು ಮತ್ತು ಶರಣ ಸಾಹಿತಿಗಳಾದ ಗೊ.ರು.ಚನ್ನಬಸಪ್ಪ ಅವರ ಬದುಕು ಮತ್ತು ಬರಹ ಕುರಿತು ವಿಚಾರ ಸಂಕಿರಣವನ್ನು ಮಾರ್ಚ್ 7 ರಂದು ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಮಾ.7 ರಂದು ಬೆಳಿಗ್ಗೆ 11 ಕ್ಕೆ ಕವಿ ಕೆರಳ್ಳಿ ಗುರುನಾಥರೆಡ್ಡಿ ಅವರ 24 ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿರುವ ಈ ವಿಚಾರ ಸಂಕಿರಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮಿಗಳು ಸಾನಿಧ್ಯ ವಹಿಸುವರು.
ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮದಿನಾಚರಣೆ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣಿ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಗೊ.ರು.ಚನ್ನಬಸಪ್ಪ ಅವರ ಸುಪುತ್ರಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ವಿಕಾಸಕರಾದ ಮುಕ್ತಾ ಕಾಗಲಿ ಬೆಂಗಳೂರು ಅವರು ಗೊರುಚ ಅವರ ಬದುಕಿನ ಕುರಿತು ಮಾತನಾಡುವರು.
ನ್ಯಾಯವಾದಿಗಳ ರಕ್ಷಣೆಗಾಗಿ ಕಾನೂನು ರಚಿಸಲು ಆಗ್ರಹ
ಕಲಬುರಗಿಯ ಸಿದ್ಧಾರ್ಥ ಪಿಯು ಕಾಲೇಜಿನ ಉಪನ್ಯಾಸಕಿ ಮತ್ತು ಗೊರುಚ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಡಾ.ರೇಣುಕಾದೇವಿ ಎಸ್.ಮಹಾಜನಮಠ, ಗೊರುಚ ಅವರ ಬರಹ ಕುರಿತು ಮಾತನಾಡುವರು.
ಇದೇ ಸಂದರ್ಭದಲ್ಲಿ ಕಲಬುರಗಿಯ ಎನ್.ವಿ. ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿದ್ದ ನಾರಾಯಣರೆಡ್ಡಿ ರಾಘಾಪುರ (ಕೆರಳ್ಳಿ ಗುರುನಾಥರೆಡ್ಡಿ ಅವರ ಅಳಿಯ) ಅವರನ್ನು ಸತ್ಕರಿಸಲಾಗುವುದು. ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಅಧ್ಯಕ್ಷತೆ ವಹಿಸುವರು ಎಂದು ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.